ನವದೆಹಲಿ : ನಮ್ಮ ಅಮೂಲ್ಯ ಫೋಟೊಗಳು ಮತ್ತು ಪ್ರಮುಖ ಫೈಲ್‌ಗಳನ್ನು ಸಂಗ್ರಹಿಸಲು ನಾವು ಫೋಟೋ ಆಲ್ಬಮ್‌ಗಳು, ಡಾಕ್ಯುಮೆಂಟ್ ಫೈಲ್‌ಗಳು, ರೀಲ್ ಕ್ಯಾಮೆರಾಗಳು, ಸಿಡಿಗಳು ಮತ್ತು ಕ್ಯಾಸೆಟ್‌ಗಳಂತಹ ಭೌತಿಕ ಶೇಖರಣಾ ಮಾಧ್ಯಮವನ್ನೇ ಅವಲಂಬಿಸಿದ್ದೇವೆ. ಈ ಭೌತಿಕ ವಸ್ತುಗಳು ನಮ್ಮ ಹಿಂದಿನ ನೆನಪುಗಳನ್ನು ಸಂಗ್ರಹಿಸಿ ಇಡುತ್ತವೆ.
ಆದರೆ ಈಗ ಸ್ಮಾರ್ಟ್‌ಫೋನ್‌ಗಳ ಆಗಮನದಿಂದ ಡೇಟಾ ಸಂಗ್ರಹಿಸುವುದು ಮತ್ತು ಅದನ್ನು ಮತ್ತೆ ನೋಡುವುದು ಇದು ತುಂಬಾ ಸುಲಭವಾಗಿದೆ. ನಮ್ಮ ಕೈಯಲ್ಲಿರುವ ಸಾಧನಗಳೇ ಈಗ ನಮ್ಮ ಮುಖ್ಯ ಸ್ಟೋರೇಜ್ ಡಿವೈಸ್ಗಳಾಗುತ್ತಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿ ಕ್ಷಣದ ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ ಮತ್ತು ಹಂಚಿಕೊಳ್ಳಲಾಗುತ್ತದೆ.
ಹೊಸ ಸ್ಟೋರೇಜ್ ಕ್ರಾಂತಿ ತರಲು ಸಿದ್ಧ:ಹೀಗಾಗಿ ಸ್ಮಾರ್ಟ್‌ಫೋನ್‌ನ ಡೇಟಾ ಸ್ಟೋರೇಜ್ ಸಾಮರ್ಥ್ಯವು ಬಳಕೆದಾರರಿಗೆ, ವಿಶೇಷವಾಗಿ ಯುವ ಜನತೆಗೆ ಪ್ರಮುಖ ಆದ್ಯತೆಯಾಗಿದೆ. ತನ್ನ ಬಳಕೆದಾರರ ಈ ಬೇಡಿಕೆಯನ್ನು ಪೂರೈಸಲು, ಯುವ ಮತ್ತು ಡೈನಾಮಿಕ್ ಬ್ರ್ಯಾಂಡ್ ರಿಯಲ್‌ಮಿ ತನ್ನ ಇತ್ತೀಚಿನ ರಿಯಲ್‌ಮಿ ನಾರ್ಜೊ 60 ಸರಣಿ 5G ಯೊಂದಿಗೆ ಹೊಸ ಸ್ಟೋರೇಜ್ ಕ್ರಾಂತಿ ತರಲು ಸಿದ್ಧವಾಗಿದೆ.
ನಾರ್ಜೊ 60 ಸಿರೀಸ್ 5G ಯ ಪರಿಚಯದೊಂದಿಗೆ ರಿಯಲ್ ಮಿ ಮತ್ತೊಮ್ಮೆ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ ಎಂದು ಸಾಬೀತುಪಡಿಸಿದೆ. ರಿಯಲ್ ಮಿ ನಾರ್ಜೊ 60 ಸರಣಿ 5G ಸಮಗ್ರ ಶೇಖರಣಾ ಆಯ್ಕೆಗಳನ್ನು ನೀಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ. ಈ ಸರಣಿಯ 1TB ರಿಯಲ್ ಮಿ ಸರಣಿಯು ಭಾರತೀಯ ಮಾರುಕಟ್ಟೆಗೆ ಬರುತ್ತಿರುವ ಪ್ರಥಮ ಸರಣಿಯಾಗಿದೆ.