ಮುಂಬೈ:ಚಿತ್ರರಂಗದಲ್ಲಿ ತಾನು ಅಂದುಕೊಂಡಿದ್ದನ್ನು ಸಾಧಿಸಲಾಗಲಿಲ್ಲ, ಒಳ್ಳೆ ಅವಕಾಶಗಳು ದೊರೆಯಲಿಲ್ಲ ಎಂಬ ದು:ಖದಿಂದ ನಟಿಯೊಬ್ಬರು ತಾನು ವಾಸವಿದ್ದ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಬೇಸರ....ಅಪಾರ್ಟ್ಮೆಂಟ್ ಮೇಲಿಂದ ಧುಮುಕಿ ನಟಿ ಆತ್ಮಹತ್ಯೆ - ಅಪಾರ್ಟ್ಮೆಂಟ್
ನಟಿ ಪೆರಲ್ ಹಾಗೂ ಆಕೆ ತಾಯಿ ನಡುವೆ ಪ್ರತಿದಿನ ಜಗಳ ನಡೆಯುತ್ತಿದ್ದು ಪೆರಲ್ ಡಿಪ್ರೆಶನ್ಗೆ ಒಳಗಾಗಿದ್ದರು ಎನ್ನಲಾಗಿದೆ. ಬಹಳ ದಿನಗಳಿಂದ ಚಿತ್ರರಂಗದಲ್ಲಿ ಬ್ರೇಕ್ಗಾಗಿ ಕಾಯುತ್ತಿದ್ದ ಪೆರಲ್ ಅಂದುಕೊಂಡಂತೆ ಅವಕಾಶಗಳು ಸಿಗದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಟಿ ಪೆರಲ್ ಪಂಜಾಬಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು.ಬಹಳ ದಿನಗಳಿಂದ ಅವರು ಚಿತ್ರರಂಗದಲ್ಲಿ ಬ್ರೇಕ್ಗಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಪೆರಲ್ಗೆ ಅಂದುಕೊಂಡಂತೆ ಅವಕಾಶಗಳು ದೊರೆಯದೆ ಆಕೆ ಡಿಪ್ರೆಶನ್ಗೆ ಒಳಗಾಗಿದ್ದರು. ಪ್ರತಿದಿನ ಇದೇ ವಿಷಯಕ್ಕೆ ಪೆರಲ್ ಹಾಗೂ ತಾಯಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಈ ಹಿಂದೆ ಕೂಡಾ 2-3 ಬಾರಿ ಪೆರಲ್ ಆತ್ಮಹತ್ಯೆಗೆ ಯತ್ನಿಸಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಗುರುವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ ಅಪಾರ್ಟ್ಮೆಂಟ್ ಬಳಿ ಸೆಕ್ಯೂರಿಟಿ ಗಾರ್ಡ್ಗೆ ಏನೋ ಶಬ್ಧ ಕೇಳಿಬಂದಿದೆ. ಸ್ಥಳಕ್ಕೆ ಬಂದು ನೋಡಿದಾಗ ಪೆರಲ್ ಮೂರನೇ ಅಂತಸ್ತಿನಿಂದ ಬಿದ್ದು ತೀವ್ರ ಗಾಯದಿಂದ ಮೃತಪಟ್ಟಿದ್ದಾರೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.