ಬೆಂಗಳೂರು: ಆದಾಯ ಹೆಚ್ಚಳಕ್ಕಾಗಿ ವಾಟ್ಸ್ಆ್ಯಪ್ನಲ್ಲಿ ಜಾಹೀರಾತುಗಳ ಪ್ರದರ್ಶನ ಆರಂಭಿಸಲಾಗುವುದು ಎಂಬ ಮಾಧ್ಯಮ ವರದಿಗಳನ್ನು ವಾಟ್ಸ್ಆ್ಯಪ್ ಮುಖ್ಯಸ್ಥ ವಿಲ್ ಕ್ಯಾಥ್ಕಾರ್ಟ್ ಶುಕ್ರವಾರ ನಿರಾಕರಿಸಿದ್ದಾರೆ. ವಾಟ್ಸ್ಆ್ಯಪ್ನ ಮಾತೃ ಸಂಸ್ಥೆಯಾದ ಮೆಟಾ ಆದಾಯ ಹೆಚ್ಚಳಕ್ಕಾಗಿ ವಾಟ್ಸ್ಆ್ಯಪ್ ಚಾಟ್ಗಳಲ್ಲಿ ಜಾಹೀರಾತುಗಳನ್ನು ಆರಂಭಿಸಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿತ್ತು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿಲ್ ಕ್ಯಾಥ್ಕಾರ್ಟ್, ಜಾಹೀರಾತು ಅರಂಭಿಸುವ ಕುರಿತಂತೆ ಪ್ರಕಟವಾದ ಮಾಧ್ಯಮ ವರದಿಯು ಸುಳ್ಳು ಎಂದು ಹೇಳಿದ್ದಾರೆ. ಜಾಹೀರಾತು ಮುಕ್ತವಾಗಿ ತನ್ನ ಆ್ಯಪ್ ಬಳಸಲು ಪಾವತಿಸಿ ಬಳಸುವ ಚಂದಾದಾರಿಕೆ ಯೋಜನೆಗಳನ್ನು ವಾಟ್ಸ್ಆ್ಯಪ್ ಪರಿಗಣಿಸುತ್ತಿದೆ ಎಂದೂ ವರದಿ ಹೇಳಿತ್ತು. ಕಂಪನಿಯೊಳಗಿನವರೇ ವಾಟ್ಸ್ಆ್ಯಪ್ನ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ವಾಟ್ಸ್ಆ್ಯಪ್ ಅಂಥ ಕ್ರಮದಿಂದ ಹಿಂದೆ ಸರಿದಿದೆ ಎಂದು ಹೇಳಲಾಗಿದೆ.
ವಾಟ್ಸ್ಆ್ಯಪ್ ಚಾನೆಲ್ ಆರಂಭ: ಏತನ್ಮಧ್ಯೆ, ವಾಟ್ಸ್ಆ್ಯಪ್ ಇತ್ತೀಚೆಗೆ ತನ್ನ ವಾಟ್ಸ್ಆ್ಯಪ್ ಚಾನೆಲ್ಗಳ ವೈಶಿಷ್ಟ್ಯವನ್ನು ಭಾರತದಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದೆ. ಮೆಟಾ ಒಡೆತನದ ಕಂಪನಿಯು ಈ ಹೊಸ ವೈಶಿಷ್ಟ್ಯವನ್ನು 150 ಕ್ಕೂ ಹೆಚ್ಚು ದೇಶಗಳಲ್ಲಿ ಪರಿಚಯಿಸಲಿದ್ದು, ಇದು ಸಂಸ್ಥೆಗಳು, ಕ್ರೀಡಾ ತಂಡಗಳು, ಕಲಾವಿದರು ಮತ್ತು ಚಿಂತಕರ ಖಾಸಗಿ ಅಪ್ಡೇಟ್ಗಳನ್ನು ಶೇರ್ ಮಾಡಲು ಅನುವು ಮಾಡುತ್ತದೆ.
ವಾಟ್ಸ್ಆ್ಯಪ್ನಲ್ಲಿ ಚಾನೆಲ್ನಲ್ಲಿ ಟೀಂ ಇಂಡಿಯಾ: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಟೀಂ ಇಂಡಿಯಾ ಈಗ ಅಧಿಕೃತ ವಾಟ್ಸ್ಆ್ಯಪ್ ಖಾತೆಯನ್ನು ಹೊಂದಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿ) ಗುರುವಾರ ಪ್ರಕಟಿಸಿದೆ. ಬಿಸಿಸಿಐನ ಅಧಿಕೃತ ಖಾತೆಯಲ್ಲಿ (ಈ ಹಿಂದೆ ಟ್ವಿಟರ್) ಈ ಮಾಹಿತಿಯನ್ನು ಪೋಸ್ಟ್ ಮಾಡಲಾಗಿದ್ದು, "ಟೀಮ್ ಇಂಡಿಯಾ ಈಗ ವಾಟ್ಸ್ಆ್ಯಪ್ ಚಾನೆಲ್ನಲ್ಲಿ ಇದೆ. ಇತ್ತೀಚಿನ ಅಪ್ಡೇಟ್ಗಳು, ವಿಶೇಷ ಫೋಟೋಗಳು ಮತ್ತು ತೆರೆಮರೆಯ ವಿಷಯಗಳಿಗಾಗಿ ಸಂಪರ್ಕದಲ್ಲಿರಿ." ಎಂದು ಬಿಸಿಸಿಐ ಹೇಳಿದೆ.
ಇದು ವಾಟ್ಸ್ಆ್ಯಪ್ ಚಾನೆಲ್ ಆಗಿದ್ದು, ಅಭಿಮಾನಿಗಳು ಇದರ ಮೂಲಕ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂಬುದು ಗಮನಾರ್ಹ. ಆದರೆ ಈ ಚಾನೆಲ್ ಮೂಲಕ ಭಾರತೀಯ ಕ್ರಿಕೆಟ್ ತಂಡವು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿರುವುದು ಮಾತ್ರ ನಿಜ. ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬರು, ತಂಡದ ವಾಟ್ಸ್ಆ್ಯಪ್ ಚಾನೆಲ್ಗೆ ಸೇರಿದರೆ ತಂಡಕ್ಕೆ ಸಂಬಂಧಿಸಿದ ಎಲ್ಲಾ ಅಪ್ಡೇಟ್ಗಳನ್ನು ನೋಡಲು ಸಾಧ್ಯವಾಗುತ್ತದೆ. ಈ ಮೊದಲು ಭಾರತೀಯ ಕ್ರಿಕೆಟ್ ತಂಡವು ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ಎಕ್ಸ್ನಮಥ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ಹೊಂದಿತ್ತು. ಆದರೆ ಈಗ ವಾಟ್ಸ್ಆ್ಯಪ್ ಚಾನೆಲ್ಗೆ ತಂಡ ಬಂದಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.
ಇದನ್ನೂ ಓದಿ : OTTಗಳು ಟೆಲಿಕಾಂ ಕಂಪನಿಗಳಿಗೆ ಡೇಟಾ ಟ್ರಾಫಿಕ್ ಶುಲ್ಕ ಪಾವತಿಸಲಿ: ಟೆಲಿಕಾಂ ಕಂಪನಿಗಳ ಬೇಡಿಕೆ