ಸದಾ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ಬಳಕೆದಾರ ಸ್ನೇಹಿಯಾಗಿರುವ ಮೆಟಾ ಇದೀಗ ಮತ್ತೊಂದು ಹೊಸ ಲಕ್ಷಣವನ್ನು ವಾಟ್ಸ್ಆ್ಯಪ್ನಲ್ಲಿ ಪರಿಚಯಿಸಿದೆ. ಜಗತ್ತಿನಾದ್ಯಂತ ವಾಟ್ಸ್ಆ್ಯಪ್ ಬಳಕೆದಾರರು ಹೆಚ್ಚಿದ್ದು, ಅವರಿಗೆ ಅನುಕೂಲವಾಗುವ, ಸುಲಭವಾಗುವ ವೈಶಿಷ್ಟ್ಯಗಳಲ್ಲಿ ಪರಿಚಯಿಸುತ್ತಲೇ ಇದೆ. ಇತ್ತೀಚೆಗಷ್ಟೇ ಗ್ರೂಪ್ ಎಕ್ಸ್ಪೈರಿ ಟೈಮ್ ಅನ್ನು ಪರಿಚಯಿಸಿದ ವಾಟ್ಸ್ಆ್ಯಪ್ ಇದೀಗ ಟೆಕ್ಸ್ ಡಿಟೆಕ್ಷನ್ ಅನ್ನು ಐಒಎಸ್ ಬಳಕೆದಾರರಿಗೆ ಪರಿಚಯಿಸಿದೆ. ಈ ಮೂಲಕ ಬಳಕೆದಾರರು ಇನ್ನಷ್ಟು ಪದಗಳನ್ನು ತಮ್ಮ ಸಂದೇಶಗಳಲ್ಲಿ ಕಳುಹಿಸುವ ಸೌಲಭ್ಯ ಮಾಡಿಕೊಟ್ಟಿದೆ.
ಏನಿದು ಟೆಕ್ಸ್ಟ್ ಡಿಟೆಕ್ಷನ್: ಐಒಎಸ್ ಬಳಕೆದಾರರಿಗೆ ಪರಿಚಯಿಸಿರುವ ಈ ಟೆಕ್ಸ್ಟ್ ಡಿಟೆಕ್ಷನ್ ನಿಂದಾಗಿ ಸಂದೇಶದಲ್ಲಿ ಇಮೇಜ್ ಜೊತೆಗೆ ಹೆಚ್ಚಿನ ಪದಗಳನ್ನು ಬಳಸಬಹುದಾಗಿದೆ. ಬಳಕೆದಾರರು ಇಮೇಜ್ ಅನ್ನು ತೆರೆದಾಗ ಅದರಲ್ಲಿ ಕೆಲವು ಪದಗಳನ್ನು ಕಾಡಬಹುದು. ಇಮೇಜ್ನಲ್ಲಿರುವ ಈ ಪದಗಳನ್ನು ಕಾಪಿ ಮಾಡಲು ಇದೀಗ ಹೊಸ ಬಟನ್ ಕಾಣಬಹುದಾಗಿದೆ. ಖಾಸಗಿತನದ ಕಾರಣದಿಂದ ಈ ವೈಶಿಷ್ಟ್ಯವು ಒಮ್ಮೆ ಚಿತ್ರಗಳ ವೀಕ್ಷಣೆಗೆ ಹೊಂದಿಕೆಯಾಗುವುದಿಲ್ಲ. ಸ್ಟೀಕರ್ ಮೇಕರ್ ಟೂಲ್ ಅನ್ನು ಐಒಎಸ್ ಬಳಕೆದಾರರು ಇಮೇಜ್ ಹಾಗೂ ಸ್ಟೀಕರ್ ಬದಲಾಯಿಸಬಹುದಾಗಿದೆ.
ಈ ಹಿಂದೆ ಇದೇ ರೀತಿಯ ವಾಯ್ಸ್ ಸ್ಟೇಟಸ್ ಅಪ್ಡೇಟ್ ವೈಶಿಷ್ಟ್ಯವನ್ನು ಐಒಎಸ್ ಬಳಕೆದಾರರಿಗೆ ಪರಿಚಯಿಸಲಾಗಿತ್ತು. ಇದರ ಸಹಾಯದಿಂದ ಬಳಕೆದಾರರು ಸ್ಟೇಟಸ್ನಲ್ಲಿ ವಾಯ್ಸ್ ನೋಟ್ ಅನ್ನು ರೆಕಾರ್ಡ್ ಮಾಡಿ ಶೇರ್ ಮಾಡಬಹುದಾಗಿತ್ತು. ಈ ವಾಯ್ಸ್ ನೋಟ್ ರೇಕಾರ್ಡ್ ಮಾಡುವ ಗರಿಷ್ಠ ಅವಧಿ 30 ಸೆಕೆಂಡ್ ಆಗಿದ್ದು, ಈ ವಾಯ್ಸ್ ನೋಟ್ ಅನ್ನು ಚಾಟ್ಗಳ ಮೂಲಕ ಸ್ಟೇಟಸ್ಗೆ ಕಳುಹಿಸಬಹುದು.
