ಕರ್ನಾಟಕ

karnataka

ETV Bharat / science-and-technology

ಐಟಿ ನೇಮಕಾತಿ ಶೇ 21ರಷ್ಟು ಕುಸಿತ; ಎಐನಲ್ಲಿ ಉದ್ಯೋಗಾವಕಾಶ ಹೆಚ್ಚಳ

ಭಾರತದ ಐಟಿ ನೇಮಕಾತಿಗಳು ಕಳೆದ ಡಿಸೆಂಬರ್​ನಲ್ಲಿ ಶೇ 21ರಷ್ಟು ಕಡಿಮೆಯಾಗಿವೆ ಎಂದು ವರದಿ ಹೇಳಿದೆ.

Hiring in Indian IT sector declines
Hiring in Indian IT sector declines

By ETV Bharat Karnataka Team

Published : Jan 9, 2024, 12:23 PM IST

ನವದೆಹಲಿ: ಭಾರತೀಯ ಐಟಿ ವಲಯದ ನೇಮಕಾತಿಗಳು 2022 ರ ಇದೇ ತಿಂಗಳಿಗೆ ಹೋಲಿಸಿದರೆ 2023 ರ ಡಿಸೆಂಬರ್​ನಲ್ಲಿ ಶೇಕಡಾ 21 ರಷ್ಟು ಕುಸಿದಿವೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ನೌಕ್ರಿ ಜಾಬ್​ಸ್ಪೀಕ್ ಸೂಚ್ಯಂಕದ ಪ್ರಕಾರ, ಐಟಿ ಉದ್ಯಮದಲ್ಲಿ ಕಡಿಮೆ ನೇಮಕಾತಿಗಳ ಹೊರತಾಗಿಯೂ ಫುಲ್ ಸ್ಟ್ಯಾಕ್ ಡೇಟಾ ಸೈಂಟಿಸ್ಟ್, ಐಟಿ ಇನ್​ಫ್ರಾಸ್ರ್ಟಕ್ಚರ್ ಎಂಜಿನಿಯರ್ ಮತ್ತು ಆಟೋಮೇಷನ್ ಎಂಜಿನಿಯರ್ ಹುದ್ದೆಗಳಿಗೆ ಹೆಚ್ಚಿನ ನೇಮಕಾತಿ ನಡೆದಿದೆ.

ಬಿಪಿಒ, ಶಿಕ್ಷಣ, ರಿಟೇಲ್ ವ್ಯಾಪಾರ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಉದ್ಯೋಗ ನೇಮಕಾತಿಗಳು ಮಂದವಾಗಿವೆ. 2022 ರ ಇದೇ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್​ನಲ್ಲಿ ಈ ಕ್ಷೇತ್ರಗಳಲ್ಲಿ ಉದ್ಯೋಗ ನೇಮಕಾತಿಗಳು ಕ್ರಮವಾಗಿ ಶೇಕಡಾ 17, 11, 11 ಮತ್ತು 10 ರಷ್ಟು ಕಡಿಮೆಯಾಗಿವೆ. ಹಾಸ್ಪಿಟ್ಯಾಲಿಟಿ ಮತ್ತು ಫಾರ್ಮಾ ಇವು ಡಿಸೆಂಬರ್​ನಲ್ಲಿ ಉದ್ಯೋಗ ಬೆಳವಣಿಗೆಗೆ ಸಾಕ್ಷಿಯಾದ ಪ್ರಮುಖ ಕ್ಷೇತ್ರಗಳಾಗಿವೆ. ಎಐ ವಲಯದಲ್ಲಿನ ಉದ್ಯೋಗ ನೇಮಕಾತಿಗಳು 2022 ರ ಇದೇ ತಿಂಗಳಿಗೆ ಹೋಲಿಸಿದರೆ ಇತ್ತೀಚಿನ ತಿಂಗಳಲ್ಲಿ ಶೇಕಡಾ 5 ರಷ್ಟು ಗಮನಾರ್ಹ ಬೆಳವಣಿಗೆ ಸಾಧಿಸಿವೆ.

