ನವದೆಹಲಿ: ಸ್ಪಾಟಿಫೈನ ಜಾಗತಿಕ ಬೆಳವಣಿಗೆಗೆ ಭಾರತ ಗಣನೀಯ ಕೊಡುಗೆ ನೀಡಿದೆ. ಅಲ್ಲದೇ ಸ್ವೀಡಿಷ್ನ ಮ್ಯೂಜಿಕ್ ಸ್ಟ್ರೀಮಿಂಗ್ ಜೇಂಟ್ ಈ ವರ್ಷ ಶಿಕ್ಷಣ ನೀಡುವುದರ ಜೊತೆಗೆ ಹೆಚ್ಚಿನ ಸ್ಥಳೀಯ ಪ್ರತಿಭೆಗಳನ್ನ ಜಾಗತಿಕ ಹಂತಕ್ಕೆ ಕೊಂಡೊಯ್ಯುವುದನ್ನು ದ್ವಿಗುಣಗೊಳಿಸಲಿದೆ ಎಂದು ಕಂಪನಿಯ ಭಾರತದ ಮುಖ್ಯಸ್ಥರು ಸೋಮವಾರ ಹೇಳಿದ್ದಾರೆ.
ಭಾರತದಲ್ಲಿನ ಸಾವಿರಾರು ಕಲಾವಿದರು ಮತ್ತು ಪಾಡ್‌ಕಾಸ್ಟರ್‌ಗಳು ಸ್ಪಾಟಿಫೈನನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಈಗಾಗಲೇ ಶಿಕ್ಷಣವನ್ನು ಪಡೆದಿದ್ದಾರೆ. ಸ್ಪಾಟಿಫೈ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಮರ್‌ಜಿತ್ ಸಿಂಗ್ ಬಾತ್ರಾ ಅವರ ಪ್ರಕಾರ, ಸ್ಪಾಟಿಫೈನಲ್ಲಿ ಭಾರತದ ಕಲಾವಿದರು ಹೆಚ್ಚಾಗಿದ್ದಾರೆ. 'ಮಾಸ್ಟರ್‌ಕ್ಲಾಸ್'ಗಳಿಂದಾಗಿ ಅದರ ಆ್ಯಂಕರ್ ಪ್ಲಾಟ್‌ಫಾರ್ಮ್‌ನಲ್ಲಿ ರಚಿಸಲಾದ ಪಾಡ್‌ಕಾಸ್ಟ್‌ಗಳು 2020 ರಿಂದ ಕಳೆದ ವರ್ಷದ ಅಂತ್ಯದವರೆಗೆ 130ರಷ್ಟು ಹೆಚ್ಚಾಗಿದೆ. ಭಾರತವು ನಮ್ಮ ಜಾಗತಿಕ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡಿದೆ. ವಿಶೇಷವಾಗಿ ಕಳೆದ ವರ್ಷದಲ್ಲಿ ಹೆಚ್ಚು ಕೊಡುಗೆ ನೀಡಿದ್ದಾರೆ ಎಂದು ಬಾತ್ರಾ ಹೇಳಿದ್ದಾರೆ.
ಇದನ್ನೂ ಓದಿ:ಭಾರತೀಯ ನೌಕಾಪಡೆಯು ಆದ್ಯತೆಯ ಭದ್ರತಾ ಪಾಲುದಾರರಾಗಲು ಬಯಸುತ್ತಿದೆ: ನೌಕಾಪಡೆಯ ಮುಖ್ಯಸ್ಥ
2021 ರ ನಾಲ್ಕನೇ ತ್ರೈಮಾಸಿಕ (Q4) ದಲ್ಲಿ ಕಂಪನಿಯು ತನ್ನ ಪಾವತಿಸಿದ ಚಂದಾದಾರರ ಸಂಖ್ಯೆಯನ್ನು ಜಾಗತಿಕವಾಗಿ 180 ಮಿಲಿಯನ್‌ಗೆ ಹೆಚ್ಚಿಸಿಕೊಂಡಿದೆ. ಬಳಕೆದಾರರ ವಿಷಯದಲ್ಲಿ ಭಾರತವು ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಮಾಸಿಕ ಸಕ್ರಿಯ ಬಳಕೆದಾರರು 18 ಪ್ರತಿಶತದಷ್ಟು ಇದ್ದಾರೆ. ಈ ತಿಂಗಳಿಗೆ ಸ್ಪಾಟಿಫೈ ಭಾರತದಲ್ಲಿ ಆರಂಭವಾಗಿ ಮೂರು ವರ್ಷವಾಗಿದೆ. 2021 ರಲ್ಲಿ ನಾಗ್ಪುರ, ಜೋಧ್‌ಪುರ, ಇಂಫಾಲ್ ಮತ್ತು ಎರ್ನಾಕುಲಂ ಸೇರಿದಂತೆ 7,500 ಕ್ಕೂ ಹೆಚ್ಚು ನಗರ ಮತ್ತು ಪಟ್ಟಣಗಳಲ್ಲಿ ಸ್ಟ್ರೀಮ್ ಮಾಡಲಾಗಿದೆ.
ಭಾರತದಲ್ಲಿ ಸ್ಪಾಟಿಫೈ ಬಳಕೆದಾರರಿಂದ ನಿತ್ಯ 1,50,000 ಕ್ಕೂ ಹೆಚ್ಚು ಪ್ಲೇಪಟ್ಟಿಗಳನ್ನು ರಚಿಸಲಾಗುತ್ತಿದೆ. ಇದು ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು ರಚಿಸಿದ ಪ್ಲೇಪಟ್ಟಿಗಳಲ್ಲಿ ಅಗ್ರ 20 ಮಾರುಕಟ್ಟೆಗಳಲ್ಲಿ ಭಾರತವನ್ನು ಇರಿಸುತ್ತದೆ. ಪ್ರಾರಂಭಿಸಿದ ದಿನದಿಂದ, ಸ್ಪಾಟಿಫೈನಲ್ಲಿ ಭಾರತೀಯ ಕಲಾವಿದರ ಸಂಖ್ಯೆಯು 13 ಪಟ್ಟು ಹೆಚ್ಚಾಗಿದೆ. ಆದರೆ, ಆ್ಯಂಕರ್ನಲ್ಲಿ ರಚಿಸಲಾದ ಪಾಡ್‌ಕಾಸ್ಟ್‌ಗಳು 2020 ರ ಆರಂಭದಿಂದ ಕಳೆದ ವರ್ಷದ ಅಂತ್ಯದವರೆಗೆ 130 ಪಟ್ಟು ಹೆಚ್ಚಾಗಿದೆ. ಇಂದು, ಭಾರತದಲ್ಲಿ ನಾಲ್ಕು ಜನರಲ್ಲಿ ಒಬ್ಬರು ಸ್ಪಾಟಿಫೈ ಬಳಸುತ್ತಾರೆ ಎಂದು ಬಾತ್ರಾ ಹೇಳುತ್ತಾರೆ.