ಕರ್ನಾಟಕ

karnataka

ETV Bharat / sitara

’ರೂಮ್​ಗೆ ಹೋಗೋಣ ಬಾ’ ಎಂದ ನಿರ್ದೇಶಕನಿಗೆ ವಿದ್ಯಾಬಾಲನ್ ಮಾಡಿದ್ದೇನು? - ಕಾಸ್ಟಿಂಗ್ ಕೌಚ್​

ಚಿತ್ರರಂಗದಲ್ಲಿ ಅವಕಾಶ ಪಡೆಯಬೇಕಂದ್ರೆ ಕಾಂಪ್ರಮೈಸ್ ಆಗಲೇಬೇಕು ಎನ್ನುವ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಇದಕ್ಕೆ ಕಾಸ್ಟಿಂಗ್ ಕೌಚ್ ಎನ್ನಲಾಗುತ್ತೆ. ಈ ಬಗ್ಗೆ ಈಗಾಗಲೇ ಸಾಕಷ್ಟು ನಟಿಯರು ಧ್ವನಿ ಎತ್ತಿದ್ದಾರೆ. ಈಗ ಬಾಲಿವುಡ್ ನಟಿ ವಿದ್ಯಾಬಾಲನ್ ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ದಾರೆ.

Vidya Balan

By

Published : Aug 27, 2019, 10:41 AM IST

ಬಾಲಿವುಡ್ ನಟಿ ವಿದ್ಯಾಬಾಲನ್ ಕಾಸ್ಟಿಂಗ್ ಕೌಚ್​ ಬಗ್ಗೆ ಮಾತಾಡಿದ್ದಾರೆ. ತಮ್ಮ ಜತೆ ನಿರ್ದೇಶಕನೊಬ್ಬ ನಡೆದುಕೊಂಡ ಬಗೆ ಬಿಚ್ಚಿಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಸೌತ್ ಸಿನಿಮಾ ನಿರ್ದೇಶಕನ ಅಸಲಿಯತ್ತು ರಿವೀಲ್ ಮಾಡಿದ್ದಾರೆ ವಿದ್ಯಾಬಾಲನ್. ಅಂದು ಚೆನ್ನೈನಲ್ಲಿ ನಿರ್ದೇಶಕ ಒಬ್ಬ ನನ್ನನ್ನು ಮೀಟ್ ಮಾಡಲು ಬಂದರು. ಕಾಫಿ ಶಾಪ್‌ನಲ್ಲಿ ಕುಳಿತು ಮಾತನಾಡೋಣ ಎಂದು ಹೇಳಿದೆ. ಅದಕ್ಕೆ ಅವರು ಬೇಡ ನಿಮ್ಮ ರೂಮ್​​ಗೆ ಹೋಗೋಣ ಎಂದರು. ಅಲ್ಲದೆ ನನ್ನನ್ನು ಒತ್ತಾಯ ಮಾಡಿದರು. ಆತನ ವರ್ತನೆ ನನಗೆ ಸರಿ ಕಾಣಲಿಲ್ಲ. ಕೋಪ ನೆತ್ತಿಗೇರುತ್ತಿತ್ತು. ನಾನು ಬಾಗಿಲನ್ನು ತೆರೆದು ಇಲ್ಲಿಂದ ತೊಲಗುವಂತೆ ಸೂಚಿಸಿದೆ. ಆತನ ಮುಖದ ಚರ್ಯೆ ಬದಲಾಯಿತು. ಅಲ್ಲಿಂದ ಹೊರಟು ಹೋದ.

ನಿರ್ದೇಶಕರು - ನಿರ್ಮಾಪಕರು ಬೇಡಿಕೆಗೆ ಸ್ಪಂದಿಸಿಲ್ಲ ಎನ್ನುವ ಕಾರಣಕ್ಕೆ ಸಾಕಷ್ಟು ಚಿತ್ರಗಳು ನನ್ನ ಕೈ ಬಿಟ್ಟು ಹೋದವು. ನನ್ನ ಬದಲಾಗಿ ಬೇರೆ ನಟಿಯರನ್ನು ಹಾಕಿಕೊಳ್ಳಲಾಯಿತು ಎಂದು ಕಾಸ್ಟಿಂಗ್ ಕೌಚ್​ನ ಕರಾಳ ಮುಖ ಬಿಚ್ಚಿಟ್ಟಿದ್ದಾರೆ ವಿದ್ಯಾ ಬಾಲನ್​.

ಇನ್ನು ವಿದ್ಯಾಬಾಲನ್ ನಟಿಸಿರುವ ಮಿಷನ್ ಮಂಗಳ ಸಿನಿಮಾ ಭರ್ಜರಿ ಯಶಸ್ವಿ ಕಾಣುತ್ತಿದೆ. ಇದೇ ಆಗಸ್ಟ್ 15 ರಂದು ಬಿಡುಗಡೆಯಾಗಿರುವ ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ನಟಿಸಿದ್ದಾರೆ.

ABOUT THE AUTHOR

...view details