ಪುದುಚೇರಿ :ಡೆಂಘೀ ಮತ್ತು ಚಿಕೂನ್‌ಗುನ್ಯಾ ರೋಗಗಳ ನಿಯಂತ್ರಣಕ್ಕಾಗಿ ಐಸಿಎಂಆರ್-ವೆಕ್ಟರ್ ಕಂಟ್ರೋಲ್ ರಿಸರ್ಚ್ ಸೆಂಟರ್ (ICMR-Vector Control Research Centre -VCRC) ಸಂಸ್ಥೆಯು ಹೊಸ ಸೊಳ್ಳೆಗಳ ತಳಿಯೊಂದನ್ನು ಸೃಷ್ಟಿಸಿದೆ. ವಿಸಿಆರ್‌ಸಿ ಕಂಡು ಹಿಡಿದ ಈ ಹೆಣ್ಣು ಸೊಳ್ಳೆಗಳು ಗಂಡು ಸೊಳ್ಳೆಯ ಜೊತೆ ಸಂಯೋಗವಾಗಿ ಹುಟ್ಟಿಸುವ ಲಾರ್ವಾಗಳಲ್ಲಿ ಡೆಂಘೀ ಮತ್ತು ಚಿಕೂನ್‌ಗುನ್ಯಾ ವೈರಸ್ಗಳೇ ಇರುವುದಿಲ್ಲ.
ಡೆಂಘೀ ಮತ್ತು ಚಿಕೂನ್‌ಗುನ್ಯಾ ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಪುದುಚೇರಿಯ ವಿಸಿಆರ್‌ಸಿ ಸಂಸ್ಥೆಯು wMel ಮತ್ತು wAlbB ವೋಲ್ಬಾಚಿಯಾ ತಳಿ ಸೋಂಕಿತ ಏಡೆಸ್ ಇಜಿಪ್ಟಿ ಜಾತಿ ಸೊಳ್ಳೆಯ Ae. aegypti (Pud) ಎಂದು ಕರೆಯಲಾಗುವ ಎರಡು ಕಾಲನಿಗಳನ್ನು ಅಭಿವೃದ್ಧಿಪಡಿಸಿದೆ. ವಿಸಿಆರ್‌ಸಿ ಕಳೆದ ನಾಲ್ಕು ವರ್ಷಗಳಿಂದ ವೋಲ್ಬಾಚಿಯಾ (Wolbachia) ಸೊಳ್ಳೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ.
ಸ್ಥಳೀಯ ಪ್ರದೇಶಗಳಲ್ಲಿ ಪ್ರತಿವಾರವೂ ದೊಡ್ಡ ಸಂಖ್ಯೆಯ ಸೊಳ್ಳೆಗಳನ್ನು ಬಿಡುಗಡೆ ಮಾಡಬೇಕಿರುವುದರಿಂದ ಈ ಯೋಜನೆ ಪೂರ್ಣಗೊಳ್ಳಲು ಸರ್ಕಾರದಿಂದ ಹಲವಾರು ಹಂತಗಳಲ್ಲಿ ಅನುಮತಿಗಳು ಬೇಕಾಗಬಹುದು.