ಸ್ಯಾನ್ ಪ್ರಾನ್ಸಿಸ್ಕೊ( ಅಮೆರಿಕ):ಉಪಗ್ರಹ ಅಂತರ್ಜಾಲ ಸೇವೆ ಸ್ಟಾರ್ಲಿಂಕ್ ಅನ್ನು ಖಾಸಗಿ ಏರ್ಲೈನ್ಸ್ ಕಂಪನಿ ಮೊದಲ ಜೆಎಸ್ಎಕ್ಸ್ ಜೆಟ್ನಲ್ಲಿ ನೀಡಲಾಗುವುದು ಎಂದು ಎಲೋನ್ ಮಸ್ಕ್ ಒಡೆತನದ ಸ್ಪೆಸ್ಎಕ್ಸ್ ಶುಕ್ರವಾರ ಟ್ವಿಟರ್ ಮೂಲಕ ತಿಳಿಸಿದೆ.
ಜೆಎಸ್ಎಕ್ಸ್ ವಿಮಾನದಲ್ಲಿ ಈ ವಾರದಿಂದ ಹೈ ಸ್ಪೀಡ್ ಮತ್ತು ಕಡಿಮೆ ಸುಪ್ತತೆಯ ಅಂತರ್ಜಾಲ ಸೇವೆಯನ್ನು ಪ್ರಯಾಣಿಕರಿಗೆ ಈ ಸ್ಟಾರ್ಲಿಂಕ್ ನೀಡಲಿದೆ. ಇದರ ಜೊತೆಗೆ ಮತ್ತೊಂದು ಜೆಎಸ್ಎಕ್ಸ್ ಜೆಟ್ನಲ್ಲಿ ಸ್ಟಾರ್ಲಿಂಕ್ ಅನ್ನು ಅಳವಡಿಸಲಾಗುವುದು. ಶೀಘ್ರವೇ ಪ್ರಯಾಣಿಕರು ವಿಮಾನದಲ್ಲೂ ಇಂಟರ್ನೆಟ್ ಸೇವೆ ಪಡೆಯಬಹುದು ಎಂದು ತಿಳಿಸಿದ್ದಾರೆ.
ಇನ್ನು ವಿಮಾನದಲ್ಲಿ ಈ ಸೇವೆ ನೀಡುತ್ತಿರುವುದಕ್ಕೆ ಟ್ವಿಟರ್ ಮೂಲಕ ಮಸ್ಕ್ಗೆ ಪ್ರಯಾಣಿಕರು ಅಭಿನಂದನೆ ತಿಳಿಸಿದ್ದಾರೆ. ನನಗೆ ಇಷ್ಟವಾಯಿತು. ನೆಟ್ಫ್ಲಿಕ್ಸ್ ಅನ್ನು ನೋಡಬಹುದು. ಥ್ಯಾಂಕ್ಯು ಮಸ್ಕ್ ಎಂದಿದ್ದಾರೆ
ಕಳೆದ ಅಕ್ಟೋಬರ್ನಲ್ಲಿ ಸ್ಪೇಸ್ಎಕ್ಸ್ ಕೆಲವು ಆಯ್ದ ವಿಮಾನಗಳಲ್ಲಿ ಉಪಗ್ರಹ ಅಂತರ್ಜಾಲ ಸೇವೆಯನ್ನು ನೀಡುವುದಾಗಿ ಘೋಷಿಸಿತ್ತು. ಸೆಪ್ಟೆಂಬರ್ನಲ್ಲಿ ಸ್ಟಾರ್ಲಿಂಕ್ ವಿಮಾನಗಳಲ್ಲಿ ಈ ಕುರಿತು ಪರೀಕ್ಷೆ ನಡೆಸಲಾಗಿದ್ದು, 100ಎಂಬಿಪಿಎಸ್ ಇಂಟರ್ನೆಟ್ ಸೇವೆ ಪಡೆಯಲು ಸಾಧ್ಯವಾಯಿತು. ಬುರ್ಬ್ಯಾಂಕ್ ಮತ್ತು ಸ್ಯಾನ್ ಜೋಸ್ ಸ್ಥಳಗಳ ನಡುವಿನ ಹಾರಾಟದ ಜೆಎಸ್ಎಕ್ಸ್ ವಿಮಾನದಲ್ಲಿ ಇದು ಯಶಸ್ವಿಯಾಗಿತ್ತು.
ಇದನ್ನೂ ಓದಿ: ಮಾನವನ ಮಿದುಳಿಗೆ ಚಿಪ್ ಅಳವಡಿಕೆ ಪರೀಕ್ಷೆಗೆ ಮುಂದಾದ ಮಸ್ಕ್ ಸಂಸ್ಥೆ: ಏನಿದು ಹೊಸ ಯೋಜನೆ?