ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಬುಧವಾರ ಬೆಳಗ್ಗೆ ನಿಧನರಾಗಿದ್ದು, ಈ ಕುರಿತು ಸ್ವತಃ ಅಕ್ಷಯ್ ಕುಮಾರ್ ಟ್ವಿಟರ್ನಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.
'ಅವಳು ನನ್ನ ಮೂಲ. ನಾನು ತುಂಬಾ ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮ ಇಂದು ಬೆಳಗ್ಗೆ ಜಗತ್ತನ್ನು ತೊರೆದಿದ್ದಾರೆ. ನನ್ನ ತಂದೆಯೊಂದಿಗೆ ಬೇರೆ ಜಗತ್ತಿನಲ್ಲಿ ಜೊತೆಯಾಗಿದ್ದಾರೆ' ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಸಂಜೆ ತನ್ನ ತಾಯಿಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಕ್ಕಾಗಿ ಹಿತೈಷಿಗಳಿಗೆ ಧನ್ಯವಾದ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು. ಇದಕ್ಕೂ ಮೊದಲು ಬ್ರಿಟನ್ನಲ್ಲಿ ಸಿಂಡ್ರೆಲಾ ಚಿತ್ರದ ಶೂಟಿಂಗ್ ಅನ್ನು ಸ್ಥಗಿತಗೊಳಿಸಿ, ಭಾರತಕ್ಕೆ ಅಕ್ಷಯ್ಕುಮಾರ್ ವಾಪಸ್ ಆಗಿದ್ದರು.
ಮುಂಬೈನ ಹಿರಾನಂದನಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅರುಣಾ ಭಾಟಿಯಾ ಚಿಕಿತ್ಸೆ ಪಡೆಯುತ್ತಿದ್ದರು. ಅರುಣಾ ಭಾಟಿಯಾ ನಿಧನಕ್ಕೆ ಇನ್ನೂ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.