ನವದೆಹಲಿ: ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ರಿಯಲ್‌ಮಿ ತಾನು ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಫೋನ್ ರಿಯಲ್‌ಮಿ ಸಿ 53 ಮಾರಾಟಕ್ಕಾಗಿ ಜುಲೈ 19 ರಂದು "ಅರ್ಲಿ ಬರ್ಡ್ ಸೇಲ್" ಅನ್ನು ಘೋಷಿಸಿದೆ. ಕಂಪನಿಯ ಈ ಶ್ರೇಣಿಯಲ್ಲಿ realme C53 ಇದು 108MP ಕ್ಯಾಮೆರಾ ಹೊಂದಿರುವ ಮೊದಲ ಮತ್ತು ಏಕೈಕ ಸ್ಮಾರ್ಟ್‌ಫೋನ್ ಆಗಿದೆ.
realme ಡಾಟ್ com ವೆಬ್ಸೈಟ್ನಲ್ಲಿ ಮತ್ತು ಫ್ಲಿಪ್ಕಾರ್ಟ್ಗಳಲ್ಲಿ ಜುಲೈ 19 ರಂದು ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ಮಾರಾಟ ನಡೆಯಲಿದೆ. ರಿಯಲ್ ಮಿ C53 ಯ 6GB + 64GB ಮಾಡೆಲ್ಗಳ ಮೇಲೆ ಅರ್ಲಿ ಬರ್ಡ್ ಸೇಲ್ನಲ್ಲಿ ಖರೀದಿದಾರರು 1,000 ರೂ.ವರೆಗೆ ರಿಯಾಯಿತಿ ಪಡೆಯಬಹುದು. ರಿಯಲ್ C53 ಸ್ಮಾರ್ಟ್‌ಫೋನ್ 12GB ಡೈನಾಮಿಕ್ RAM + 128GB ROM ವರೆಗಿನ ದೊಡ್ಡ ಪ್ರಮಾಣದ ಮೆಮೊರಿಯನ್ನು ಹೊಂದಿದೆ. ಇದು 90Hz ಡಿಸ್ಪ್ಲೇ ಹಾಗೂ 7.99mm ಅಲ್ಟ್ರಾ-ಸ್ಲಿಮ್ ಹೊಳೆಯುವ ಚಾಂಪಿಯನ್ ವಿನ್ಯಾಸವನ್ನು ಹೊಂದಿದೆ.
ಇದು 18W SUPERVOOC ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ 5000mAh ಬ್ಯಾಟರಿ ಹೊಂದಿದೆ. ಶಕ್ತಿಯುತ ಆಕ್ಟಾ-ಕೋರ್ ಚಿಪ್‌ಸೆಟ್ ಇದರಲ್ಲಿದೆ. ರಿಯಲ್ ಇದು ತಂತ್ರಜ್ಞಾನದ ಬ್ರ್ಯಾಂಡ್ ಆಗಿದ್ದು, ಜಾಗತಿಕ ಬಳಕೆದಾರರಿಗೆ ಸಮಗ್ರ ಉನ್ನತ ಅನುಭವದೊಂದಿಗೆ ಲೀಪ್ - ಫಾರ್ವರ್ಡ್ ಉತ್ಪನ್ನಗಳನ್ನು ಒದಗಿಸುವಲ್ಲಿ ಪರಿಣತಿಯನ್ನು ಹೊಂದಿದೆ.
Realme C53 ವಿಶೇಷತೆಗಳು (ನಿರೀಕ್ಷಿತ)
ಡಿಸ್ಪ್ಲೇ: Realme C53 6.74-ಇಂಚಿನ IPS LCD HD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, 560 nits ಗರಿಷ್ಠ ಹೊಳಪು ಮತ್ತು 90.3 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ.
ಪ್ರೊಸೆಸರ್:ಫೋನ್ ಯುನಿಸೊಕ್ T612 SoC ನಿಂದ Mali-G57 GPU ನೊಂದಿಗೆ ಚಾಲಿತವಾಗಿದೆ.