ವಾಷಿಂಗ್ಟನ್ :ವರ್ಚುವಲ್ ರಿಯಾಲಿಟಿ (ವಿಆರ್) ತಂತ್ರಜ್ಞಾನದ ಅನುಭವಗಳು ಮಾನವರಲ್ಲಿನ ಭಯ ಮತ್ತು ಫೋಬಿಯಾಗಳ ಬಗ್ಗೆ ತನಿಖೆ ಮಾಡಲು ಮತ್ತು ಅವುಗಳಿಗೆ ಚಿಕಿತ್ಸೆ ನೀಡಲು ಹೊಸ ಮಾರ್ಗವಾಗಿ ಹೊರಹೊಮ್ಮಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ವರ್ಚುವಲ್ ಆಕೃತಿಯೊಂದು ತಮಗೆ ಹೊಡೆಯಬಹುದು ಎಂದು ತಿಳಿದ ನಂತರ ಮಾನವನು ನಿರ್ದಿಷ್ಟ ದೇಹದ ಚಲನೆಯ ಮಾದರಿಗಳನ್ನು ಬೆಳೆಸಿಕೊಳ್ಳುತ್ತಾನೆ ಎಂದು ವಿಆರ್ ಪ್ರಯೋಗಗಳನ್ನು ನಡೆಸಿದ ಸೋನಿ ಕಂಪ್ಯೂಟರ್ ಸೈನ್ಸ್ ಲ್ಯಾಬೊರೇಟರೀಸ್ನ ಐ ಕೊಯಿಜುಮಿ ನೇತೃತ್ವದ ಸಂಶೋಧಕರು ಕಂಡು ಹಿಡಿದಿದ್ದಾರೆ.
ಈ ಸಂಶೋಧನೆಯಲ್ಲಿ, ಭಯದಲ್ಲಿರುವಾಗ ದೇಹದ ಚಲನೆಗಳು ಹೇಗಿರುತ್ತವೆ ಎಂಬುದನ್ನು ಪತ್ತೆ ಮಾಡಲಾಗಿದ್ದು, ಭಯ ಮತ್ತು ಆಘಾತದ ನೆನಪುಗಳನ್ನು ನಿವಾರಣೆ ಮಾಡಲು ಇದನ್ನು ಬಳಸಿಕೊಳ್ಳಬಹುದು ಎಂದು ತಿಳಿದು ಬಂದಿದೆ. ಎತ್ತರದ ಬಗ್ಗೆ ಭಯ ಹೊಂದಿರುವವರನ್ನು ಸಕ್ರಿಯ ವರ್ಚುವಲ್ ರಿಯಾಲಿಟಿ ಹಾರಾಟದ ಅನುಭವಕ್ಕೆ ಒಳಪಡಿಸಿದ ನಂತರ ಅವರು ಭಯದ ಬಗ್ಗೆ ಕಡಿಮೆ ದೇಹದ ಚಲನೆಯನ್ನು ತೋರಿಸುತ್ತಾರೆಯೇ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಎನ್ಐಸಿಟಿ ಮತ್ತು ಒಸಾಕಾ ವಿಶ್ವವಿದ್ಯಾಲಯದ ಮಸಾಹಿಕೊ ಹರುನೊ ನೇತೃತ್ವದ ಸಂಶೋಧಕರ ತಂಡವು ಅಧ್ಯಯನ ಮಾಡಿದೆ.
ವರ್ಚುವಲ್ ರಿಯಾಲಿಟಿ ಫ್ಲೈಟ್ ಅನುಭವದಲ್ಲಿ, ಪ್ರಯೋಗಾರ್ಥಿಗಳು ನಗರದ ಮೇಲೆ ತಾವು ಹಾರಾಡುತ್ತಿರುವ ವೀಡಿಯೊವನ್ನು ನಿಯಂತ್ರಿಸಲು ಸಫಲರಾದರು. ಇವರು ಚಲನೆಯನ್ನು ನಿಯಂತ್ರಿಸದೆ ಹಾರಾಟವನ್ನು ವೀಕ್ಷಿಸಿದರು. ವರ್ಚುವಲ್ ಫ್ಲೈಟ್ ಅನುಭವದಲ್ಲಿ ಭಾಗವಹಿಸಿದ ನಂತರ, ವರ್ಚುವಲ್ ರಿಯಾಲಿಟಿಯಲ್ಲಿ ಎತ್ತರದ ಗೋಡೆಯ ಮೇಲೆ ನಡೆಯುವಂತೆ ಹೇಳಿದಾಗ ಅವರು ಕಡಿಮೆ ಭಯ ಹೊಂದಿದ್ದರು.