ಐಟಿಯೇತರ ವಲಯಗಳಿಂದ ಪ್ರೇರಿತವಾದ ನವೆಂಬರ್ ಗೆ ಹೋಲಿಸಿದರೆ ಡಿಸೆಂಬರ್ ನಲ್ಲಿ ನೇಮಕಾತಿ ಚಟುವಟಿಕೆಯಲ್ಲಿ ಶೇಕಡಾ 2 ರಷ್ಟು ಅಲ್ಪ ಅನುಕ್ರಮ ಬೆಳವಣಿಗೆಯಾಗಿದೆ ಎಂದು ನೌಕ್ರಿ ಡಾಟ್ ಕಾಂ ನ ಮುಖ್ಯ ವ್ಯವಹಾರ ಅಧಿಕಾರಿ ಡಾ. ಪವನ್ ಗೋಯಲ್ ಹೇಳಿದರು. ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಐಟಿ ನೇಮಕಾತಿಗಳು ತೀವ್ರ ಕುಸಿತವಾಗಿವೆ. ಈ ವಲಯದಲ್ಲಿನ ನೇಮಕಾತಿಗಳು ಮತ್ತೆ ಚೇತರಿಸಿಕೊಳ್ಳಲು ದೀರ್ಘ ಸಮಯ ಬೇಕಾಗಬಹುದು ಎಂದು ಅವರು ಹೇಳಿದರು.

ಹಾಸ್ಪಿಟ್ಯಾಲಿಟಿ (ಆತಿಥ್ಯ) ವಲಯವು ಡಿಸೆಂಬರ್ 2022 ಕ್ಕೆ ಹೋಲಿಸಿದರೆ ನೇಮಕಾತಿಯಲ್ಲಿ ಶೇಕಡಾ 4 ರಷ್ಟು ಹೆಚ್ಚಳದೊಂದಿಗೆ ಹೊಸ ಉದ್ಯೋಗ ಸೃಷ್ಟಿಯಲ್ಲಿ ತನ್ನ ಬೆಳವಣಿಗೆಯ ವೇಗವನ್ನು ಮುಂದುವರೆಸಿದೆ. ಈ ವಲಯದ ಉದ್ಯೋಗ ಬೆಳವಣಿಗೆಯು ಮುಂಬೈ ಮತ್ತು ದೆಹಲಿ-ಎನ್​ಸಿಆರ್ ನಗರಗಳಲ್ಲಿ ಅತ್ಯಧಿಕವಾಗಿದೆ. 16 ವರ್ಷಗಳ ಅನುಭವ ಹೊಂದಿರುವ ಹಿರಿಯ ವೃತ್ತಿಪರರು ಈ ವಲಯದಲ್ಲಿ ನೇಮಕಾತಿಗೆ ಹೆಚ್ಚು ಬೇಡಿಕೆಯ ಅಭ್ಯರ್ಥಿಗಳಾಗಿ ಹೊರಹೊಮ್ಮಿದ್ದಾರೆ.

ಫಾರ್ಮಾ ವಲಯವು ನೇಮಕಾತಿಯಲ್ಲಿ ಶೇಕಡಾ 2 ರಷ್ಟು ಹೆಚ್ಚಳ ಕಂಡಿದೆ. ಫಾರ್ಮಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಹೊಸದಾಗಿ ಬೇಡಿಕೆ ಸೃಷ್ಟಿಯಾಗಿದ್ದು, ಇದು ಅದರ ಬೆಳವಣಿಗೆ ಮತ್ತು ಉದ್ಯೋಗಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಮೆಟ್ರೋಗಳಲ್ಲದ ಇತರ ನಗರಗಳು ನೇಮಕಾತಿಗಳಲ್ಲಿ ಮೆಟ್ರೋಗಳನ್ನು ಮೀರಿಸಿವೆ. 2022 ರ ಇದೇ ತಿಂಗಳಿಗೆ ಹೋಲಿಸಿದರೆ ವಡೋದರಾ ಇತ್ತೀಚಿನ ತಿಂಗಳಲ್ಲಿ ಹೊಸ ಉದ್ಯೋಗಾವಕಾಶಗಳಲ್ಲಿ ಶೇಕಡಾ 3 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಬ್ರೌಸಿಂಗ್​ ವೇಳೆ ಡೇಟಾ ಟ್ರ್ಯಾಕಿಂಗ್​ ಕುಕೀಸ್‌ಗೆ ಗೂಗಲ್ ನಿರ್ಬಂಧ

ABOUT THE AUTHOR

...view details