ಹೈದರಾಬಾದ್: ಕೂಲ್ ಮತ್ತು ಹಿಪ್-ಹಾಪ್ ರ‍್ಯಾಪರ್, ಗಲ್ಲಿ ಬಾಯ್ ಖ್ಯಾತಿಯ ಧರ್ಮೇಶ್ ಪರ್ಮಾರ್ ನಿಧನರಾಗಿದ್ದಾರೆ. ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಧರ್ಮೇಶ್ ಅವರ ಹಠಾತ್ ನಿಧನಕ್ಕೆ ಬಾಲಿವುಡ್ ತಾರೆಯರು ಸಂತಾಪ ಸೂಚಿಸಿದ್ದಾರೆ.
ರ‍್ಯಾಪರ್ ಧರ್ಮೇಶ್ ಪರ್ಮಾರ್ ಅವರ ಸಾವಿನ ಬಗ್ಗೆ ಸ್ವದೇಸಿ ಲೇಬಲ್ ಆಜಾದಿ ರೆಕಾರ್ಡ್ಸ್ ಮತ್ತು ಮ್ಯಾನೇಜ್ಮೆಂಟ್ ಕಂಪನಿ 4/4 ಎಂಟರ್ಟೈನ್ಮೆಂಟ್ ಖಚಿತಪಡಿಸಿದೆ. ಬಾಲಿವುಡ್ ನಟರಾದ ರಣವೀರ್ ಸಿಂಗ್, ಸಿದ್ಧಾಂತ್ ಚತುರ್ವೇದಿ ಮತ್ತು ನಿರ್ಮಾಪಕ ಜೋಯಾ ಅಖ್ತರ್ ಸಂತಾಪ ಸೂಚಿಸಿದ್ದಾರೆ.
ರ‍್ಯಾಪರ್ ಧರ್ಮೇಶ್ ಪರ್ಮಾರ್ ಗಲ್ಲಿ ಬಾಯ್ನ ಇಂಡಿಯಾ 91 ಹಾಡಿಗೆ ಧರ್ಮೇಶ್ ತಮ್ಮ ಧ್ವನಿ ನೀಡಿದ್ದರು. ಕೂಲ್ ಮತ್ತು ಹಿಪ್-ಹಾಪ್ ಹಾಡುಗಳ ಮೂಲಕ ಜನರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದರು. ಅವರ ಸಾವು ಬಹಳ ನೋವು ತರಿಸಿದೆ ಎಂದು ರಣವೀರ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ರ‍್ಯಾಪರ್ ಧರ್ಮೇಶ್ ಪರ್ಮಾರ್ ಧರ್ಮೇಶ್ ಪರ್ಮಾರ್ ಮೂಲತಃ ಮುಂಬೈನ ಚಾಲ್‌ನಲ್ಲಿ ವಾಸಿಯಾಗಿದ್ದರು. ಬಾಲ್ಯದಿಂದಲೇ ರ‍್ಯಾಪ್ ಹಾಡುಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ನಿಂತ ಜಾಗಲ್ಲೇ ಪದಗಳನ್ನು ಕಟ್ಟಿ ಹಾಡುತ್ತಿದ್ದ ಓರ್ವ ಪ್ರತಿಭಾವಂತ. ಜನರ ಆಲೋಚನೆಗಳನ್ನೇ ಹಾಡುಗಳಲ್ಲಿ ಹೇಳುತ್ತಿದ್ದರು.
ರ‍್ಯಾಪರ್ ಧರ್ಮೇಶ್ ಪರ್ಮಾರ್ ಹಾಗಾಗಿ ಅವರನ್ನು ಕ್ರಾಂತಿಕಾರಿ ರ‍್ಯಾಪರ್ ಎಂದು ಕರೆಯುತ್ತಿದ್ದರು. ರಾಜೀವ್ ದೀಕ್ಷಿತ್ ಎಂದರೆ ಅವರಿಗೆ ಆರಾಧ್ಯ ದೈವರಾಗಿದ್ದರಂತೆ. ಇತ್ತೀಚಿನ ಅವರ ರ‍್ಯಾಪ ವಿಡಿಯೋ ಜಾಲತಾಣದಲ್ಲಿ ವೀರಲ್ ಆಗುತ್ತಿವೆ. ರಸ್ತೆ ಅಪಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ರ‍್ಯಾಪರ್ ಧರ್ಮೇಶ್ ಪರ್ಮಾರ್ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದ ಗಲ್ಲಿ ಬಾಯ್ಆಗ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಸ್ಟ್ರೀಟ್ ರ‍್ಯಾಪರ್ ಪಾತ್ರದಲ್ಲಿ ರಣವೀರ್ ಸಿಂಗ್ ಮಿಂಚಿದ್ದರು. ರಣವೀರ್ ಗುರು ಆಗಿ ಸಿದ್ಧಾಂತ್ ಚತುರ್ವೇದಿ ಕಾಣಿಸಿಕೊಂಡಿದ್ದರು. ಅಲಿಯಾ ಭಟ್, ಕಲ್ಕಿ ಕೊಚ್ಚಿನ್, ವಿಜಯ್ ವರ್ಮಾ ನಟಿಸಿದ್ದಾರೆ.