ಬಾಲಿವುಡ್ನ ಖ್ಯಾತ ತಾರೆಗಳಾದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಹೊಸ ವರ್ಷವನ್ನು ಆಚರಿಸಿದೆ. ರಜೆಯನ್ನ ಎಂಜಾಯ್ ಮಾಡಿದ ಬಳಿಕ ಈ ಜೋಡಿ ಮರಳಿದೆ. ಈ ವೇಳೆ ತಮ್ಮ 'ಬಾಯ್ಫ್ರೆಂಡ್' ಕ್ಲಿಕ್ಕಿಸಿದ ಫೋಟೋಗಳನ್ನು ಆಲಿಯಾ ಭಟ್ ಹಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿರುವ ಆಲಿಯಾ, 'ನನ್ನ ಬಾಯ್ಫ್ರೆಂಡ್ನ ಛಾಯಾಗ್ರಹಣ ಕೌಶಲ್ಯವನ್ನು ಮತ್ತಷ್ಟು ಉತ್ತಮಗೊಳಿಸುತ್ತಿರುವೆ' ಎನ್ನುವ ಅರ್ಥದಲ್ಲಿ ಕ್ಯಾಪ್ಶನ್ ನೀಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆಯೇ ಆಲಿಯಾ-ರಣಬೀರ್ ನಟನೆಯ ಬಹುನಿರೀಕ್ಷಿತ 'ಬ್ರಹ್ಮಾಸ್ತ್ರ' ಚಿತ್ರದ ಶೂಟಿಂಗ್ ಆರಂಭವಾಗಿದೆ. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಡೇಟಿಂಗ್ನಲ್ಲಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಇವರಿಬ್ಬರು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಾರೆ.