ಮುಂಬೈ:ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಜನರ ಸೇವೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗೆ ಧನ್ಯವಾದ ಹೇಳುವ ವಿಡಿಯೋವನ್ನು, ಅಕ್ಷಯ್ ಕುಮಾರ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ಟರ್ಕಿಶ್-ಜರ್ಮನ್ ನಟ ಮೆರಿಮ್ ಉಜೆರ್ಲಿ ಸೇರಿದಂತೆ ಸಿನೆಮಾ ಮತ್ತು ಕ್ರೀಡಾರಂಗದ ಹಲವು ಗಣ್ಯರು ಬಿಡುಗಡೆ ಮಾಡಿದ್ದಾರೆ.
ಒಂದು ನಿಮಿಷದ ವೀಡಿಯೊದಲ್ಲಿ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಸಂಗೀತ ಸಂಯೋಜಕರಾದ ವಿಶಾಲ್ ದಾದ್ಲಾನಿ ಮತ್ತು ಶೇಖರ್ ರಾವ್ಜಿಯಾನಿ, ಗಾಯಕ ಹರಿಹರನ್, ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಮತ್ತು ಮಾಜಿ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ದಮನ್ ಹಿಲ್ ಕೂಡ ಇದ್ದಾರೆ.
ಕೊರೊನಾ ವೈರಸ್ ವಿರುದ್ಧದ ಈ ಹೋರಾಟದಲ್ಲಿ ಒಟ್ಟಾಗಿ ನಿಂತ ಎಲ್ಲಾ ಆರೋಗ್ಯ ಕಾರ್ಯಕರ್ತರು, ವೈದ್ಯರು, ದಾದಿಯರು ಮತ್ತು ಅಗತ್ಯ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಇಂದು ಮಾನವೀಯತೆಯನ್ನು ಜೀವಂತವಾಗಿಡಲು ನೀವು ಹೋರಾಡುತ್ತಿರುವಾಗ, ನಾವು ನಿಮ್ಮನ್ನು ಹುರಿದುಂಬಿಸುತ್ತೇವೆ. ನಿಮ್ಮದು ಅದ್ಭುತವಾದ ಕೆಲಸ, ನೀವು ನಮ್ಮ ನಿಜವಾದ ಹೀರೋಗಳು ಎಂದು ವೀಡಿಯೊದಲ್ಲಿ ಹೇಳಿದ್ದಾರೆ.
ಕೊರೊನಾ ವಾರಿಯರ್ಸ್ಗಳನ್ನು ಬಿಕ್ಕಟ್ಟಿನ ಸಮಯದಲ್ಲಿರುವ ಮಾರ್ಗದರ್ಶಕ ಬೆಳಕು ಎಂದು ಕರೆದ ಸೆಲೆಬ್ರಿಟಿಗಳು, ಜಗತ್ತು ಒಟ್ಟಾಗಿ ಸಾಂಕ್ರಾಮಿಕ ರೋಗವನ್ನು ನಿವಾರಿಸುತ್ತದೆ ಎಂದಿದ್ದಾರೆ.
----------------
Mumbai: Several personalities from cinema and sports, including Akshay Kumar, cricketer Virat Kohli, Turkish-German actor Meryem Uzerli, released a video thanking the frontline workers for risking their lives in service of people amid the coronavirus pandemic.
The minute-long video also features filmmaker Karan Johar, designer Manish Malhotra, music composers Vishal Dadlani and Shekhar Ravjiani, singer Hariharan, India football team captain Sunil Chhetri and former formula one world champion Damon Hill.