ಕರ್ನಾಟಕ

karnataka

ETV Bharat / science-and-technology

ವಿಶ್ವದಲ್ಲಿ ಸ್ಮಾರ್ಟ್​ಫೋನ್​ ಮಾರಾಟ ಶೇ 12 ರಷ್ಟು ಇಳಿಕೆ: ವಿಶ್ಲೇಷಣಾ ವರದಿಯಲ್ಲಿ ಬಹಿರಂಗ - ಸ್ಯಾಮ್​ಸಂಗ್ ಮತ್ತೊಮ್ಮೆ ಪ್ರಥಮ ಸ್ಥಾನ

ಜಾಗತಿಕವಾಗಿ ಸ್ಮಾರ್ಟ್​ಫೋನ್​ಗಳ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ಸಂಶೋಧನಾ ವರದಿ ಹೇಳಿದೆ. ಆದಾಗ್ಯೂ ಶೇ 12 ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಸ್ಯಾಮ್​ಸಂಗ್​ ಪ್ರಥಮ ಸ್ಥಾನದಲ್ಲಿದೆ.

Global smartphone market falls 12% in Q1: Report
Global smartphone market falls 12% in Q1: Report

By

Published : Apr 19, 2023, 4:08 PM IST

ನವದೆಹಲಿ : ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಸತತ ಐದನೇ ತ್ರೈಮಾಸಿಕದಲ್ಲಿ ಕುಸಿತ ಕಂಡಿದೆ. ಸ್ಮಾರ್ಟ್​ಫೋನ್​ಗಳ ಮಾರಾಟ 2023ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 12 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿದಿದೆ ಎಂದು ಹೊಸ ವರದಿಯು ಹೇಳಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ಪ್ರಕಾರ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಸ್ಯಾಮ್‌ಸಂಗ್ ಮಾತ್ರ ಮಾರಾಟದಲ್ಲಿ ಏರಿಕೆ ಕಂಡಿದೆ. ಶೇಕಡಾ 22 ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಸ್ಯಾಮ್​ಸಂಗ್ ಮತ್ತೊಮ್ಮೆ ಪ್ರಥಮ ಸ್ಥಾನಕ್ಕೇರಿದೆ. ಆ್ಯಪಲ್ ಶೇಕಡಾ 21 ರಷ್ಟು ಪಾಲಿನೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. 2023ರ ಮೊದಲ ತ್ರೈಮಾಸಿಕದಲ್ಲಿ ತನ್ನ iPhone 14 Pro ಸರಣಿಯ ಬಲವಾದ ಬೇಡಿಕೆಯಿಂದಾಗಿ ಆ್ಯಪಲ್ ಸ್ಯಾಮ್​ಸಂಗ್​​ ಸನಿಹದಲ್ಲಿ ಪೈಪೋಟಿ ನಡೆಸಲು ಸಾಧ್ಯವಾಗಿದೆ.

2023 ರ ಮೊದಲ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ಕುಸಿತವಾಗಲಿದೆ ಎಂದು ಉದ್ಯಮ ಮೊದಲೇ ನಿರೀಕ್ಷಿಸಿತ್ತು ಎಂದು ಕ್ಯಾನಲಿಸ್ ವಿಶ್ಲೇಷಕ ಸನ್ಯಾಮ್ ಚೌರಾಸಿಯಾ ಹೇಳಿದರು. ಸ್ಥಳೀಯ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಹಲವಾರು ಮಾರುಕಟ್ಟೆಗಳಲ್ಲಿ ಮಾರಾಟಗಾರರ ಹೂಡಿಕೆಗಳು ಮತ್ತು ಕಾರ್ಯಾಚರಣೆಗಳಿಗೆ ಅಡ್ಡಿಯಾಗುವುದನ್ನು ಮುಂದುವರೆಸಿವೆ. ಬೆಲೆ ಕಡಿತ ಮತ್ತು ಮಾರಾಟಗಾರರಿಂದ ಭಾರೀ ಪ್ರಚಾರಗಳ ಹೊರತಾಗಿಯೂ ಗ್ರಾಹಕರ ಬೇಡಿಕೆಯು ಮಂದಗತಿಯಲ್ಲಿದೆ. ಹಣದುಬ್ಬರ ಹೆಚ್ಚಾಗುತ್ತಿರುವುದರಿಂದ ವಿಶೇಷವಾಗಿ ಕಡಿಮೆ ಬೆಲೆಯ ವಿಭಾಗದಲ್ಲಿ ಗ್ರಾಹಕರ ಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.

