ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸುವ ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಕೂಡ ವಿಶಾಲವಾಗಿ ವ್ಯಾಪಿಸುತ್ತಾ ಸಾಗಿದೆ. ಅಂದಹಾಗೆ ಟೆಲಿಗ್ರಾಮ್ ಇದೀಗ ಮತ್ತಷ್ಟು ಹೊಸ ಹೊಸ ಅಪ್ಡೇಟ್ ಗಳನ್ನು ಬಳಕೆದಾರರಿಗೆ ಅನುಕೂಲವಾಗುವಂತೆ ತಂದಿದೆ. ಹಾಗೂ ಇದರಿಂದ ತನ್ನ ಹೊಸ ರೂಪವನ್ನು ಟೆಲಿಗ್ರಾಮ್ ಆಪ್ ಪಡೆದುಕೊಂಡಿದೆ. ಎಮೋಜಿಗಳು, ಪ್ರೊಫೈಲ್ ಚಿತ್ರಗಳು, ಸಂದೇಶಗಳ ಅನುವಾದ ಹೀಗೆ ಒಂದಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ ಟೆಲಿಗ್ರಾಮ್ ನವೀಕರಿಸಲಾಗಿದೆ.
ಪ್ರೊಫೈಲ್ ಚಿತ್ರ :ಟೆಲಿಗ್ರಾಮ್ 9.4 ಆವೃತ್ತಿಯ ನವೀಕರಣದ ಮೂಲಕ ಈ ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಬಳಕೆದಾರರಿಗೆ ಸ್ಟಿಕ್ಕರ್‌ಗಳು ಅಥವಾ ಅನಿಮೇಟೆಡ್ ಎಮೋಜಿಗಳನ್ನು ಪ್ರೊಫೈಲ್ ಚಿತ್ರಗಳಾಗಿ ಬದಲಾಯಿಸಲು ಬಳಕೆದಾರಿಗೆ ಪ್ರೊಫೈಲ್ ಫೋಟೋ ಮೇಕರ್ ಸೌಲಭ್ಯ ಕಲ್ಪಿಸಲಾಗಿದೆ. ಈ ಸೌಲಭ್ಯ ಬಳಕೆದಾರರು ತಮ್ಮ ಆಕೌಂಟ್, ಚಾನಲ್‌ಗಳು ಮತ್ತು ಎಲ್ಲ ಗುಂಪುಗಳಲ್ಲಿ ಬಳಸಬಹುದು. ಇದು ಪ್ರೀಮಿಯಂ ಬಳಕೆದಾರರಿಗೆ ಮಾತ್ರವಲ್ಲದೇ ಎಲ್ಲ ಟೆಲಿಗ್ರಾಮ್ ಬಳಕೆದಾರಿಗೂ ಲಭ್ಯವಿರುತ್ತದೆ.
ಸಂದೇಶ ಭಾಷಾಂತರ:ಟೆಲಿಗ್ರಾಮ್ ಚಾಟ್‌ನಲ್ಲಿಯೇ ಬರುವ ಸಂದೇಶಗಳನ್ನು ನೇರವಾಗಿ ಭಾಷಾಂತರಿಸುವ ಸೌಲಭ್ಯವನ್ನು 9.4 ಅಪ್ಡೇಟ್ನಲ್ಲಿ ನೀಡಲಾಗಿದೆ. ಚಾಟ್‌ನ ಮೇಲ್ಭಾಗದಲ್ಲಿ ಅನುವಾದದ ಬಾರ್ ಇರುತ್ತದೆ. ಇದರ ಮೂಲಕ ಸಂದೇಶಗಳನ್ನು ಸುಲಭವಾಗಿ ಭಾಷಾಂತರ ಮಾಡಬಹುದಾಗಿದೆ. ಆದರೆ, ಬಳಕೆದಾರರು ಪ್ರತಿ ಸಂದೇಶವನ್ನು ಆಯ್ಕೆ ಮಾಡಬೇಕು ನಂತರ ಅದನ್ನು ಅನುವಾದಿಸಬೇಕಾಗುತ್ತದೆ.
