ಕರ್ನಾಟಕ

karnataka

ETV Bharat / science-and-technology

ಟ್ವಿಟರ್ ಬಳಕೆದಾರರಿಗೆ ಗುಡ್ ನ್ಯೂಸ್.. ಮೂರು ಬಣ್ಣಗಳನ್ನು ಪಡೆಯಲಿರುವ ಖಾತೆಗಳು

ಕಂಪನಿಗಳಿಗೆ ಚಿನ್ನದ ಬಣ್ಣ, ಸರ್ಕಾರದ ಖಾತೆಗೆ ಬೂದು ಬಣ್ಣ ಮತ್ತು ಸೆಲಿಬ್ರಿಟಿ ಅಥವಾ ಇತರೆ ವ್ಯಕ್ತಿಗಳ ಖಾತೆಗಳು ಬ್ಲೂ ಬಣ್ಣದ ಟಿಕ್​ಗಳನ್ನು ಪಡೆಯಲಿದೆ.

Twitter accounts are now verified with three colours
ಟ್ವಿಟರ್ ಬಳಕೆದಾರರಿಗೆ ಗುಡ್ ನ್ಯೂಸ್:ಮೂರು ಬಣ್ಣಗಳನ್ನು ಪಡೆಯಲಿರುವ ಖಾತೆಗಳು

By

Published : Dec 13, 2022, 12:32 PM IST

ವಾಷಿಂಗ್ಟನ್:ಟ್ವಿಟರ್​ನಲ್ಲಿ ನೂತನ ಬದಲಾವಣೆಯೊಂದು ಆಗಿದೆ. ಪ್ರತಿ ಖಾತೆಗೂ ಬ್ಲೂಟಿಕ್​ ಇದ್ದಿದ್ದು, ಇದೀಗ ಕೆಲವು ಖಾತೆಗಳು ಚಿನ್ನದ ಬಣ್ಣಕ್ಕೆ ತಿರುಗಿವೆ. ಕಂಪನಿಗಳ ಖಾತೆಗಳಿಗೆ ಚಿನ್ನದ ಬಣ್ಣ, ಸರ್ಕಾರದ ಖಾತೆಗೆ ಬೂದು ಬಣ್ಣ ಮತ್ತು ಸೆಲಿಬ್ರಿಟಿ ಅಥವಾ ಇತರೆ ವ್ಯಕ್ತಿಗಳ ಖಾತೆಗಳು ಬ್ಲೂ ಬಣ್ಣದ ಟಿಕ್​ಗಳನ್ನು ಪಡೆಯುತ್ತದೆ ಎಂದು ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ.

ಹಲವು ಬಳಕೆದಾರರು ಟ್ವಿಟರ್ ಚಂದಾದಾರ ಯೋಜನೆಯನ್ನು ಪಡೆದುಕೊಂಡು ಖ್ಯಾತ ವ್ಯಕ್ತಿಗಳ ಹೆಸರಿನಲ್ಲಿ ಟ್ವಿಟರ್ ಖಾತೆಗಳನ್ನು ತೆರೆದು ಜನರನ್ನು ಹಾದಿತಪ್ಪಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಎಲಾನ್​ ಮಸ್ಕ್(Elon Musk) ಚಂದಾ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮುಂದಿನ ಶುಕ್ರವಾರದಿಂದ ಪುನಾರಂಭಿಸಲಾಗುವುದು ಎಂದು ಹೇಳಿದ್ದರು. ಆ ಬಳಿಕ ಖಾತೆಗಳ ಬಣ್ಣಗಳು ಬದಲಾಗಲಿವೆ ಎಂಬ ಮಾಹಿತಿಯನ್ನು ಹೊರಹಾಕಿದ್ದರು. ಇದೀಗ ಅಧಿಕೃತವಾಗಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ಟ್ವಿಟರ್​ ಭಾನುವಾರದಿಂದ ಎಲ್ಲಾ ಬಳಕೆದಾರರಿಗೆ 'ಕಮ್ಯೂನಿಟಿ ನೋಟ್ಸ್​' ಎನ್ನುವ ಹೊಸ ಆಪ್ಷನ್​ ಒಂದನ್ನು ನೀಡಿದ್ದು, ಕಮ್ಯೂನಿಟಿ ನೋಟ್ಸ್​ ಮೂಲಕ ಉತ್ತಮ ಮಾಹಿತಿಯುಳ್ಳ ಜಗತ್ತನ್ನು ನಿರ್ಮಿಸುವ ಗುರಿಯನ್ನು ಟ್ವಿಟರ್ ಹೊಂದಿದೆ. ಇಲ್ಲಿ ಟ್ವಿಟ್ಟರ್​ ಬಳಕೆದಾರರು ಯಾವುದೇ ಟ್ವೀಟ್​ ಮೇಲೆ ಟಿಪ್ಪಣಿಗಳನ್ನು ಬರೆಯಬಹುದು. ಅಲ್ಲದೇ ಮೈಕ್ರೋ ಬ್ಲಾಗಿಂಗ್​ ಪ್ಲಾಟ್‌ಫಾರ್ಮ್ ಟ್ವಿಟರ್​ನಲ್ಲಿ ಅಕ್ಷರಗಳ ಮಿತಿಯನ್ನು 280 ರಿಂದ 4000ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ:ಟ್ವಿಟರ್​ ಪದಗಳ ಮಿತಿ 280 ರಿಂದ 4000 ಕ್ಕೆ ಹೆಚ್ಚಳ: ಬಳಕೆದಾರರ ಪ್ರಶ್ನೆಗೆ ಹೌದು ಎಂದ ಎಲಾನ್​ ಮಸ್ಕ್​

ABOUT THE AUTHOR

...view details