ಕರ್ನಾಟಕ

karnataka

ETV Bharat / sitara

ಸಬರಮತಿ ಆಶ್ರಮಕ್ಕೆ ಸಲ್ಮಾನ್ ಖಾನ್ ಭೇಟಿ.. ಚರಕದಿಂದ ನೇಯಲು ಯತ್ನಿಸಿದ ಬಾಲಿವುಡ್​ ನಟ - ಅಹಮದಾಬಾದ್​ಗೆ ಸಲ್ಮಾನ್ ಖಾನ್ ಭೇಟಿ

ನಟ ಸಲ್ಮಾನ್ ಖಾನ್ ತಮ್ಮ ಅಂತಿಮ್​​ ಚಿತ್ರದ ಪ್ರಚಾರಕ್ಕಾಗಿ ಸೋಮವಾರ ಅಹಮದಾಬಾದ್‌ಗೆ ತಲುಪಿ ನಂತರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು.

Salman Khan visited Sabarmati Ashram
ಸಬರಮತಿ ಆಶ್ರಮಕ್ಕೆ ಸಲ್ಮಾನ್ ಖಾನ್ ಭೇಟಿ

By

Published : Nov 30, 2021, 9:44 AM IST

ಹೈದರಾಬಾದ್:ಬಾಲಿವುಡ್​ ನಟ ಸಲ್ಮಾನ್ ಖಾನ್ ಅಭಿನಯದ ಅಂತಿಮ್ ಸಿನಿಮಾ ಬಿಡುಗಡೆಯಾಗಿ, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ಪ್ರಚಾರದ ಸಲುವಾಗಿ ನಿನ್ನೆ ಸಲ್ಮಾನ್ ಖಾನ್ ಅಹಮದಾಬಾದ್​ಗೆ ತೆರಳಿದ್ದರು. ಈ ವೇಳೆ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆಶ್ರಮಕ್ಕೂ ಭೇಟಿ ನೀಡಿದ್ದರು.

ಸಬರಮತಿ ಆಶ್ರಮಕ್ಕೆ ಸಲ್ಮಾನ್ ಖಾನ್ ಭೇಟಿ

ನಟ ಸಲ್ಮಾನ್ ಖಾನ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಸೋಮವಾರದಂದು ಅಹಮದಾಬಾದ್‌ಗೆ ಭೇಟಿ ನೀಡಿದ್ದರು. ಬಳಿಕ ಅವರು ಸಬರಮತಿ ಆಶ್ರಮಕ್ಕೂ ವಿಸಿಟ್​ ಕೊಟ್ಟಿದ್ದರು. ಆಶ್ರಮದಲ್ಲಿ 20 ರಿಂದ 25 ನಿಮಿಷಗಳ ಕಾಲ ಅಲ್ಲಿದ್ದ ಅವರು, ಚರಕದಿಂದ ನೂಲು ನೇಯಲು ಯತ್ನಿಸಿದರು. ಆಶ್ರಮವನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಇನ್ನು ಸಲ್ಮಾನ್ ಖಾನ್​ ನೋಡಲು ಅಭಿಮಾನಿಗಳು ಆಶ್ರಮದ ಹೊರಗೆ ಜಮಾಯಿಸಿದ್ದರು.

'ಅಂತಿಮ್- ದಿ ಫೈನಲ್ ಟ್ರುತ್' - ಇದೊಂದು ಗ್ಯಾಂಗ್​ಸ್ಟರ್ ಕಥಾಹಂದರ ಇರುವ​ ಚಿತ್ರವಾಗಿದ್ದು, 2018ರಲ್ಲಿ ಬಿಡುಗಡೆಯಾದ ಮರಾಠಿಯ ಹಿಟ್ ಚಿತ್ರ 'ಮುಲ್ಶಿ ಪ್ಯಾಟರ್ನ್‌'ನ ರೀಮೇಕ್ ಆಗಿದೆ. ಮೂಲ ಚಿತ್ರವನ್ನು ಮರಾಠಿ ನಟ, ಚಲನಚಿತ್ರ ನಿರ್ಮಾಪಕ ಪ್ರವೀಣ್ ಟಾರ್ಡೆ ನಿರ್ಮಿಸಿದ್ದರೆ, ಹಿಂದಿಯ ರೀಮೇಕ್ ಅನ್ನು ನಟ, ಚಲನಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್​ ನಿರ್ಮಿಸಿದೆ. ಕನ್ನಡಿಗ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿರುವುದು ವಿಶೇಷವಾಗಿದೆ.

ಸಲ್ಮಾನ್​ ಮನವಿ:
ಇನ್ನು ಅಭಿಮಾನಿಗಳು ಚಿತ್ರಮಂದಿರದೊಳಗೆ ಪಟಾಕಿ ಸಿಡಿಸುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸಲ್ಮಾನ್ ಖಾನ್, ಪೋಸ್ಟರ್​ಗಳ ಮೇಲೆ ಹಾಲು ಸುರಿದು ವ್ಯರ್ಥ ಮಾಡದಂತೆಯೂ ಅಭಿಮಾನಿಗಳಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ:ಹಾಲನ್ನು ವ್ಯರ್ಥ ಮಾಡಬೇಡಿ, ಬಡಮಕ್ಕಳಿಗೆ ನೀಡಿ: ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮನವಿ

ABOUT THE AUTHOR

...view details