ಕರ್ನಾಟಕ

karnataka

ETV Bharat / science-and-technology

ಅರಿವಳಿಕೆ ನೀಡಿದಾಗ ವ್ಯಕ್ತಿಗೆ ಆಕಸ್ಮಿಕ ಎಚ್ಚರವಾಗುವುದನ್ನು ಪತ್ತೆ ಮಾಡುವ ವಿಧಾನ ಕಂಡುಹಿಡಿದ ಸಂಶೋಧಕರು

ವ್ಯಕ್ತಿಗೆ ಅರಿವಳಿಕೆ ನೀಡಿದಾಗ ಆಕಸ್ಮಿಕ ಜಾಗೃತಿಗೆ ಒಳಗಾಗುವ ರೋಗಿಗಳನ್ನು ಗುರುತಿಸಲು ಹೊಸ ಅಧ್ಯಯನವೊಂದು ನರವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ. ಯಾವ ವ್ಯಕ್ತಿಗಳಿಗೆ ಎಷ್ಟು ಸರಾಸರಿ ಪ್ರಮಾಣದ ಅರಿವಳಿಕೆ ಅಗತ್ಯ ಇರಬಹುದು ಎಂಬುದನ್ನು ಸಹ ಇದು ಸೂಚಿಸುತ್ತದೆ.

ಅರಿವಳಿಕೆ ನೀಡಿದಾಗ ವ್ಯಕ್ತಿಗೆ ಆಕಸ್ಮಿಕ ಎಚ್ಚರವಾಗುವುದನ್ನು ಪತ್ತೆ ಮಾಡುವ ವಿಧಾನ ಕಂಡುಹಿಡಿದ ಸಂಶೋಧಕರು
Neuroscientists identified predisposition

By

Published : Feb 21, 2023, 4:40 PM IST

ಡಬ್ಲಿನ್ (ಐರ್ಲೆಂಡ್): ಅರಿವಳಿಕೆ ನೀಡಿದಾಗ ಆ ಅವಸ್ಥೆಯಲ್ಲಿರುವ ವ್ಯಕ್ತಿಗೆ ಆಕಸ್ಮಿಕ ಎಚ್ಚರಾಗುವ ವ್ಯಕ್ತಿಯ ಪ್ರಾಕ್ಲಿವಿಟಿಯನ್ನು ಊಹಿಸಬಲ್ಲ ಮೆದುಳಿನ ರಚನೆಗಳನ್ನು ಡಬ್ಲಿನ್ ಟ್ರಿನಿಟಿ ಕಾಲೇಜ್‌ನ ನರವಿಜ್ಞಾನಿಗಳು ಮೊದಲ ಬಾರಿಗೆ ಗುರುತಿಸಿದ್ದಾರೆ. ಈ ಸಂಶೋಧನೆಗಳು ಸರಾಸರಿ ಪ್ರಮಾಣದ ಅರಿವಳಿಕೆಗಿಂತ ಹೆಚ್ಚಿನ ಪ್ರಮಾಣದ ಅರಿವಳಿಕೆ ಅಗತ್ಯವಿರುವ ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಈ ಸಂಶೋಧನಾ ವರದಿಯು ಹ್ಯೂಮನ್ ಬ್ರೈನ್ ಮ್ಯಾಪಿಂಗ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಕ್ಲಿನಿಕಲ್ ಮೆಡಿಸಿನ್‌ನಲ್ಲಿ 150 ಕ್ಕೂ ಹೆಚ್ಚು ವರ್ಷಗಳಿಂದ ಅರಿವಳಿಕೆ ಬಳಸಲಾಗುತ್ತಿದ್ದರೂ ವ್ಯಕ್ತಿಯಿಂದ ವ್ಯಕ್ತಿಗೆ ಅದರ ಪರಿಣಾಮವು ಏಕೆ ವೈವಿಧ್ಯಮಯವಾಗಿರುತ್ತದೆ ಎಂಬುದು ವಿಜ್ಞಾನಿಗಳಿಗೆ ಸಂಪೂರ್ಣವಾಗಿ ಅರ್ಥವಾಗಿಲ್ಲ. ಸಾಮಾನ್ಯ ಅರಿವಳಿಕೆ ಸಮಯದಲ್ಲಿ ನಾಲ್ಕು ರೋಗಿಗಳಲ್ಲಿ ಒಬ್ಬರು ಪ್ರಜ್ಞಾಹೀನರಾಗುತ್ತಾರೆ ಎಂದು ಭಾವಿಸಲಾಗಿದೆ. ಆದರೆ, ಇದು ಕನಸು ಕಾಣುವಂತಹ ವ್ಯಕ್ತಿನಿಷ್ಠ ಅನುಭವಗಳನ್ನು ಹೊಂದಿರಬಹುದು ಮತ್ತು ಬಹಳ ಅಪರೂಪದ ಸಂದರ್ಭಗಳಲ್ಲಿ (0.05-0.2%) ವ್ಯಕ್ತಿಗಳು ವೈದ್ಯಕೀಯ ಕಾರ್ಯವಿಧಾನದ ಸಮಯದಲ್ಲಿ ಆಕಸ್ಮಿಕವಾಗಿ ಎಚ್ಚರವಾಗಿರುತ್ತಾರೆ.

