ಕರ್ನಾಟಕ

karnataka

ETV Bharat / sitara

ಮಗಳ ಕಾರಣಕ್ಕಾಗಿಯೇ ಸಲುಗೆಯ ದೃಶ್ಯಗಳಿಗೆ No ಅಂದೆ: ಅಭಿಷೇಕ್​ ಬಚ್ಚನ್​

ಆದಾಗ್ಯೂ ನನಗೆ ರೊಮ್ಯಾಂಟಿಕ್​ ಸೀನ್​ಗಳೆಂದರೆ ಅಷ್ಟಕ್ಕಷ್ಟೇ. ಈ ನಿಯಮ ಅಳವಡಿಸಿಕೊಂಡಿರುವುದರಿಂದ ಇಂತಹ ಸೀನ್​ಗಳಿಂದ ಹೊರಗುಳಿಯುವುದನ್ನು ಇಷ್ಟಪಡುತ್ತೇನೆ ಅಂತಾರೆ ಜೂನಿಯರ್ ಬಚ್ಚನ್​.

abhishek
ಆರಾಧ್ಯ

By

Published : Jun 28, 2020, 12:42 PM IST

ಮುಂಬೈ: ಇನ್ನು ಮುಂದೆ ನಾನು ರೊಮ್ಯಾಂಟಿಕ್​​ ಸೀನ್​ಗಳಲ್ಲಿ ನಟಿಸುವುದಿಲ್ಲ, ಅದಕ್ಕೆ ಕಾರಣನೂ ಇದೆ ಅಂತಾರೆ ಅಭಿಷೇಕ್​, ಯಾಕೆ ಗೊತ್ತೇ?.

ಅಭಿಷೇಕ್ ಬಚ್ಚನ್ ಸಂಪೂರ್ಣ ಕೌಟುಂಬಿಕ ವ್ಯಕ್ತಿ. ಮಗಳು ಆರಾಧ್ಯ ಬೆಳೆಯುತ್ತಿದ್ದಾಳೆ. ಭವಿಷ್ಯದಲ್ಲಿ ನಾನು ನಟಿಸಿರುವ ತೀರಾ ಹಸಿ-ಬಿಸಿ ದೃಶ್ಯಗಳನ್ನು ಆಕೆ ನೋಡುವುದರಿಂದ ಅದು ಆಕೆಗೆ ಸರಿ ಕಾಣದೆ ಇರಬಹುದು. ಹಾಗಾಗಿ, ಜೀವನದಲ್ಲಿ ನಾನು 'ನೋ ಇಂಟಿಮೇಟ್ ಸೀನ್​ ಪಾಲಿಸಿ'ಯನ್ನು ಹಾಕಿಕೊಂಡಿದ್ದೇನೆ ಎನ್ನುತ್ತಾರೆ.​

ಸಂದರ್ಶನವೊಂದರಲ್ಲಿ ನಟನಾಗಿ ಪೋಷಕತ್ವವನ್ನೇನಾದ್ರೂ ಬದಲಾಯಿಸಿದ್ದೀರಾ? ಎಂದು ಕೇಳಿದಾಗ, ಹೌದು, ಇದೊಂದು ವಿಷಯವನ್ನು ನಾನು ಬದಲಿಸಿಕೊಂಡಿದ್ದೇನೆ. ಕೆಲವು ಚಲನಚಿತ್ರಗಳಲ್ಲಿ ಈ ರೀತಿಯ ದೃಶ್ಯಗಳಿವೆ. ಆದ್ರೆ ನಾನು ಇನ್ಮುಂದೆ ಅಂತಹ ಸೀನ್​ ಮಾಡಲು ಬಯಸುವುದಿಲ್ಲ. ಅಂತಹ ದೃಶ್ಯಗಳನ್ನು ಆಕೆ ಕಂಡರೆ ಇಲ್ಲೇನು ನಡಿಯುತ್ತಿದೆ ಎಂದು ಮುಂದೊಂದು ದಿನ ಪ್ರಶ್ನಿಸಬಹುದು ಅಂತಾರೆ ಬಚ್ಚನ್.​

ಆದಾಗ್ಯೂ, ನನಗೆ ರೊಮ್ಯಾಂಟಿಕ್​ ಸೀನ್​ಗಳೆಂದರೆ ಅಷ್ಟಕ್ಕಷ್ಟೇ. ನಾನು ನನಗಾಗಿ ಈ ರೀತಿಯ ಕಟ್ಟುನಿಟ್ಟಿನ ನಿಯಮ ಹಾಕಿಕೊಂಡಿರುವುದರಿಂದ ಇಂತಹ ಸೀನ್​ಗಳಿಂದ ಹೊರಗುಳಿಯುವುದು ನನಗೆ ಸಾಧ್ಯವಾಗುತ್ತದೆ ಎಂದಿದ್ದಾರೆ.

ಚಿತ್ರದಲ್ಲಿ ಸಾಕಷ್ಟು ದೈಹಿಕ ಅನ್ಯೋನ್ಯತೆಯನ್ನು ದೃಶ್ಯಗಳಿದ್ದರೆ ನಾನು ನಟಿಸಲು ಸಿದ್ಧನಿಲ್ಲ ಎಂದು ಚಿತ್ರಗಳಿಗೆ ಸಹಿ ಹಾಕುವ ಮುನ್ನ ನಿರ್ದೇಶಕರಿಗೆ ಹೇಳುತ್ತೇನೆ. ರೋಮ್ಯಾಂಟಿಕ್​ ಸೀನ್​ಗಳಿಂದಾಗಿಯೇ ಹಲವಾರು ಚಿತ್ರಗಳನ್ನು ಕೈಬಿಟ್ಟಿದ್ದೇನೆ. ಇದರ ಬಗ್ಗೆ ನನಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ ಎಂದು ಅಭಿಷೇಕ್ ಹೇಳುತ್ತಾರೆ.

ಈ ತಿಂಗಳಾಂತ್ಯದ ವೇಳೆಗೆ ಉದ್ಯಮದಲ್ಲಿ 20 ವರ್ಷಗಳನ್ನು ಪೂರೈಸಲು ಸಜ್ಜಾಗಿರುವ ಈ ನಟ, ಅಮೆಜಾನ್ ಪ್ರೈಮ್ ವೆಬ್ ಸರಣಿ ಬ್ರೀಥ್: ಇನ್ ಟು ದಿ ಶಾಡೋಸ್ ಮೂಲಕ ಡಿಜಿಟಲ್ ಮಾಧ್ಯಮಕ್ಕೆ ಚೊಚ್ಚಲ ಪ್ರವೇಶಕ್ಕೆ ಸಜ್ಜಾಗಿದ್ದಾರೆ.

ABOUT THE AUTHOR

...view details