ನವದೆಹಲಿ:ಚೀನಾದ ವುಹಾನ್ನಲ್ಲಿರುವ ವಿವಾದಾತ್ಮಕ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಆಶ್ಚರ್ಯಕರ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಕೋವಿಡ್-19 "ಮಾನವ ನಿರ್ಮಿತ ವೈರಸ್" ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಅನುದಾನಿತ ಸಂಶೋಧನಾ ಸಂಸ್ಥೆಯಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ನಿಂದ ಕೋವಿಡ್ ಎಂಬ ವೈರಸ್ ಹೊರ ಬಂದಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿತ್ತು. ಬ್ರಿಟಿಷ್ ಪತ್ರಿಕೆ ದಿ ಸನ್ನಲ್ಲಿ ಅಮೆರಿಕ ಮೂಲದ ಸಂಶೋಧಕ ಆಂಡ್ರ್ಯೂ ಹಫ್ ಅವರ ಹೇಳಿಕೆ ಉಲ್ಲೇಖಿಸಿ ಈ ಕುರಿತು ಸುದ್ದಿ ಮಾಡಲಾಗಿತ್ತು.
ಚೀನಾದ ವುಹಾನ್ನಲ್ಲಿರುವ ಸಂಶೋಧನಾ ಪ್ರಯೋಗಾಲಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಫ್ "ದಿ ಟ್ರೂತ್ ಅಬೌಟ್ ವುಹಾನ್" ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ. ಚೀನಾದಲ್ಲಿ ಅಧ್ಯಯನಕ್ಕೆ ಅಮರಿಕ ಸರ್ಕಾರವು ಧನಸಹಾಯ ಮಾಡಿತ್ತು ಎಂಬ ಅಂಶವನ್ನು ಈ ಪುಸ್ತಕಕದಲ್ಲಿ ಉಲ್ಲೇಖಿಸಲಾಗಿದೆ. ಇಂಗ್ಲೆಂಡ್ ಮೂಲದ ಟ್ಯಾಬ್ಲಾಯ್ಡ್ ದಿ ಸನ್ನಲ್ಲಿ ಹಫ್ ಪುಸ್ತಕದ ಆಯ್ದ ಭಾಗಗಳನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ:ಆಸ್ಪತ್ರೆಗೆ ದಾಖಲಾದ 11% ಕೋವಿಡ್ ಸೋಂಕಿತರಿಗೆ ಶ್ವಾಸಕೋಶದ ಸಮಸ್ಯೆ
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಹಫ್ ಅವರು ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭ ರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ಚೀನಾದ ಸರ್ಕಾರಿ ಅಧಿಕಾರಿಗಳು ಮತ್ತು ಲ್ಯಾಬ್ ಕೆಲಸಗಾರರು ವೈರಸ್ ಈ ಲ್ಯಾಬ್ನಲ್ಲಿಯೇ ಹುಟ್ಟಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.