ಕರ್ನಾಟಕ

karnataka

ETV Bharat / sitara

ಅಮ್ಮನನ್ನು ನೆನಪಿಸಿ ಬಿಟೌನ್‌ ಮಂದಿ ಹಂಚಿಕೊಂಡ ಅಪರೂಪದ ಫೋಟೋಗಳನ್ನು ನೋಡಿ..

ಹೇಮಾ ಮಾಲಿನಿ, ವಿಕ್ಕಿ ಕೌಶಲ್, ಸಾರಾ ಅಲಿ ಖಾನ್ ಮತ್ತು ಇತರ ಬಾಲಿವುಡ್ ಮಂದಿ ವಿಶ್ವ ತಾಯಂದಿರ ದಿನದಂದು ತಮ್ಮ ತಾಯಿಗೆ ಹೃದಯ ಬೆಚ್ಚಗಾಗಿಸುವ ಸಂದೇಶಗಳನ್ನು ಅರ್ಪಿಸಿದ್ದಾರೆ.

B-town
ಬಿ ಟೌನ್​

By

Published : May 10, 2020, 5:37 PM IST

ನವದೆಹಲಿ:ಬಾಲಿವುಡ್ ಸೆಲೆಬ್ರಿಟಿಗಳೂ ತಮ್ಮ ತಾಯಿಗೆ ಹೃದಯ ಸ್ಪರ್ಶಿಯಾಗಿಸುವಂತಹ ಸಂದೇಶಗಳನ್ನು ಅರ್ಪಿಸಿದ್ದಾರೆ. ಯಾವ ಸೆಲೆಬ್ರಿಟಿ, ಏನ್‌ ಶೇರ್​ ಮಾಡಿಕೊಂಡಿದ್ದಾರೆ ಎನ್ನುವ ಕುತೂಹಲ ನಮ್ಮೆಲ್ಲರಲ್ಲೂ ಇದ್ದೇ ಇರುತ್ತೆ. ಬಿಟೌನ್‌ ಮಂದಿ ಅಪರೂಪದ ಫೊಟೋಗಳು ಇಲ್ಲಿವೆ ನೋಡಿ.

ಡ್ರೀಮ್​ ಗರ್ಲ್​ ಹೇಮಾ ಮಾಲಿನಿ ತನ್ನ ತಾಯಿ ಮತ್ತು ಹೆಣ್ಣುಮಕ್ಕಳೊಂದಿಗಿನ ಅಮೂಲ್ಯವಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, 'ಇದು ನಮ್ಮ ತಾಯಂದಿರು ನಮಗಾಗಿ ಮಾಡಿದ ಎಲ್ಲವನ್ನು ಪ್ರೀತಿ ಮತ್ತು ಕೃತಜ್ಞತೆಯಿಂದ ನೆನಪಿಸಿಕೊಳ್ಳುವ ದಿನ' ಎಂದು ಹೇಳಿದ್ದಾರೆ. ಅದರ ಜೊತೆ ಶೋಲೆ ತಾರೆ ಕೆಲವು ಹಳೆಯ ಹಿನ್ನೋಟ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ತಮ್ಮನ್ನು, ಅವರ ತಾಯಿ ಮತ್ತು ಹೆಣ್ಣುಮಕ್ಕಳಾದ ಇಶಾ ಮತ್ತು ಅಯಾನಾ ಡಿಯೋಲ್ ಸೇರಿದಂತೆ ಮೂರು ತಲೆಮಾರುಗಳನ್ನು ಟ್ವಿಟ್ಟರ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಸಾರಾ ಅಲಿ ಖಾನ್ ಹಳೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಲ್ಲಿ ತಾಯಿ ಅಜ್ಜಿಯ ತೋಳುಗಳಲ್ಲಿ ಶಿಶುವಾಗಿ ಕಾಣಿಸಿಕೊಂಡಿದ್ದಾಳೆ. ತಾಯಿ ಬೇಬಿ ಸಾರಾಳನ್ನು ಪ್ರೀತಿಯ ಕ್ಷಣದಲ್ಲಿ ನೋಡುತ್ತಿದ್ದಾಳೆ. "ಮೇರಿ ಮಾ ಕಿ ಮಾ. ಮಮ್ಮಿಯನ್ನು ಹುಟ್ಟಿಸಿದ್ದಕ್ಕಾಗಿ ಧನ್ಯವಾದಗಳು. ಹ್ಯಾಪಿ ಮದರ್ಸ್ ಡೇ" ಎಂದು ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ.

