ಕರ್ನಾಟಕ

karnataka

ETV Bharat / sitara

'ಸಂಗೀತ'ವಿಲ್ಲದಿದ್ರೆ ನನ್ನ ಜೀವನ ಅಪೂರ್ಣ, ನಿನಗೆ ಧನ್ಯವಾದ ಎಂದ ಪದ್ಮಾವತ್​ ಬೆಡಗಿ ದೀಪಿಕಾ..

ಹಾಡುಗಳಿಗೆ, ಅವು ತರುತ್ತಿರುವ ಸಂತೋಷಕ್ಕೆ ಧನ್ಯವಾದಗಳು ಎಂದಿದ್ದಾರೆ. ಸಂಗೀತ, ನೃತ್ಯ ಅಥವಾ ಹಾಡುಗಳೇ ಇಲ್ಲದೇ ಯಾರು ಜೀವನ ಮಾಡಲು ಸಾಧ್ಯ? ಅದಿಲ್ಲದೆ ಯಾರು ಬದುಕಬಲ್ಲರು?ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಎಂದು ಕ್ಯಾಪ್ಶನ್​ನಲ್ಲಿ ಬರೆದುಕೊಂಡಿದ್ದಾರೆ.

deepika-padukone-thanks-music-for-bringing-joy-in-life
ದೀಪಿಕಾ

By

Published : May 6, 2020, 5:09 PM IST

ನವದೆಹಲಿ :ಕೊರೊನಾ ಲಾಕ್​ಡೌನ್ ಬೇಸರವನ್ನು ದೂರ ಮಾಡುತ್ತಿರುವ 'ಸಂಗೀತ'ಕ್ಕೆ ಪದ್ಮಾವತ್​ ಬೆಡಗಿ ದೀಪಿಕಾ ಪಡುಕೋಣೆ ಧನ್ಯವಾದ ಅರ್ಪಿಸಿದ್ದಾರೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪಿಯಾನೋವೊಂದರ ಫೋಟೋ ಪೋಸ್ಟ್​ ಮಾಡಿರುವ ಡಿಪ್ಪಿ ತಮ್ಮ ಜೀವನದ ಖುಷಿಗೆ ಕಾರಣವಾಗಿರುವ ಸಂಗೀತಕ್ಕೆ 'ಥ್ಯಾಂಕ್ಯೂ ಮ್ಯೂಸಿಕ್' ಅಂತಾ ಶೀರ್ಷಿಕೆ ನೀಡಿದ್ದಾರೆ.

ಸಂಗೀತವಿಲ್ಲದಿದ್ದರೆ ನನ್ನ ಜೀವನವೇ ಅಪೂರ್ಣವೆಂದಿರುವ ದೀಪಿಕಾ, ಮ್ಯೂಸಿಕ್‌ಗೆ ಧನ್ಯವಾದ ಹೇಳಿದ್ದಾರೆ. ಹಾಡುಗಳಿಗೆ, ಅವು ತರುತ್ತಿರುವ ಸಂತೋಷಕ್ಕೆ ಧನ್ಯವಾದಗಳು ಎಂದಿದ್ದಾರೆ. ಸಂಗೀತ, ನೃತ್ಯ ಅಥವಾ ಹಾಡುಗಳೇ ಇಲ್ಲದೇ ಯಾರು ಜೀವನ ಮಾಡಲು ಸಾಧ್ಯ? ಅದಿಲ್ಲದೆ ಯಾರು ಬದುಕಬಲ್ಲರು?ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಎಂದು ಕ್ಯಾಪ್ಶನ್​ನಲ್ಲಿ ಬರೆದುಕೊಂಡಿದ್ದಾರೆ.

ಲಾಕ್​ಡೌನ್​ನಿಂದ ಶೂಟಿಂಗ್​​ ಇಲ್ಲದೇ ಮನೆಯಲ್ಲೇ ಇರುವ ದೀಪಿಕಾ ಲಾಕ್​​ಡೌನ್​ ಆದಾಗಿಂದ ಇನ್ಸ್​​ಸ್ಟಾಗ್ರಾಮ್‌ದಲ್ಲಿ ಸಖತ್​​ ಇಂಟ್ರೆಸ್ಟಿಂಗ್​ ಪೋಸ್ಟ್​​ಗಳನ್ನು ಹಾಕುತ್ತಿದ್ದಾರೆ. ಆ ಮೂಲಕ ಲಾಕ್​​ಡೌನ್​ ದಿನಗಳಲ್ಲೂ ಹೆಚ್ಚು ಖುಷಿಯ ಕ್ಷಣಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ABOUT THE AUTHOR

...view details