ಶಿಯೋಮಿ (Xiaomi) ಶೇಕಡಾ 11 ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ವರದಿ ಹೇಳಿದೆ. ಆದರೆ, OPPO ಮತ್ತು vivo ಏಷ್ಯಾ ಪೆಸಿಫಿಕ್ ಪ್ರದೇಶ ಮತ್ತು ಚೀನಾಗಳಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿವೆ. ಇವು ಕ್ರಮವಾಗಿ ಶೇಕಡಾ 10 ಶೇಕಡಾ ಮತ್ತು ಶೇಕಡಾ 8 ರಷ್ಟು ಪಾಲನ್ನು ಹೊಂದಿವೆ. ಕೆಲ ಸ್ಮಾರ್ಟ್‌ಫೋನ್ ಮಾದರಿಗಳು ಹಾಗೂ ಕೆಲ ನಿರ್ದಿಷ್ಟ ಬೆಲೆ ಶ್ರೇಣಿಯ ಸ್ಮಾರ್ಟ್​ಫೋನ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದಲ್ಲದೇ, ಕೆಲವು ಸ್ಮಾರ್ಟ್‌ಫೋನ್ ಮಾರಾಟಗಾರರು ಉತ್ಪಾದನಾ ಯೋಜನೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಚಾನಲ್ ಅಥವಾ ಮಾರಾಟಗಾರರನ್ನು ಲೆಕ್ಕಿಸದೇ ಸ್ಮಾರ್ಟ್‌ಫೋನ್ ಉದ್ಯಮವು 2023 ರ ಎರಡನೇ ತ್ರೈಮಾಸಿಕದ ಅಂತ್ಯದ ವೇಳೆಗೆ ತುಲನಾತ್ಮಕವಾಗಿ ಆರೋಗ್ಯಕರ ಮಟ್ಟ ತಲುಪಬಹುದು ಎಂದು ಕ್ಯಾನಲಿಸ್ ಊಹಿಸುತ್ತದೆ ಎಂದು ಕ್ಯಾನಲಿಸ್ ವಿಶ್ಲೇಷಕ ಟೋಬಿ ಝು ಹೇಳಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲೂ ಕುಸಿತ: 600 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2023 ರ ಮೊದಲ ತ್ರೈಮಾಸಿಕದಲ್ಲಿ ಐತಿಹಾಸಿಕ ಕುಸಿತ ಕಂಡಿದೆ. ಸಂಶೋಧನಾ ಸಂಸ್ಥೆ ಕ್ಯಾನಲಿಸ್ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 20 ರಷ್ಟು ಕಡಿಮೆಯಾಗಿದೆ. ಯಾವುದೇ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉಂಟಾದ ಅತಿಹೆಚ್ಚು ಕುಸಿತ ಇದಾಗಿದೆ. ಗ್ರಾಹಕರಿಂದ ಬೇಡಿಕೆ ಕಡಿಮೆಯಾಗಿರುವುದು, ಹೆಚ್ಚಿನ ಹಣದುಬ್ಬರ, ದಾಸ್ತಾನು ಬದಲಾವಣೆ ಮತ್ತು ಬಿಡಿಭಾಗಗಳ ಕೊರತೆಯಂತಹ ವಿವಿಧ ಅಂಶಗಳಿಂದಾಗಿ ಸ್ಮಾರ್ಟ್​ಫೋನ್ ಮಾರಾಟ ಇಳಿಕೆಯಾಗಿದೆ. 2022ರ ನಾಲ್ಕನೇ ತ್ರೈಮಾಸಿಕದಲ್ಲಿ ಶಿಯೋಮಿ ಅನ್ನು ಹಿಂದಿಕ್ಕಿದ್ದ ಸ್ಯಾಮ್​ಸಂಗ್ ಶೇ 21 ರಷ್ಟು ಮಾರುಕಟ್ಟೆ ಪಾಲು ಹಾಗೂ 6.3 ಮಿಲಿಯನ್ ಯುನಿಟ್​ಗಳನ್ನು ಮಾರಾಟ ಮಾಡುವುದರ ಮೂಲಕ ಮತ್ತೆ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.

ಇದನ್ನೂ ಓದಿ :ಸುಡಾನ್​ನಲ್ಲಿನ ಭಾರತೀಯರ ಸುರಕ್ಷತೆಗೆ ಮುಂದಾದ ಭಾರತ: ವಿವಿಧ ದೇಶಗಳೊಂದಿಗೆ ಸಂಪರ್ಕ

ABOUT THE AUTHOR

...view details