ಲಂಡನ್: ಇಂಗ್ಲೆಂಡ್ ಮೂಲದ ಭಾರತದ ನಟಿ ಆ್ಯಮಿ ಜಾಕ್ಸನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಹಲವು ದಿನಗಳಿಂದ ಸಿನಿಮಾಗಳಿಗೆ ಸಹಿ ಮಾಡದೇ ಸೈಲೆಂಟ್ ಆಗಿದ್ದ ನಟಿ ಈಗ ದಿಢೀರ್ ಆಗಿ ಅಭಿಮಾನಿಗಳ ಹೃದಯ ಒಡೆಯುವಂತಹ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಬಾಲಿವುಡ್ ಸೇರಿದಂತೆ ತೆಲುಗು, ತಮಿಳು, ಕನ್ನಡದಲ್ಲಿ ನಟಿಸಿದ್ದ ಆ್ಯಮಿ ಜಾಕ್ಸನ್ ಹಲವು ದಿನಗಳಿಂದ ಬಾಯ್ಫ್ರೆಂಡ್ ಜಾರ್ಜ್ ಪನಾಯಿಟೋವ್ ಜೊತೆ ಸುತ್ತಾಟ ನಡೆಸುತ್ತಿದ್ರು. ಸದ್ಯ ಇನ್ನೂ ಮದುವೆ ಆಗದ ಈ ಜೋಡಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.