ವಾಷಿಂಗ್ಟನ್ (ಅಮೆರಿಕ): ಕಡಿಮೆ ಬಳಕೆಯ ಕಾರಣ ಚೀನಾದ ಹಲವೆಡೆ ಗೂಗಲ್ ಅನುವಾದ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಅಮೆರಿಕದ ಟೆಕ್ ದೈತ್ಯ ಗೂಗಲ್ ಸೋಮವಾರ ಘೋಷಿಸಿದೆ.
ಚೀನಾದಲ್ಲಿ ಹಾಂಗ್ಕಾಂಗ್ ಅನುವಾದ ಸೇವೆ ಹೊರತುಪಡಿಸಿ ಬೇರೆ ಟ್ರಾನ್ಸ್ಲೇಷನ್ ಸೇವೆಗಳು ಉಚಿತವಲ್ಲದ ಕಾರಣ ಗೂಗಲ್ ತರ್ಜುಮೆಯನ್ನು ಜನರು ಹೆಚ್ಚಾಗಿ ಬಳಕೆ ಮಾಡುತ್ತಿಲ್ಲ. ಹೀಗಾಗಿ ಕಡಿಮೆ ಬಳಕೆ ಮಾಡದ ಪ್ರದೇಶದಲ್ಲಿ ಸೇವೆಯನ್ನು ನಿಲ್ಲಿಸಲು ಗೂಗಲ್ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2010 ರಲ್ಲಿ ಗೂಗಲ್ ಚೀನಾದಲ್ಲಿ ಸರ್ಚ್ ಎಂಜಿನ್ ಆಯ್ಕೆಯನ್ನೇ ನಿಲ್ಲಿಸಿತ್ತು. ಸರ್ಕಾರ ಅಲ್ಲಿನ ಜನರ ವೈಯಕ್ತಿಕ ದಾಖಲೆಗಳನ್ನು ಕ್ರೋಢೀಕರಿಸಲು ಶುರು ಮಾಡಿದೆ ಎಂಬ ಆರೋಪದ ಮೇಲೆ ಗೂಗಲ್ ತನ್ನ ಸರ್ಚ್ ಎಂಜಿನ್ ಅನ್ನೇ ನಿಲ್ಲಿಸಿತ್ತು.
ಆರೋಪವನ್ನು ಚೀನಾ ನಿರಾಕರಿಸಿದೆ. ಅಂತಹ ಯಾವುದೇ ಸಂಗ್ರಹಣೆ ಮಾಡಲಾಗುತ್ತಿಲ್ಲ ಎಂದು ಹೇಳಿಕೆ ನೀಡಿತ್ತು. ಆದಾಗ್ಯೂ ಚೀನಾ ಸರ್ಕಾರದ ಬೇಹುಗಾರಿಕೆಯಿಂದ ತಂತ್ರಜ್ಞಾನಗಳ ವಿವರಗಳು, ಪೊಲೀಸ್ ಸಂಶೋಧನಾ ದಾಖಲೆಗಳು, ನೂರಾರು ಸಾರ್ವಜನಿಕ ಸಂಗ್ರಹಣೆ ದಾಖಲೆಗಳು ಹೊರಬಂದಿದ್ದವು.
ಓದಿ:8 ವರ್ಷಗಳ ಕಾರ್ಯಾಚರಣೆ ಬಳಿಕ ಅಂತ್ಯ ಕಂಡ ಮಂಗಳಯಾನ: ಇಸ್ರೋ