ನವದೆಹಲಿ :ಈ ವರ್ಷದ ಮೊದಲ 6 ತಿಂಗಳುಗಳಲ್ಲಿ ಮೊಬೈಲ್ ಆ್ಯಪ್ನೊಳಗಡೆ ಗ್ರಾಹಕರು ಮಾಡುವ ವೆಚ್ಚಗಳು (in-app consumer spend) ಜಾಗತಿಕವಾಗಿ 67.8 ಬಿಲಿಯನ್ ಡಾಲರ್ಗೆ( ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 54,99,69,50,00,000 ರೂ. ಆಗುತ್ತದೆ) ತಲುಪಿದೆ. ಮತ್ತು ಐಓಎಸ್ ಹಾಗೂ ಗೂಗಲ್ ಪ್ಲೇ ಗಳಲ್ಲಿ 76.8 ಬಿಲಿಯನ್ ಬಾರಿ ಆ್ಯಪ್ಗಳನ್ನು ಡೌನ್‌ಲೋಡ್ ಮಾಡಲಾಗಿದೆ ಎಂದು ಅಧ್ಯಯನ ವರದಿಯೊಂದು ತೋರಿಸಿದೆ. 2022ರಲ್ಲಿ ಕುಸಿತ ಕಂಡಿದ್ದ ಮೊಬೈಲ್ ಗ್ರಾಹಕ ವೆಚ್ಚಗಳು 2023ರ ಮೊದಲಾರ್ಧದಲ್ಲಿ ಶೇ 5.3 ರಷ್ಟು ಬೆಳವಣಿಗೆ ದಾಖಲಿಸಿವೆ.
2021 ರ ಮೊದಲಾರ್ಧದಲ್ಲಿ Google Play ಡೌನ್‌ಲೋಡ್‌ಗಳಿಗೆ ಭಾರತ, ಬ್ರೆಜಿಲ್ ಮತ್ತು ಇಂಡೋನೇಷ್ಯಾ ಅತಿದೊಡ್ಡ ಮಾರುಕಟ್ಟೆಗಳಾಗಿವೆ. ಹಾಗೆಯೇ 2022ರ ಮೊದಲಾರ್ಧಕ್ಕೆ ಹೋಲಿಸಿದರೆ ಟರ್ಕಿ, ರಷ್ಯಾ ಮತ್ತು ಇಂಡೋನೇಷ್ಯಾ ಗೂಗಲ್ ಪ್ಲೇ ಡೌನ್ಲೋಡ್ನಲ್ಲಿ ಉತ್ತಮ ಬೆಳವಣಿಗೆ ಕಂಡಿವೆ. ಐಓಎಸ್‌ನಲ್ಲಿ ಚೀನಾ, ಯುಎಸ್ ಮತ್ತು ಜಪಾನ್‌ಗಳು ಬ್ರೆಜಿಲ್, ಚೀನಾ ಮತ್ತು ಯುಎಸ್ ಉನ್ನತ ಮಾರುಕಟ್ಟೆಗಳಾಗಿದ್ದು, 2022ರ ಮೊದಲಾರ್ಧಕ್ಕೆ ಹೋಲಿಸಿದರೆ ಹೆಚ್ಚು ಬೆಳವಣಿಗೆ ಕಂಡಿವೆ.
ವರ್ಷದ ಮೊದಲಾರ್ಧದಲ್ಲಿ ಧನಾತ್ಮಕ ಬೆಳವಣಿಗೆಗೆ ಮರಳುವಿಕೆಯು 2022 ರ ಸಮಯದಲ್ಲಿ ಮೊಬೈಲ್ ಗ್ರಾಹಕರ ವೆಚ್ಚದಲ್ಲಿನ ಕುಸಿತವು ತಾತ್ಕಾಲಿಕ ಕುಸಿತವಾಗಿತ್ತು ಎಂಬುದರ ಸಂಕೇತವಾಗಿದೆ. ಚೀನಾದ ಕಿರು ವೀಡಿಯೊ ತಯಾರಿಕೆ ಅಪ್ಲಿಕೇಶನ್ TikTok 2023 ರ ಪ್ರಥಮ ತ್ರೈಮಾಸಿಕದಲ್ಲಿ $1 ಶತಕೋಟಿ ಗ್ರಾಹಕರ ವೆಚ್ಚವನ್ನು ಮೀರಿದ ಮೊದಲ ಅಪ್ಲಿಕೇಶನ್ ಆಗಿದೆ ಮತ್ತು 2023ನೇ ವರ್ಷದ ಮೊದಲಾರ್ಧದಲ್ಲಿ $2.1 ಶತಕೋಟಿ ಗ್ರಾಹಕ ವೆಚ್ಚವನ್ನು ಸಂಗ್ರಹಿಸುವ ಮೂಲಕ $2 ಶತಕೋಟಿಯನ್ನು ಮೀರಿದ ಮೊದಲ ಅಪ್ಲಿಕೇಶನ್ ಆಗಿದೆ. ಈ ವರ್ಷದ ಮೊದಲಾರ್ಧದಲ್ಲಿ ಪಿಕೋಮಾ, ಡಿಸ್ನಿ+ ಮತ್ತು ಯೂಟ್ಯೂಬ್‌ಗಳು ಕ್ರಮವಾಗಿ ಶೇ 34, ಶೇ 10 ಮತ್ತು ಶೇ 6 ರಷ್ಟು ಬೆಳವಣಿಗೆಯನ್ನು ಕಂಡಿವೆ.