ಬಾಲಿವುಡ್ ನಟಿ ಕಂಗನಾ ರಣಾವತ್ ಎಷ್ಟೇ ದೊಡ್ಡ ನಟಿ ಆದರೂ ಬಹಳ ಸರಳ ವ್ಯಕ್ತಿತ್ವದವರು. ಯಾರಿಗಾದರೂ ತೊಂದರೆ ಆದಲ್ಲಿ ಅನ್ಯಾಯದ ವಿರುದ್ಧ ತಲೆ ಎತ್ತುವ ಸಹೃದಯಿ. ಸಿನಿಮಾ, ವಿವಾದಗಳ ಜಂಜಾಟದಿಂದ ದೂರ ಉಳಿದು ಸಹೋದರನ ಮದುವೆಯಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ.
ಸೋದರ ಸಂಬಂಧಿ ಮದುವೆಯಲ್ಲಿ ಸಾಂಪ್ರದಾಯಿಕ ಧಿರಿಸು ತೊಟ್ಟು ಡ್ಯಾನ್ಸ್ ಮಾಡಿದ ಕಂಗನಾ - Kangana dance for traditional song
ಬಾಲಿವುಡ್ ನಟಿ ಕಂಗನಾ ರಣಾವತ್ ಸೀರೆ, ಪೇಟ ಧರಿಸಿ ಸಾಂಪ್ರದಾಯಿಕ ಉಡುಪಿನಲ್ಲಿ ಸೋದರ ಸಂಬಂಧಿಯೊಬ್ಬರ ಮದುವೆಯಲ್ಲಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು ಕ್ವೀನ್ ನಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಂಗನಾ ರಣಾವತ್ ಮೂಲತ: ಹಿಮಾಚಲ ಪ್ರದೇಶಕ್ಕೆ ಸೇರಿದವರು. ತಮ್ಮ ಸೋದರ ಸಂಬಂಧಿಯೊಬ್ಬರ ಮದುವೆಯಲ್ಲಿ ಭಾಗವಹಿಸಿದ್ದ ಕಂಗನಾ, ಸೀರೆ ಉಟ್ಟು, ತಲೆಗೆ ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಪೇಟ ಧರಿಸಿ ತಮ್ಮ ಕುಟುಂಬದವರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಇದು ಯಾವುದೋ ಸಿನಿಮಾ ಹಾಡಲ್ಲ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭದಲ್ಲಿ ಡೋಲಿನ ಜೊತೆ ಹಾಡಲಾಗುವ ಹಾಡಿಗೆ ಕಂಗನಾ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಕಂಗನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ವಿಡಿಯೋ ನೋಡಿ ಕಂಗನಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ಜೊತೆಗೆ ನವದಂಪತಿ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನು ಕೂಡಾ ಕಂಗನಾ ಹಂಚಿಕೊಂಡಿದ್ದಾರೆ.