ಮೂವರಲ್ಲಿ ಒಬ್ಬರು ನಿದ್ರಾಜನಕದಿಂದ ಪ್ರಭಾವಿತರಾಗಿರಲ್ಲ: ಮೂವರಲ್ಲಿ ಒಬ್ಬರು ತಮ್ಮ ಪ್ರತಿಕ್ರಿಯೆಯ ಸಮಯದಲ್ಲಿ ಮಧ್ಯಮ ಪ್ರೋಪೋಫೊಲ್ ನಿದ್ರಾಜನಕದಿಂದ ಪ್ರಭಾವಿತರಾಗುವುದಿಲ್ಲ ಎಂದು ಸಂಶೋಧನೆಯೊಂದು ಕಂಡುಹಿಡಿದಿದೆ. ಇದು ಅರಿವಳಿಕೆಯ ಪ್ರಮುಖ ಗುರಿಯಾಗಿರುವ ನಡವಳಿಕೆಯ ಪ್ರತಿಕ್ರಿಯೆಯ ನಿಗ್ರಹವನ್ನು ತಡೆಯುತ್ತದೆ. ಸಂಶೋಧನೆಯಲ್ಲಿ ಭಾಗವಹಿಸಿದ್ದ ಹಾಗೂ ಅರಿವಳಿಕೆಗೆ ನಿರೋಧಕವಾಗಿರುವರು, ಸಂಪೂರ್ಣವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಮೆದುಳಿನ ಮುಂಭಾಗದ ಪ್ಯಾರಿಯೆಟಲ್ ಪ್ರದೇಶಗಳ ಕಾರ್ಯ ಮತ್ತು ರಚನೆಗಳಲ್ಲಿ ಮೂಲ ವ್ಯತ್ಯಾಸಗಳನ್ನು ಹೊಂದಿದ್ದಾರೆ ಎಂದು ಸಂಶೋಧನೆಯು ಮೊದಲ ಬಾರಿಗೆ ತೋರಿಸಿಕೊಟ್ಟಿದೆ. ಮುಖ್ಯವಾಗಿ, ಈ ಮೆದುಳಿನ ವ್ಯತ್ಯಾಸಗಳನ್ನು ನಿದ್ರಾಜನಕಕ್ಕೆ ಮುಂಚಿತವಾಗಿ ಊಹಿಸಬಹುದು ಎಂಬುದನ್ನು ಸಂಶೋಧನೆ ಎತ್ತಿ ತೋರಿಸಿದೆ.

ಆಕಸ್ಮಿಕ ಅರಿವು ಬಹಳ ಆಘಾತಕಾರಿ:ಸಂಶೋಧನೆ ನೇತೃತ್ವ ವಹಿಸಿರುವ ಟ್ರಿನಿಟಿಯ ಸೈಕಾಲಜಿಯ ಅಸೋಸಿಯೇಟ್ ಪ್ರೊಫೆಸರ್ ಲೋರಿನಾ ನಾಸಿ ಮಾತನಾಡಿ, ನಿದ್ರಾಜನಕಕ್ಕೆ ಮುಂಚಿತವಾಗಿ ಅರಿವಳಿಕೆಗೆ ವ್ಯಕ್ತಿಯ ಪ್ರತಿಕ್ರಿಯೆಯನ್ನು ಕಂಡು ಹಿಡಿಯುವುದು ರೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮದ ಮೇಲೆ ಪ್ರಮುಖ ಪರಿಣಾಮಗಳನ್ನು ಹೊಂದಿದೆ. ಕ್ಲಿನಿಕಲ್ ಅರಿವಳಿಕೆ ಸಮಯದಲ್ಲಿ ಜಾಗೃತಿಯ ಮೇಲ್ವಿಚಾರಣೆ ಸುಧಾರಿಸಲು ನಮ್ಮ ಫಲಿತಾಂಶಗಳು ಹೊಸ ಗುರುತುಗಳನ್ನು ಎತ್ತಿ ತೋರಿಸುತ್ತವೆ. ಅಪರೂಪದ, ಕಾರ್ಯಾಚರಣೆಯ ಸಮಯದಲ್ಲಿ ಆಕಸ್ಮಿಕ ಅರಿವು ಬಹಳ ಆಘಾತಕಾರಿ ಮತ್ತು ಋಣಾತ್ಮಕ ದೀರ್ಘಕಾಲೀನ ಆರೋಗ್ಯ ಫಲಿತಾಂಶಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಆಘಾತಕಾರಿ ಒತ್ತಡದ ಅಸ್ವಸ್ಥತೆ, ಹಾಗೆಯೇ ಕ್ಲಿನಿಕಲ್ ಖಿನ್ನತೆ ಅಥವಾ ಫೋಬಿಯಾಗಳು ಎದುರಾಗಬಹುದು ಎಂದರು.

