ಜಬಲ್ಪುರ್ (ಮಧ್ಯಪ್ರದೇಶ): ಭಾರತದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಪರೀಕ್ಷಾರ್ಥ ಚಾಲನೆಯ ಸಮಯದಲ್ಲಿ 180 ಕಿಮೀ ವೇಗದ ಮಿತಿಯನ್ನು ಮುರಿದು ಮುನ್ನಗ್ಗುವ ಮೂಲಕ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ.
ಕೇಂದ್ರ ರೈಲ್ವೇ ಸಚಿವ ಅಶ್ವನಿ ವೈಷ್ಣವ್ ಅವರು ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಂದೇಭಾರತ್-2 ವೇಗದ ಪ್ರಯೋಗವು ಕೋಟಾ - ನಾಗ್ಡಾ ವಿಭಾಗದ ನಡುವೆ 120 ಕಿಮೀ ವೇಗದೊಂದಿಗೆ130/150 ಮತ್ತು 180 ಕಿಮೀ ವೇಗದವರೆಗೂ ಸಾಗಿದೆ.
ವಂದೇ ಭಾರತ್ ರೈಲಿನ ಪ್ರಾಥಮಿಕ ತಪಾಸಣೆ ವೇಳೆ ವಾಷಿಂಗ್ ಪಿಟ್ ಎಲ್ಲವನ್ನು ಶುಚಿಗೊಳಿಸಲಾಯಿತು. ಇದಲ್ಲದೇ, ರೈಲಿನ ಎಲ್ಲ ಉಪಕರಣಗಳು ಮತ್ತು ಪ್ಯಾನಲ್‌ಗಳನ್ನು ಸಹ ಪರಿಶೀಲಿಸಲಾಯಿತು. ವಂದೇ ಭಾರತ್‌ನ ವೇಗ ಪ್ರಯೋಗವನ್ನು ಕೋಟಾ - ನಾಗ್ಡಾ ರೈಲ್ವೆ ವಿಭಾಗದಲ್ಲಿ ವಿವಿಧ ವೇಗದ ಹಂತಗಳಲ್ಲಿ ನಡೆಸಿ ಸಾಮರ್ಥ್ಯವನ್ನು ಪುನಃ ಪುನಃ ಪರಿಶೀಲನೆ ನಡೆಸಲಾಯಿತು.
RDSO ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯ ತಂಡವು ಹೊಸದಾಗಿ ವಿನ್ಯಾಸಗೊಳಿಸಲಾದ ವಂದೇ ಭಾರತ್ ರೈಲು ಸೆಟ್‌ನೊಂದಿಗೆ ಗರಿಷ್ಠ 180 kmph ಪರೀಕ್ಷಾ ವೇಗದೊಂದಿಗೆ ರೈಲಿನ 16 ಕೋಚ್‌ಗಳ ಮೂಲ ಮಾದರಿಯ ರೇಕ್‌ಗಳೊಂದಿಗೆ ಈ ಪ್ರಯೋಗ ಕೈಗೊಳ್ಳಲಾಗಿದೆ.
ಎಲ್ಲೆಲ್ಲಿ ಪರೀಕ್ಷಾರ್ಥ ಪ್ರಯೋಗ: ಕೋಟಾ ವಿಭಾಗದಲ್ಲಿ ವಿವಿಧ ಹಂತದ ಪ್ರಯೋಗಗಳನ್ನು ನಡೆಸಲಾಗಿದೆ. ಕೋಟಾ ಮತ್ತು ಘಾಟ್ ಕಾ ಬಾರಾನಾ ನಡುವೆ ಹಂತ ಮೊದಲ ಹಂತದ ಪ್ರಯೋಗ, ಎರಡನೇ ಪ್ರಯೋಗ ಘಾಟ್ ಕಾ ಬಾರಾನಾ ಮತ್ತು ಕೋಟಾದಲ್ಲಿ ನಡೆದರೆ ಕುರ್ಲಾಸಿ ಮತ್ತು ರಾಮ್‌ಗಂಜ್ ಮಂಡಿ ನಡುವಿನ ಡೌನ್ ಲೈನ್‌ನಲ್ಲಿ ಮೂರನೇ ಟ್ರಯಲ್ ನಾನ್-ರೆಕಾರ್ಡಿಂಗ್ ನಡೆದಿದೆ. ಕುರ್ಲಾಸಿ ಮತ್ತು ರಾಮಗಂಜ್ ಮಂಡಿ ನಡುವಿನ ಡೌನ್ ಲೈನ್‌ನಲ್ಲಿ ನಾಲ್ಕನೇ ಹಾಗೂ ಐದನೇ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು. ಇನ್ನು ಆರನೇ ಪ್ರಯೋಗ ಕುರ್ಲಾಸಿ ಮತ್ತು ರಾಮಗಂಜ್ ಮಂಡಿ ನಡುವೆ ಡೌನ್ ಲೈನ್ ಮತ್ತು ಲಾಬನ್ ಅನ್ನು ಡೌನ್ ಲೈನ್‌ನಲ್ಲಿ ಮಾಡಲಾಗಿದೆ.
ಹಲವು ಕಡೆ 180 ಕಿ.ಮೀ ವೇಗವನ್ನು ಮುಟ್ಟಿ ಗುರಿ ಸಾಧಿಸಿದ ವಂದೇ ಎಕ್ಸ್‌ಪ್ರೆಸ್ ರೈಲು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಇದು ಅರೆ - ಹೈ-ವೇಗದ ರೈಲಾಗಿದೆ. ವಂದೇ ಭಾರತ್ ರೈಲು ಸ್ವಯಂ ಚಾಲಿತ ಎಂಜಿನ್ ಹೊಂದಿರುವ ಟ್ರೇನ್ ಆಗಿದೆ. ಅಂದರೆ, ಇದು ಪ್ರತ್ಯೇಕ ಎಂಜಿನ್ ಹೊಂದಿಲ್ಲ. ಇದು ಸ್ವಯಂಚಾಲಿತ ಬಾಗಿಲುಗಳು ಮತ್ತು ಹವಾನಿಯಂತ್ರಿತ ಚೇರ್ ಕಾರ್ ಕೋಚ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲ 180 ಡಿಗ್ರಿಗಳವರೆಗೆ ತಿರುಗಬಲ್ಲ ರಿವಾಲ್ವಿಂಗ್ ಕುರ್ಚಿಯನ್ನು ಹೊಂದಿದೆ.
ಇದನ್ನು ಓದಿ:ಮಾರ್ಕ್ ಜುಕರ್ಬರ್ಗ್ರ ಮೆಟಾದಿಂದ ಅಕ್ಟೋಬರ್ನಲ್ಲಿ ಹೊಸ ವಿಆರ್ ಹೆಡ್‌ಸೆಟ್ ಬಿಡುಗಡೆ