ಪಿ ಚಾರ್ಟ್:ನಾವು ಟೆಲಿಗ್ರಾಮ್ ಅನ್ನು ಬಳಸುತ್ತಲೇ ಎಷ್ಟು ಡೇಟಾ ಖಾಲಿಯಾಗಿದೆ ಎಂದು ಪಿ ಚಾರ್ಟ್ ಮೂಲಕ ನೋಡಬಹುದಾಗಿದೆ. ಇದಕ್ಕಾಗಿ ನೆಟ್‌ವರ್ಕ್ ಬಳಕೆಯ ವೈಶಿಷ್ಟ್ಯವನ್ನು ಲಭ್ಯಗೊಳಿಸಲಾಗಿದೆ. ಈ ಸೌಲಭ್ಯದಿಂದ ಬಳಕೆದಾರರು ಮೊಬೈಲ್ ಡೇಟಾ ಮಾತ್ರವಲ್ಲದೇ ವೈಫೈ ಡೇಟಾ ಕೂಡ ತಿಳಿದುಕೊಳ್ಳಬಹುದು. ಜೊತೆಗೆ ಸ್ವಯಂ ಸಂದೇಶಗಳನ್ನು ಬ್ಯಾಕ್ಅಪ್ ಮಾಡುವ ವೈಶಿಷ್ಟ್ಯವನ್ನು ಸಹ ಹೊಸ ಆವೃತ್ತಿಯಲ್ಲಿ ಸೇರಿಸಲಾಗಿದೆ. ನಮಗೆ ಯಾವ ಸಂದರ್ಭದಲ್ಲಿ ಸಂದೇಶ ಉಳಿಸಬೇಕು ಎನಿಸಿಸುತ್ತದೆಯೋ ಅ ವೇಳೆ ಈ ಟೆಲಿಗ್ರಾಮ್ 9.4 ವೈಶಿಷ್ಟ್ಯವನ್ನು ಆಯ್ಕೆ ಮಾಡಬಹುದಾಗಿದೆ.
ಎಮೋಜಿಗಳನ್ನು ವಿವಿಧ ವರ್ಗಗಳಾಗಿ ವಿಂಗಡಣೆ :ಇನ್ನು ಅತಿ ಹೆಚ್ಚು ಜನರು ಉಪಯೋಗಿಸುತ್ತಿರುವ ಇನ್‌ಸ್ಟಾಗ್ರಾಮ್‌ನಂತೆ ಎಮೋಜಿಗಳನ್ನು ವಿಭಜಿಸುವ ಸೌಲಭ್ಯವನ್ನು 9.4 ಟೆಲಿಗ್ರಾಮ್ ಅಪ್ಡೇಟ್ನಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ಪ್ರತಿಯೊಂದು ಎಮೋಜಿಗಳನ್ನು ಅನುಸಾರವಾಗಿ ವಿವಿಧ ವರ್ಗಗಳಾಗಿ ವಿಂಗಡಿಸಬಹುದು. ಈ ಹೊಸ ಅಪ್ದೇಟ್‌ನೊಂದಿಗೆ ಬಳಕೆದಾರರಿಗೆ ಲಕ್ಷಾಂತರ ಎಮೋಜಿಗಳು ಮತ್ತು ಸ್ಟಿಕ್ಕರ್‌ಗಳು ಸಹ ಟೆಲಿಗ್ರಾಮ್ನಲ್ಲಿ ಲಭ್ಯವಿವೆ.
ಮೀಡಿಯಾ ಪರ್ಮಿಷನ್:ಟೆಲಿಗ್ರಾಮ್ನಲ್ಲಿ ಗ್ರೂಪ್ ಅಡ್ಮಿನ್‌ಗಳಿಗಾಗಿ ಮೀಡಿಯಾ ಪರ್ಮಿಷನ್ ವೈಶಿಷ್ಟ್ಯವೂ ಲಭ್ಯವಿದೆ. ಜೊತೆಗೆ ಗುಂಪಿನ ಸದಸ್ಯರು ಯಾವ ರೀತಿಯ ವಿಡಿಯೋಗಳನ್ನು ಕಳುಹಿಸಬೇಕು ಎಂಬುದನ್ನು ಗ್ರೂಪ್ ಅಡ್ಮಿನ್ಗಳು ನಿರ್ಧರಿಸಬಹುದು. ಉದಾಹರಣೆಗೆ:ಅಡ್ಮಿನ್ ಈ ವೈಶಿಷ್ಟ್ಯದ ಮೂಲಕ ವೀಡಿಯೊ ಕಳುಹಿಸುವುದನ್ನು ನಿಷ್ಕ್ರಿಯಗೊಳಿಸಿದರೆ, ಆ ಗುಂಪಿನಲ್ಲಿ ಇತರ ಸದಸ್ಯರಿಗೆ ವಿಡಿಯೋಗಳನ್ನು ಕಳುಹಿಸಲು ಅಥವಾ ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ :ಹೊಸ ಬಿಂಗ್ ಸರ್ಚ್ ಇಂಜಿನ್ ಪರಿಚಯಿಸಿದ ಮೈಕ್ರೋಸಾಫ್ಟ್