ವಿಕ್ಕಿ ಕೌಶಲ್ ಬಾಲ್ಯದ ಚಿತ್ರವನ್ನು ತಮ್ಮ ಇನ್ಸ್​ಟಾಗ್ರಾಂನಲ್ಲಿ ಹಾಕಿದ್ದಾರೆ. ಅಲ್ಲಿ ನಟನು ಕಡಲತೀರದದಲ್ಲಿ ಏನೋ ಕಿರಿಕ್​ ಮಾಡಿ ಸಿಕ್ಕಿಬಿದ್ದಿದ್ದಾನೆ. ಅದಕ್ಕೆ ಅವನ ತಾಯಿ ಅವನನ್ನು ಬೈಯುತ್ತಿರುವುದು ಕಂಡುಬರುತ್ತದೆ. ಚಿತ್ರದ ಜೊತೆಗೆ ವಿಕ್ಕಿ, ಎಲ್ಲಿಯವರೆಗೆ ಅವರನ್ನು ನೋಡಿಕೊಳ್ಳುತ್ತೀರಿ, ಅವರನ್ನೂ ಬರಲು ಬಿಡಿ, ಮಾ ಲವ್​ ಯೂ, ಎಂದು ಬರೆದುಕೊಂಡಿದ್ದಾರೆ.

ಅನನ್ಯಾ ಪಾಂಡೆ ತನ್ನ ಬಾಲ್ಯದ ದಿನಗಳ ಕ್ಯೂಟ್​ ವಿಡಿಯೊ ಹಂಚಿಕೊಂಡಿದ್ದಾಳೆ. ಅಲ್ಲಿ ಅವಳು ಕುರ್ತಾಗೆ ಕೆಂಪು ಚುಕ್ಕೆಗಳ ದುಪಟ್ಟಾ ಜೊತೆ ಆಡುತ್ತಿರುತ್ತಾಳೆ. ಕ್ಯಾಮೆರಾದ ಹಿಂದಿರುವ ವ್ಯಕ್ತಿಯೊಬ್ಬರು, ನೀವು ಜಗತ್ತಿನಲ್ಲಿ ಯಾರನ್ನು ಹೆಚ್ಚು ಪ್ರೀತಿಸುತ್ತೀರಿ? ಎಂದು ಕೇಳುವ ಪ್ರಶ್ನೆಯೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಅನನ್ಯಾ ಮುಗ್ಧವಾಗಿ 'ಮಾಮಾ' ಎಂದು ಉತ್ತರಿಸುತ್ತಾಳೆ. ಎರಡನೆಯದು ಯಾರೂ ಇಲ್ಲ ಎಂದು ನಗುತ್ತಾ ಉತ್ತರಿಸುತ್ತಾಳೆ. ಅನನ್ಯಾ ಅದಕ್ಕೆ 'ಉತ್ತರ ಈವಾಗಲೂ ಅದೇ ಆಗಿದೆ, ಲವ್ ಯು ಭವನಪಾಂಡೆ ಎಂದು ಶೀರ್ಷಿಕೆ ನೀಡಿದ್ದಾರೆ.

ತನ್ನ ತಾಯಿಯೊಂದಿಗೆ ಕಳೆದ ತನ್ನ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಂಡ ಇಶಾನ್ ಖಟ್ಟರ್ ತನ್ನ ತಾಯಿಯೊಂದಿಗೆ ಒಂದೆರಡು ಹಳೆಯ ಚಿತ್ರಗಳನ್ನು ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ತನ್ನ ತಾಯಿಯ ತೋಳಿಗಳಲ್ಲಿ ಬಂಧಿಯಾಗಿ, ತಾಯಿಗೆ ಮುತ್ತಿಕ್ಕುವ ಮೂರು ಅಪರೂಪದ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್​ಗೆ ಅವರು "ಮಾಮ್ ಫಾರ್ ಪ್ರೆಸಿಡೆಂಟ್" ಎಂದು ಕ್ಯಾಪ್ಶನ್​ ಬರೆದಿದ್ದಾರೆ.

ABOUT THE AUTHOR

...view details