ನವದೆಹಲಿ :ಭಾರತೀಯ ವಿಜ್ಞಾನಿಗಳು ಮೊಟ್ಟಮೊದಲ ಬಾರಿಗೆ ಅಧಿಕ ಶಕ್ತಿಯ ಸ್ಫೋಟಕಗಳಲ್ಲಿ ಬಳಸಲಾಗುವ ನೈಟ್ರೊ-ಆರೊಮ್ಯಾಟಿಕ್ ರಾಸಾಯನಿಕಗಳನ್ನು ಶೀಘ್ರ ಪತ್ತೆ ಹಚ್ಚಲು ಥರ್ಮಲ್ ಸ್ಟೇಬಲ್ ಮತ್ತು ಕಡಿಮೆ ವೆಚ್ಚದ ಎಲೆಕ್ಟ್ರಾನಿಕ್ ಪಾಲಿಮರ್ ಆಧಾರಿತ ಸೆನ್ಸರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಶುಕ್ರವಾರ ತಿಳಿಸಿದೆ.
ಸ್ಫೋಟಕಗಳನ್ನು ನಾಶಪಡಿಸದೆ ಅವುಗಳನ್ನು ಪತ್ತೆ ಹಚ್ಚುವುದು ಅತ್ಯಗತ್ಯ ಮತ್ತು ಕ್ರಿಮಿನಲ್ ತನಿಖೆಗಳು, ಮೈನ್‌ಫೀಲ್ಡ್ ಪರಿಹಾರ, ಮಿಲಿಟರಿ ಅಪ್ಲಿಕೇಶನ್‌ಗಳು, ಭದ್ರತಾ ಅಪ್ಲಿಕೇಶನ್‌ಗಳು ಮತ್ತು ರಾಸಾಯನಿಕ ಸಂವೇದಕಗಳು ಅಂತಹ ಸಂದರ್ಭಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದೆ.
ಸ್ಫೋಟಕ ಪಾಲಿ-ನೈಟ್ರೊರೊಮ್ಯಾಟಿಕ್ ರಾಸಾಯನಿಕಗಳನ್ನು ಸಾಮಾನ್ಯವಾಗಿ ಅತ್ಯಾಧುನಿಕ ತಂತ್ರಗಳಿಂದ ವಿಶ್ಲೇಷಿಸಬಹುದು. ಆದರೆ, ಕ್ರಿಮಿನಾಲಜಿ ಪ್ರಯೋಗಾಲಯಗಳು ಅಥವಾ ಮರುಪಡೆಯಲಾದ ಸೇನಾ ತಾಣಗಳಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಲು ಅಥವಾ ಉಗ್ರರ ಬಳಿ ಇರುವ ಸ್ಫೋಟಕಗಳನ್ನು ಪತ್ತೆಹಚ್ಚಲು ಸಾಮಾನ್ಯವಾಗಿ ಸರಳ, ಅಗ್ಗದ ಮತ್ತು ಆಯ್ದ ತಂತ್ರಗಳು ಬೇಕಾಗುತ್ತವೆ. ಇದು ಸುರಕ್ಷತೆಯ ದೃಷ್ಟಿಯಿಂದ ವಿನಾಶಕಾರಿ ಸ್ವಭಾವದ್ದಾಗಿರಬಾರದು ಎಂದು ತಿಳಿಸಲಾಗಿದೆ.
ಹಿಂದಿನ ಅಧ್ಯಯನಗಳು ಹೆಚ್ಚಾಗಿ ಫೋಟೋ-ಲ್ಯುಮಿನಿಸೆಂಟ್ ವಸ್ತುವಿನಿಂದ ಆಧರಿಸಿವೆ. ಇದಕ್ಕೂ ಮೊದಲು ಕೈಬಳಕೆಯ ಎಲ್ಇಡಿ ಲೈಟ್ ಆಧಾರಿತ ಯಂತ್ರದಿಂದ ಈ ವಸ್ತುಗಳ ಪತ್ತೆ ಕಾರ್ಯ ಮಾಡಲಾಗುತ್ತಿತ್ತು ಎಂದು ಡಿಎಸ್‌ಟಿ ತಿಳಿಸಿದೆ.