ಇದೀಗ ಶೇ. 60ರಷ್ಟು ಚಿತ್ರೀಕರಣ ಮುಗಿಸಿರುವ ಹೌಸ್‌ಫುಲ್- 4, ಚಿತ್ರದ ಟ್ರೈಲರ್ನ ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಕೃತಿ ಕರಬಂಧ, ಕೃತಿ ಸನನ್, ಪೂಜಾ ಹೆಗ್ಡೆ, ರಿತೇಶ್ ದೇಶಮುಖ್ ಮತ್ತು ಬಾಬಿ ಡಿಯೋಲ್ ಸೇರಿ ಚಿತ್ರತಂಡದ ಎಲ್ಲರೂ ಹಾಜರಿದ್ದರು.
'ತಲಾಶ್ನಿಂದ ಖುಲಾಸೆಗೊಂಡರೆ ಕೆಲಸ ಮಾಡುವೆ'.. ಮೀಟೂ ಈಗಲೂ ಅದಕ್ಕೆ ಬದ್ಧ ಅಂತಾರೆ ಅಕ್ಷಯ್ ಕುಮಾರ್..
ಬಾಲಿವುಡ್ನಲ್ಲಿ ಭಾರಿ ಸದ್ದು ಮಾಡಿದ್ದ ಮೀಟೂ ಪ್ರಕರಣದ ಬಗ್ಗೆ ನಟ ಅಕ್ಷಯ್ ಕುಮಾರ್ ಈ ಹಿಂದೆ ಒಂದು ಹೇಳಿಕೆ ಕೊಟ್ಟಿದ್ದರು. ನಿರ್ದೇಶಕ ಸಾಜಿದ್ ಖಾನ್ ಮೇಲೆ ಕೇಳಿ ಬಂದ ಮೀಟೂ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅಕ್ಕಿ, ಅವರೊಂದಿಗೆ ನಾನು ಕೆಲಸ ಮಾಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಇದೀಗ ಮತ್ತೆ ಅದೇ ಹೇಳಿಕೆಯನ್ನು ಉದ್ದೇಶಿಸಿ ಮಾತಿಗಿಳಿದಿದ್ದಾರೆ.
ಈ ವೇಳೆ ಟ್ರೈಲರ್ನಲ್ಲಿ ಸಾಜಿದ್ ಖಾನ್ ಹೆಸರು ಕಾಣೆಯಾಗಿರುವ ಬಗ್ಗೆ, ಆರೋಪ ಹಾಗೂ ನಿಷೇಧದ ಬಗ್ಗೆ ಮಾಧ್ಯಮಗಳು ಚಿತ್ರತಂಡದ ಮುಂದೆ ಹತ್ತು ಹಲವು ಪ್ರಶ್ನೆಗಳನ್ನು ಇಟ್ಟವು. ಪ್ರಶ್ನೆಗಳಿಗೆ ಉತ್ತರ ಕೊಟ್ಟ ಅಕ್ಷಯ್ ಕುಮಾರ್, ಭಾರತೀಯ ಸಿನಿಮಾ ಮತ್ತು ಟಿವಿ ನಿರ್ದೇಶಕರ ಸಂಘ (ಐಎಫ್‌ಟಿಡಿಎ) ಸಾಜಿದ್ ಖಾನ್ ಮೇಲೆ ಒಂದು ವರ್ಷದ ನಿಷೇಧ ಹೇರಿದೆ. ಸತ್ಯಾಸತ್ಯತೆ ಏನು ಎಂದು ನನಗೆ ಗೊತ್ತಿಲ್ಲ. ನಿರ್ದೇಶಕರು ಆರೋಪದಿಂದ ಹೊರಬಂದರೆ ಅವರೊಂದಿಗೆ ಮತ್ತೆ ನಟಿಸುತ್ತೇನೆ. ಅಲ್ಲಿಯವರೆಗೆ ಇಲ್ಲ ಎಂದು ತಿಳಿಸಿದರು. ಹೌಸ್‌ಫುಲ್ 4 ಅಕ್ಟೋಬರ್ 25ರಂದು ಬಿಡುಗಡೆಗೊಳ್ಳಲಿದೆ.
ನಟನಾಗಿ, ನಿರೂಪಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಸಾಜಿದ್ ಖಾನ್ ಮಹಿಳೆಯರನ್ನು ಕಾಮದ ದೃಷ್ಟಿಯಿಂದ ನೋಡುತ್ತಾನೆ ಎಂದು ಆರೋಪಿಸಿ ಬಿಟೌನ್ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ನೋವು ಹೊರ ಹಾಕಿದ್ದರು. ಹೌಸ್‌ಫುಲ್ 4ರ ನಿರ್ದೇಶಕರಾಗಿದ್ದ ಸಾಜಿದ್ ಖಾನ್ ವರ್ತನೆಯಿಂದ ಮನನೊಂದಿದ್ದ ಅಕ್ಷಯ್ ಕುಮಾರ್ ಅವರಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದ್ದರು. ಅಲ್ಲದೆ ಹೌಸ್‌ಫುಲ್ 4ರ ಚಿತ್ರೀಕರಣವನ್ನು ನಿಲ್ಲಿಸುವಂತೆ ನಿರ್ದೇಶಕರಿಗೆ ಮನವಿ ಮಾಡಿದ್ದರು. ಇದರಿಂದ ಸಾಜಿದ್ ನಿರ್ದೇಶನದಿಂದ ಹಿಂದೆ ಸರಿದಿದ್ದರು.