ಕರ್ನಾಟಕ

karnataka

ETV Bharat / sitara

ಮದುವೆ ಮುಂಚೆಯೇ ತಾಯಿ... ಶಾಕಿಂಗ್ ವಿಷ್ಯಾ​​​​​​​​ ರಿವೀಲ್ ಮಾಡಿದ ನಟಿ

ಬಾಲಿವುಡ್​ ನಟಿ ಮಹಿ ಗಿಲ್​ ತಮ್ಮ ಖಾಸಗಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ನಾನು ಮೂರು ವರ್ಷದ ಹೆಣ್ಣು ಮಗುವಿನ ತಾಯಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Jul 2, 2019, 8:23 PM IST

ಮಹಿಗೆ ಇನ್ನೂ ಮದುವೆ ಆಗಿಲ್ಲ. ವಿವಾಹದ ಮುಂಚೆಯೇ ತಾಯಿ ಆಗಿರುವ ಸೀಕ್ರೆಟ್​ ಈಗ ಹೊರಹಾಕಿದ್ದಾರೆ. ಇತ್ತೀಚಿಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಸಂಗತಿ ಹೊರಹಾಕಿರುವ ಅವರು, ಮೂರು ವರ್ಷದ ಹಿಂದೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಈ ವಿಚಾರವನ್ನು ಎಂದಿಗೂ ಬಚ್ಚಿಡಲು ನಾನು ಬಯಸಿಲ್ಲ. ಆದರೆ, ಯಾರೂ ಇದುವರೆಗೂ ನನ್ನನ್ನು ಈ ಬಗ್ಗೆ ಪ್ರಶ್ನಿಸಿಲ್ಲ. ಆದ್ದರಿಂದ ಸದ್ಯ ಇದನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದಿದ್ದಾರೆ.

ತಾವು ಮದುವೆಯಾಗದಿರುವ ವಿಚಾರವನ್ನು ಹಂಚಿಕೊಂಡಿರುವ ಅವರು, ನಾನು ಇನ್ನೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ. ನನಗೆ ಯಾವಾಗ ಮದುವೆ ಬೇಕು ಅನ್ನಿಸುತ್ತೋ ಅವಾಗ ಆಗುತ್ತೇನೆ. ಹಾಗಂತ ನಾನು ಸಿಂಗಲ್ ಆಗಿಲ್ಲ. ವ್ಯಕ್ತಿಯೊಬ್ಬರ ಜತೆ ಡೇಟಿಂಗ್​ನಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಸಂಬಂಧಿಕರ ಮನೆಯಲ್ಲಿ ನನ್ನ ಮಗಳು ಬೆಳೆಯುತ್ತಿದ್ದಾಳೆ ಎಂದಿರುವ ಮಹಿ, ಬರುವ ಆಗಸ್ಟ್​​ಗೆ ಆಕೆಗೆ ಮೂರು ವರ್ಷ ತುಂಬಲಿದೆ ಎಂದಿದ್ದಾರೆ. ಹಿಂದಿಯ ದೇವ್​ ಡಿ, ಸಾಬ್​ ಬಿವಿ ಗ್ಯಾಂಗ್​ಸ್ಟರ್ ಹಾಗೂ ದಬಾಂಗ್​​ ಚಿತ್ರಗಳಲ್ಲಿ ನಟಿಸಿರುವ ಮಹಿ, ಸದ್ಯ Family of Thakurganj ಸಿನಿಮಾ ರಿಲೀಸ್​ಗೆ ಎದುರು ನೋಡುತ್ತಿದ್ದಾರೆ.

ABOUT THE AUTHOR

...view details