ಕರ್ನಾಟಕ

karnataka

ETV Bharat / sitara

ಶಹೀದ್​ ದಿವಸ್​ ಹಿನ್ನೆಲೆ: ಹುತಾತ್ಮರಿಗೆ ಕೈಫಿ ಅಜ್ಮಿ ಹಾಡಿನ ಮೂಲಕ ಗೌರವ ಸಲ್ಲಿಸಿದ ಬರ್ತ್​ಡೇ ಗರ್ಲ್​ 'ಕ್ವೀನ್​'

ಕಂಗನಾ ರಣಾವತ್​ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇಂದು ಶಹೀದ್​ ದಿವಸ್​ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರಿಗೆ ಕೈಫಿ ಅಜ್ಮಿ ಅವರು ಬರೆದ ಹಾಡನ್ನು ಹಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

martyrs
ಬರ್ತ್​ಡೇ ಗರ್ಲ್​ 'ಕ್ವೀನ್​'

By

Published : Mar 23, 2020, 9:29 PM IST

ಮುಂಬೈ: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಂಗನಾ ರಣಾವತ್​ ಇಂದು ಶಹೀದ್​ ದಿವಸ್​ ಹಿನ್ನೆಲೆಯಲ್ಲಿ, ಕೈಫಿ ಅಜ್ಮಿ ಅವರು ಬರೆದ ಹಾಡನ್ನು ಹಾಡುವ ಮೂಲಕ​ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದ್ದಾರೆ.

"ನನ್ನ ಜನ್ಮದಿನದಂದು ತುಂಬಾ ಪ್ರೀತಿಯನ್ನು ಕಳುಹಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೇನೆ. ಆದರೆ, ಇಂದು ನಮ್ಮ ಇತಿಹಾಸದಲ್ಲಿ ಒಂದು ಪ್ರಮುಖ ದಿನವಾಗಿದೆ. ಅದು ನಮಗೆ ತಿಳಿದಿರುವಂತೆ ಮೂವರು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಹುತಾತ್ಮರಾದ ದಿನ. ಹೀಗಾಗಿ ನಾನು ಹಿರಿಯ ಕವಿ ಕೈಫಿ ಅಜ್ಮಿ ಬರೆದ ಹಾಡನ್ನು ಹಾಡಲು ನಾನು ಬಯಸುತ್ತೇನೆ" ಎಂದು "ಸಾನ್ಸ್ ತಮ್ತಿ ಗೈ ... ಅಬ್ ತುಮ್ಹರೆ ಹವಾಲೆ ವತನ್ ಸಾಥಿಯೊ" ಎಂಬ ಹಾಡನ್ನು ಹಾಡಿದ್ದಾರೆ.

"1928 ರಲ್ಲಿ ಲಾಹೋರ್ ಜೈಲಿನ ಬ್ರಿಟಿಷ್ ಪೊಲೀಸ್ ಅಧಿಕಾರಿ ಜಾನ್ ಸಾಂಡರ್ಸ್​​ ಹತ್ಯೆ ವಿಚಾರವಾಗಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಮಾರ್ಚ್ 23, 1931 ರಂದು ಗಲ್ಲಿಗೇರಿಸಲಾಯಿತು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದಾಗ ಅದರ ಅನುಭವ ಹೇಗಿರಬೇಕು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಂಗನಾ ತಮ್ಮ ಜನ್ಮದಿನವನ್ನು ಪೋಷಕರು ಮತ್ತು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಗನಾ ಸಹೋದರಿ ರಂಗೋಲಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details