ಮುಂಬೈ :ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿ ತೆರವುಗೊಳಿಸಲು ಆದೇಶಿಸಿದ ಶಿವಸೇನಾ ಸಂಸದ ಸಂಜಯ್ ರೌತ್ ಮತ್ತು ಅಧಿಕಾರಿಯನ್ನು ಈ ಪ್ರಕರಣದಲ್ಲಿ ಸೇರಿಸಲು ಬಾಂಬೆ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಬಿಎಂಸಿ ವಿರುದ್ಧದ ಮನವಿಯಲ್ಲಿ ಸಂಜಯ್ ರೌತ್ ಸೇರಿಸಲು ಹೈಕೋರ್ಟ್ ಅನುಮತಿ - ಬಾಂಬೆ ಹೈ ಕೋರ್ಟ್ ಸುದ್ದಿ
ರಣಾವತ್ ಅವರು ಕಾನೂನುಬಾಹಿರ ಕಟ್ಟಡ ಕಟ್ಟಿದ್ದಾರೆ ಎಂದು ನಿಗಮವು ಈ ಹಿಂದೆ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಅವರ ಆರೋಪಗಳು "ಆಧಾರರಹಿತ" ಎಂದು ಹೇಳಿದೆ..
ನ್ಯಾಯಮೂರ್ತಿ ಎಸ್ ಜೆ ಕಥಾವಾಲಾ ಮತ್ತು ನ್ಯಾಯಮೂರ್ತಿ ಆರ್ ಐ ಚಾಗ್ಲಾ ಅವರ ವಿಭಾಗೀಯ ಪೀಠವು ಈ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಕಚೇರಿ ನೆಲಸಮಗೊಳಿಸುವ ಕುರಿತು ಕಂಗನಾ ರಣಾವತ್ ಮಾಡಿದ ಮನವಿ ಪರಿಗಣಿಸದೇ ಇರುವುದು ಮತ್ತು 2 ಕೋಟಿ ರೂ.ಗಳ ನಷ್ಟ ನೀಡಬೇಕೆಂಬ ಕಂಗನಾ ಬೇಡಿಕೆಗೆ ಸಂಬಂಧಿಸಿ, ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಮತ್ತೊಂದು ಅಫಿಡವಿಟ್ ಸಲ್ಲಿಸಿತ್ತು.
ರಣಾವತ್ ಅವರು ಕಾನೂನುಬಾಹಿರ ಕಟ್ಟಡ ಕಟ್ಟಿದ್ದಾರೆ ಎಂದು ನಿಗಮವು ಈ ಹಿಂದೆ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಅವರ ಆರೋಪಗಳು "ಆಧಾರರಹಿತ" ಎಂದು ಹೇಳಿದೆ.
TAGGED:
kangana ranaut latest news