ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಜನಪ್ರಿಯ ನಟಿಯರಲ್ಲಿ ಒಬ್ಬರು. ಇದೀಗ ಅವರು ನಿರ್ಮಾಣ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಂಗನಾ ಕಳೆದ ಕೆಲವು ದಿನಗಳಿಂದ 'ಟಿಕು ವೆಡ್ಸ್ ಶೇರು' ಚಿತ್ರದ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಕಂಗನಾ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.
'ಟಿಕು ವೆಡ್ಸ್ ಶೇರು'ಚಿತ್ರದ ಫೋಟೋಗಳನ್ನು ಹಂಚಿಕೊಂಡ ಬಾಲಿವುಡ್ ಕ್ವೀನ್ ಕಂಗನಾ ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸೋಮವಾರ ಕಂಗಾನ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ತಾನು ನಿರ್ಮಿಸುತ್ತಿರುವ ಮೊದಲ ಸಿನಿಮಾ 'ಟಿಕು ವೆಡ್ಸ್ ಶೇರು' ಚಿತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಂಗನಾ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಟರಾದ ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರವನ್ನು ಸಾಯಿ ಕಬೀರ್ ನಿರ್ದೇಶಿಸಲಿದ್ದು, ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.
'ಟಿಕು ವೆಡ್ಸ್ ಶೇರು' ನವಾಜುದ್ದೀನ್ ಸಿದ್ದಿಕಿ ಜತೆ ಚೊಚ್ಚಲ ಸಿನಿಮಾ. ಕಂಗನಾ ಅವರ ಹೋಮ್ ಪ್ರೊಡಕ್ಷನ್, ಮಣಿಕರ್ಣಿಕಾ ಫಿಲಂಸ್ ನಿರ್ಮಿಸಿರುವ ಈ ಚಿತ್ರವು ಈ ವರ್ಷ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ನಿರ್ಮಾಪಕಿಯಾಗಿ ಡಿಜಿಟಲ್ ರಂಗ ಪ್ರವೇಶಿಸಲಿದ್ದಾರೆ ಕಂಗನಾ