ದುರ್ಬಲ ಸಂಪರ್ಕ ಮತ್ತು ಸಣ್ಣ ಬೂದು ದ್ರವ್ಯದ ಪರಿಮಾಣವನ್ನು ಹೊಂದಿರುವ ವ್ಯಕ್ತಿಗಳಿಗೆ ಹೋಲಿಸಿದರೆ ಮೆದುಳಿನ ಮುಂಭಾಗದ ಪ್ರದೇಶಗಳಲ್ಲಿ ದೊಡ್ಡ ಬೂದು ದ್ರವ್ಯದ ಪರಿಮಾಣ ಹೊಂದಿರುವ ವ್ಯಕ್ತಿಗಳು ಮತ್ತು ಫ್ರಂಟೊ - ಪ್ಯಾರಿಯೆಟಲ್ ಮಿದುಳಿನ ಜಾಲಗಳಲ್ಲಿ ಬಲವಾದ ಕ್ರಿಯಾತ್ಮಕ ಸಂಪರ್ಕವನ್ನು ಹೊಂದಿರುವ ವ್ಯಕ್ತಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊಪೋಪೋಲ್ ಅಗತ್ಯವಿರಬಹುದು ಎಂಬುದನ್ನು ನಮ್ಮ ಸಂಶೋಧನೆಗಳು ಸೂಚಿಸುತ್ತವೆ ಎನ್ನುತ್ತಾರೆ ಲೋರಿನಾ.

17 ಆರೋಗ್ಯವಂತ ವ್ಯಕ್ತಿಗಳ ಮೇಲೆ ಸಂಶೋಧನೆ:ಐರ್ಲೆಂಡ್ ಮತ್ತು ಕೆನಡಾದಲ್ಲಿ ನಡೆಸಲಾದ ಸಂಶೋಧನೆಯು 17 ಆರೋಗ್ಯವಂತ ವ್ಯಕ್ತಿಗಳನ್ನು ಸಂಶೋಧನೆಗೆ ಒಳಪಡಿಸಿತು. ಇವರಿಗೆ ಅತ್ಯಂತ ಸಾಮಾನ್ಯವಾದ ಕ್ಲಿನಿಕಲ್ ಅರಿವಳಿಕೆ ಏಜೆಂಟ್ ಆಗಿರುವ ಪ್ರೊಪೋಫೋಲ್ ನೀಡಲಾಯಿತು. ಅವರು ಎಚ್ಚರವಾಗಿದ್ದಾಗ ಮತ್ತು ಅವರು ನಿದ್ರಾಹೀನರಾದಾಗ ಸರಳವಾದ ಧ್ವನಿಯೊಂದನ್ನು ಪತ್ತೆಹಚ್ಚಲು ಅವರು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಅಳೆಯಲಾಯಿತು. ಎರಡೂ ಮಾದರಿಗಳಲ್ಲಿ ಸರಳವಾದ ಕಥೆಯನ್ನು ಆಲಿಸಿದ 25 ಜನರ ಮೆದುಳಿನ ಚಟುವಟಿಕೆಯನ್ನು ಸಹ ಅಳೆಯಲಾಯಿತು.

ಇದನ್ನೂ ಓದಿ: ರಾಜ್ಯದ ಆರೋಗ್ಯ ಕಾರ್ಡ್​ಗೆ ದೇಶಾದ್ಯಂತ ಮಾನ್ಯತೆ: ಸಚಿವ ಡಾ.ಸುಧಾಕರ್

ABOUT THE AUTHOR

...view details