ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಲ್ಲ ಎಂದು ದಂಗಲ್ ಬೆಡಗಿ ಸನ್ಯಾ ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನಲ್ಲಿ ಈ ಬಗ್ಗೆ ಮಾತನಾಡಿರುವ ಸನ್ಯಾ, ಅಮೀರ್ ಖಾನ್ ಒಬ್ಬ ಪರಿಪೂರ್ಣತಾವಾದಿಯಲ್ಲ. ಆತ ತುಂಬಾ ಭಾವೋದ್ರಿಕ್ತನಾಗಿದ್ದಾನೆ. ಪರಿಪೂರ್ಣತಾವಾದಿಗೆ ಈ ಪದವು ತುಂಬಾ ನಕಾರಾತ್ಮಕ ಅರ್ಥ ಹೊಂದಿದೆ ಎಂದು ನಾನು ಭಾವಿಸುತ್ತೇನೆ.
ಅಮೀರ್ ಒಬ್ಬ ಪರಿಪೂರ್ಣ ನಟ, ಅವರನ್ನು ಚಿತ್ರಗಳ ಆಯ್ಕೆ ಮತ್ತು ನಟನೆಗಾಗಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲಾಗುತ್ತದೆ. ಈ ಟೈಟಲ್ನ ಹಲವಾರು ದಶಕಗಳಿಂದ ಅಮೀರ್ಗೆ ಜೋಡಿಸಲಾಗಿದೆ. ಆದರೆ, ನಾನು ಇದನ್ನು ಒಪ್ಪುವುದಿಲ್ಲ. ಅವರು ಮಿಸ್ಟರ್ ಪರ್ಫೆಕ್ಷನಿಸ್ಟ್ ಅಲ್ಲ ಎಂದು ಹೇಳಿದ್ದಾರೆ.
2016ರಲ್ಲಿ ಅಮೀರ್ ಸಹ ಮಿಸ್ಟರ್ ಪರ್ಫೆಕ್ಷನಿಸ್ಟ್ ಅನ್ನೋ ಟ್ಯಾಗ್ ಒಪ್ಪುವುದಿಲ್ಲ. ಆ ಟೈಟಲ್ ನನ್ನ ಮೇಲೆ ಒತ್ತಡ ಹೇರುತ್ತದೆ ಎಂದು ಹೇಳಿಕೊಂಡಿದ್ದರು.