ಕರ್ನಾಟಕ

karnataka

ETV Bharat / sitara

ಕಂಗನಾ ಮುಂಬೈ ಕಚೇರಿ ನೆಲಸಮ ಪ್ರಕರಣ: ಅ.5ಕ್ಕೆ ವಿಚಾರಣೆ ಮುಂದೂಡಿಕೆ - ಕಂಗಾನ ರಣಾವತ್‌ ಮುಂಬೈ ಕಚೇರಿ ನೆಲಸಮ ಪ್ರಕರಣ

ನಟಿ ಕಂಗನಾ ರಣಾವತ್‌ ಮುಂಬೈ ಕಚೇರಿ ನೆಲಸಮ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ ಅಕ್ಟೋಬರ್‌ 5ಕ್ಕೆ ಮುಂದೂಡಿದೆ.

Bombay High Court adjourns Kangana Ranaut property demolition case till Oct 5
ನಟಿ ಕಂಗಾನ ಮುಂಬೈ ಕಚೇರಿ ನೆಲಸಮ ಪ್ರಕರಣ; ಅ.5ಕ್ಕೆ ವಿಚಾರಣೆ ಮುಂದೂಡಿಕೆ

By

Published : Sep 29, 2020, 7:45 PM IST

Updated : Sep 29, 2020, 11:28 PM IST

ಮುಂಬೈ: ಬೃಹನ್‌ಮುಂಬೈ ಮಹಾನಗರ ಪಾಲಿಕೆ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರ ಕಚೇರಿ ನೆಲಸಮ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ ಅಕ್ಟೋಬರ್‌ 5ಕ್ಕೆ ಮುಂದೂಡಿಕೆ ಮಾಡಿದೆ. ಅಕ್ಟೋಬರ್‌ 5 ರಂದು ಲಿಖಿತ ದಾಖಲೆ ಸಲ್ಲಿಸುವಂತೆ ಕೋರ್ಟ್‌ ಪ್ರಕರಣದ ಎರಡೂ ಕಡೆಯವರಿಗೆ ಸೂಚಿಸಿದೆ. ಆ ಬಳಿಕ ವಾದ, ಪ್ರತಿವಾದ ಆಲಿಸುವುದಾಗಿ ತಿಳಿಸಿದೆ.

ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿ ನಟಿ ಕಂಗನಾ ರಣಾವತ್‌ ಟ್ವೀಟ್‌ ಮಾಡಿದ್ದರು. ಈಕೆಗೆ ತಕ್ಕ ಪಾಠ ಕಲಿಸಬೇಕು ಎಂದು ಶಿವಸೇನಾ ನಾಯಕ ಸಂಜಯ್‌ ರಾವತ್‌, ರಣಾವತ್‌ಗೆ ಬೆದರಿಕೆ ಹಾಕಿದ್ದ ಆರೋಪ ಕೇಳಿಬಂದಿತ್ತು. ರಾವತ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ವಿಚಾರಣೆ ವೇಳೆ ಕೋರ್ಟ್‌ಗೆ ಕಂಗನಾ ಪರ ವಕೀಲರು ಸಲ್ಲಿಸಿದ್ದರು.

ರಾವತ್‌ ಮಾತನಾಡಿರುವ ಆಡಿಯೋದಲ್ಲಿ ಕಂಗನಾ ಅವರ ಹೆಸರು ಪ್ರಸ್ತಾಪ ಮಾಡಿಲ್ಲ ಎಂದು ಸಂಜಯ್‌ ರಾವತ್‌ ಪರ ವಕೀಲರು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಮುಂಬೈನ ಬಾಂದ್ರಾದಲ್ಲಿರುವ ರಣಾವತ್‌ ಅವರ ಕಚೇರಿಯನ್ನು ನೆಲಸಮ ಮಾಡಿದ ಬಿಎಂಸಿ ವಿರುದ್ಧ ಬಾಲಿವುಡ್ ನಟಿ ಕಂಗನಾ‌ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Last Updated : Sep 29, 2020, 11:28 PM IST

ABOUT THE AUTHOR

...view details