ಹೊಸ ಭಾಗಿದಾರರ ಅನುಮತಿ:ವಾಟ್ಸ್ಆ್ಯಪ್ನ ಐಒಎಸ್ ಮತ್ತು ಆ್ಯಂಡ್ರಾಯ್ಡ್ ಇದೀಗ ಗ್ರೂಪ್ ಸೆಟ್ಟಿಂಗ್ನಲ್ಲಿ ನಲ್ಲಿ ಅಪ್ರೂವ್ ನ್ಯೂ ಪಾರ್ಟಿಸಿಪಂಟ್ ವೈಶಿಷ್ಟ್ಯ ಪರಿಚಯಿಸಿದೆ. ಈ ವೈಶಿಷ್ಟ್ಯದ ಮೂಲಕ ಗ್ರೂಪ್ ಆಡ್ಮಿನಿಸ್ಟೇಟರ್, ತಮ್ಮ ಗುಂಪುಗಳಲ್ಲಿ ಹೊಸ ಸದಸ್ಯರ ಅನುಮೋದನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಗ್ರೂಪ್ಗಳಿಗೆ ಯಾರು ಬೇಕಾದರೂ ಸೇರಬಹುದು ಎಂಬ ಅವಕಾಶ ಇದ್ದಾಗ, ಆಡ್ಮಿನ್ ಅನುಮತಿ ಮೇಲೆ ಇದು ಕಾರ್ಯ ನಿರ್ವಹಣೆ ಮಾಡಬಹುದು.
ಈ ವೈಶಿಷ್ಟ್ಯವು ಗುಂಪಿಗೆ ಸೇರುವವರ ಮೇಲೆ ಹೆಚ್ಚಿನ ನಿಯಂತ್ರಣ ಮಾಡಲು ಸಾಧ್ಯವಾಗಲುತ್ತದೆ. ಜೊತೆಗೆ ಹೊಸ ಭಾಗವಹಿಸುವವರ ಆಯ್ಕೆಯನ್ನು ಟಾಗಲ್ ಮಾಡುವ ಮೂಲಕ ಹೊಸದಾಗಿ ಗುಂಪಿಗೆ ಸೇರುವವರಿಗೆ ಒಪ್ಪಿಗೆ ಸೂಚಿಸಲು ಅಥವಾ ತಿರಸ್ಕರಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಮಂದಿನ ದಿನದಲ್ಲಿ ಇನ್ನಷ್ಟು ಬೀಟಾ ಪರೀಕ್ಷಕಗೆ ಒಳಪಡಲಿದ್ದು, ಶೀಘ್ರದಲ್ಲೇ ಹೊರ ಬರಲು ಸಜ್ಜಾಗಿದೆ ಎನ್ನಲಾಗಿದೆ.
ಶೆಡ್ಯೂಲ್ ಗ್ರೂಪ್ ಕಾಲ್ ಫೀಚರ್ : ಈ ತಂತ್ರಜ್ಞಾನ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಇನ್ನು ಈ ಶೆಡ್ಯೂಲ್ ಗ್ರೂಪ್ ಕಾಲ್ಸ್ (ವೇಳಾಪಟ್ಟಿ ಗುಂಪು ಕರೆ) ತಂತ್ರಜ್ಞಾನವು ವಾಟ್ಸ್ಆ್ಯಪ್ ಬಳಕೆದಾರರು ಇತರ ವಾಟ್ಸ್ಆ್ಯಪ್ ಗುಂಪಿನ ಸದಸ್ಯರೊಂದಿಗೆ ಕರೆ ಮಾಡಲು ಬಳಕೆ ಮಾಡಬಹುದಾಗಿದೆ. ಇಲ್ಲಿ ಬಳಕೆದಾರರಿಗೆ ಒಂದು ಆಯ್ಕೆಯನ್ನು ನೀಡಲಾಗಿರುತ್ತದೆ. ಈ ಆಯ್ಕೆಯ ಮೂಲಕ ಬಳಕೆದಾರರು ಯಾವಾಗ ಮತ್ತು ಯಾರಿಗೆ ಕರೆ ಮಾಡಬಹುದು ಎಂಬುದನ್ನು ನಿರ್ಧರಿಸಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ
ಇದನ್ನೂ ಓದಿ: ಫೇಸ್ಬುಕ್ನಿಂದ ಟ್ವಿಟರ್ ಮಾದರಿಯ ಆ್ಯಪ್ ಶೀಘ್ರ: ಕಾಪಿ ಕ್ಯಾಟ್ ಎಂದ ಮಸ್ಕ್!