ಹೈದರಾಬಾದ್(ತೆಲಂಗಾಣ) : ನಟಿ ಕಂಗನಾ ರಣಾವತ್ ಇದೇ ಮೊದಲ ಬಾರಿಗೆ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. 'ಮಣಿಕರ್ಣಿಕಾ ಫಿಲ್ಮ್ಸ್' ನಿರ್ಮಾಣ ಸಂಸ್ಥೆ ಆರಂಭಿಸಿರುವ ಕಂಗನಾ ರಣಾವತ್ ಅವರು, 'ಟಿಕು ವೆಡ್ಸ್ ಶೇರು' ಚಿತ್ರಕ್ಕೆ ನಿರ್ಮಾಪಕಿ ಆಗಿದ್ದಾರೆ.
ಈ ಸಿನಿಮಾದಲ್ಲಿ ನಾಯಕ ನವಾಜುದ್ದೀನ್ ಸಿದ್ದಿಖಿ ಅವರಿಗೆ ಜೋಡಿಯಾಗಿ ಅವನೀತ್ ಕೌರ್ ಅಭಿನಯಿಸಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಕೆಲವು ಪೋಸ್ಟರ್ಗಳ ಮೂಲಕ ಗಮನ ಸೆಳೆಯಲಾಗಿದೆ. ಆದರೆ, ಈ ಸಿನಿಮಾದಲ್ಲಿ ಹೀರೋ ಮತ್ತು ಹೀರೋಯಿನ್ ವಯಸ್ಸಿನ ನಡುವೆ ಬರೋಬ್ಬರಿ 27 ವರ್ಷಗಳ ಅಂತರ ಇದೆ. ಅದಕ್ಕೆ ಕಂಗನಾ ರಣಾವತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನವಾಜುದ್ದೀನ್ ಸಿದ್ದಿಖಿ ಅವರಿಗೆ ಈಗ 47 ವರ್ಷ. ಅವರಿಗೆ ಜೋಡಿ ಆಗಿರುವ ಅವನೀತ್ ಕೌರ್ ಅವರಿಗೆ ಈಗಿನ್ನೂ 20 ವರ್ಷ. ಇವರಿಬ್ಬರನ್ನು ಜೋಡಿ ಮಾಡುವುದು ಸೂಕ್ತವಲ್ಲ ಎಂದು ಕೆಲವರು ಕಂಗನಾಗೆ ಬುದ್ಧಿ ಮಾತು ಹೇಳಿದ್ದರು. ಆದರೆ, ಅದನ್ನು ಕಂಗನಾ ಕೇಳಿಲ್ಲ. ನಿರ್ಮಾಪಕಿಯಾಗಿ ತಮ್ಮ ಸಿನಿಮಾದ ಕಲಾವಿದರ ಆಯ್ಕೆಯನ್ನು ಅವರು ಸಮರ್ಥಿಸಿದ್ದಾರೆ. ಅದಕ್ಕೆ ಅವರು ಸೂಕ್ತ ಕಾರಣವನ್ನೂ ನೀಡಿದ್ದಾರೆ.