ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಟೆಕ್ ದೈತ್ಯ ಗೂಗಲ್ ತನ್ನ ಹೋಮ್ ಅಪ್ಲಿಕೇಶನ್‌ನಲ್ಲಿ ಗೂಗಲ್ ಟಿವಿಯೊಂದಿಗೆ ಹೊಸ ಕ್ರೋಮ್ಕಾಸ್ಟ್ ಅನ್ನು ಬಿಡುಗಡೆ ಮಾಡುತ್ತದೆ ಎಂದು ವರದಿಯಾಗಿದೆ. ಕ್ರೋಮ್ಕಾಸ್ಟ್ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಮುಖಾಂತರ ಟಿವಿಗೆ ಸ್ಟ್ರೀಮ್ ಮಾಡುವ ತಂತ್ರಜ್ಞಾನವಾಗಿದ್ದು, ಇದರಿಂದ ನೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.
ಅಪ್ಲಿಕೇಶನ್ ಅಪ್ಡೇಟ್ ಪ್ರಕಾರ ಹೊಸ ಕ್ರೋಮ್ಕಾಸ್ಟ್ ಡಾಂಗಲ್ YTC ಕಲ್ಪಿತ ಹೆಸರಿನೊಂದಿಗೆ ಹೊಸ ಗೂಗಲ್ ಟಿವಿ ಸಾಧನವನ್ನು ಒಳಗೊಂಡಿದೆ ಎಂದು ಸ್ಯಾಮ್ ಮೊಬೈಲ್ ವರದಿ ಮಾಡಿದೆ. ಈ ಸಾಧನ ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಲಾಗಿದ್ದು, ಕ್ರೋಮ್ಕಾಸ್ಟ್ನ ಹಳೆಯ ಹೆಚ್ಡಿ ಆವೃತ್ತಿಕ್ಕಿಂತ ಹೆಚ್ಚಿನ ಗುಣಮಟ್ಟದ ಉತ್ಪನ್ನವಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೇ, ಕಂಪನಿಯು 2020 ರಲ್ಲಿ ಬಿಡುಗಡೆಯಾದ ಪ್ರಸ್ತುತ ಕ್ರೋಮ್ಕಾಸ್ಟ್ ಅನ್ನು ರಿಫ್ರೆಶ್ ಮಾಡಬೇಕಾಗಿದೆ.
ಈಗ ಬಿಡುಗಡೆಯಾಗುತ್ತಿರುವ ಹೊಸ ಸಾಧನವು ಹಳೆ ಆವೃತ್ತಿಯ ಡಾಂಗಲ್ಗಿಂತಲೂ ಹೆಚ್ಚು ಶಕ್ತಿಶಾಲಿ ಚಿಪ್ಸೆಟ್ ನೊಂದಿಗೆ ಬರುವ ನಿರೀಕ್ಷೆಯಿದೆ. ಸ್ಟೊರೇಜ್ ಮತ್ತು ಇತರ ಫೀಚರ್ಗಳಲ್ಲಿ ಸುಧಾರಣೆಗಳೂ ಇರಬಹುದು ಎಂದು ಸ್ಯಾಮ್ ಮೊಬೈಲ್ ವರದಿ ತಿಳಿಸಿದೆ. ಗೂಗಲ್ ಟಿವಿಯೊಂದಿಗೆ ಸೋರಿಕೆಯಾದ ಕ್ರೋಮ್ಕಾಸ್ಟ್ ಡಾಂಗಲ್ ಕುರಿತು ಟೆಕ್ ದೈತ್ಯ ಗೂಗಲ್ ಮೌನವಾಗಿದ್ದು, ಇದರ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಅದಾಗ್ಯೂ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಕ್ರೋಮ್ಕಾಸ್ಟ್ ಡಾಂಗಲ್ನ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಿನ ಮಟ್ಟದಲ್ಲಿ ಆಂಡ್ರಾಯ್ಡ್ ಟಿವಿ ಮತ್ತು ಗೂಗಲ್ ಟಿವಿ ಸಾಧನಗಳನ್ನು ಬಳಸುತ್ತಿದ್ದಾರೆ. ಈ ಸಾಧನಗಳನ್ನು ನಿಯಂತ್ರಣ ಮಾಡಲು ಬಳಸಲಾದ ರೆಫರೆನಸ್ ರಿಮೋಟ್ಗಳು ಯುನೈಟೆಡ್ ಕಿಂಗ್ಡಮ್ ಮೂಲದ ಕಂಪನಿಯಾದ TW ಎಲೆಕ್ಟ್ರಾನಿಕ್ಸ್ ರಿಮೋಟ್ಸ್, ಹಲವು ವರ್ಷಗಳ ನಂತರ ಹೊಸ ಆವೃತ್ತಿಯ ರಿಮೋಟ್ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.