ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೊರೊನಾ ಸೋಂಕಿಗೆ ಒಳಗಾಗಿದ್ದು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಅಮಿತಾಬ್ ಬಚ್ಚನ್, ತಮ್ಮ ತಂದೆ ಹರಿವಂಶರಾಯ್ ಬರೆದಿರುವ ಕವಿತೆಯೊಂದರನ್ನು ಕೊರೊನಾ ವಾರಿಯರ್ಸ್ಗೆ ಅರ್ಪಿಸಿದ್ದಾರೆ.
ತಂದೆ ಬರೆದ ಕವಿತೆಯನ್ನು ಕೊರೊನಾ ವಾರಿಯರ್ಸ್ಗೆ ಅರ್ಪಿಸಿದ ಬಿಗ್ ಬಿ - ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಿಗ್ ಬಿ
ಮುಂಬೈನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಪೆನ್ಸಿಲ್ ಸ್ಕೆಚ್ ಜೊತೆಯಲ್ಲಿ ತಮ್ಮ ತಂದೆ ಹರಿವಂಶರಾಯ್ ಬರೆದಿರುವ ಕವಿತೆಯೊಂದನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
'ತಂದೆ ನುಡಿಮುತ್ತುಗಳು ಇವು, ಇದು ಹಗಲು ರಾತ್ರಿ ಎನ್ನದೆ ದಣಿವರಿಯದೆ ದುಡಿಯುತ್ತಿರುವವರಿಗೆ, ನಿಸ್ವಾರ್ಥ ಕೆಲಸ ಮಾಡುತ್ತಿರುವವರಿಗೆ' ಎಂಬ ಸಾಲಿನ ಮೂಲಕ ಈ ಕವಿತೆಯನ್ನು ಆರಂಭಿಸಿದ್ದಾರೆ. 'ತಮ್ಮ ಬೆನ್ನನ್ನು ಬಾಗಿಸದೆ ತಲೆ ಎತ್ತಿ ನಿಂತಿರುವವರ ಜೊತೆ ನಾನು ನಿಂತಿದ್ದೇನೆ. ಅವರು ಒಂಟಿಯಾಗಿದ್ದರೂ ಕೂಡಾ , ಅವರೊಂದಿಗೆ ಯಾರಾದರೂ ಜೊತೆಗಿದ್ದರೂ ಕೂಡಾ ಅನ್ಯಾಯಕ್ಕೆ ಎಂದೂ ತಲೆ ಬಾಗದವರು ಅವರು' ಎಂದು ಅಮಿತಾಬ್ ಬರೆದುಕೊಂಡಿದ್ದಾರೆ. ಈ ಕವಿತೆಯೊಂದಿಗೆ ಅಮಿತಾಬ್, ತಾವೇ ಬರೆದ ಎರಡು ಪೆನ್ಸಿಲ್ ಸ್ಕೆಚ್ ಕೊಲಾಜನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದ ಒಂದು ಭಾಗದಲ್ಲಿ ದಾದಿಯೊಬ್ಬರು ಮಾಸ್ಕ್ ಧರಿಸಿ ಕೈಯಲ್ಲಿ ಹೂವು ಹಿಡಿದಿದ್ದರೆ, ಬಲಭಾಗದಲ್ಲಿ ಅಮಿತಾಬ್ ತಮ್ಮ ಸ್ಕೆಚ್ ಮಾಡಿದ್ದಾರೆ.
ಅಮಿತಾಬ್ ಬಚ್ಚನ್ ಜೊತೆ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಹಾಗೂ ಆರಾಧ್ಯ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದು ಕೊರೊನಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದಷ್ಟು ಬೇಗ ಎಲ್ಲರನ್ನೂ ಡಿಸ್ಚಾರ್ಜ್ ಮಾಡುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.