ಚೆನ್ನೈ( ತಮಿಳುನಾಡು):ಚಂದ್ರಯಾನ -2 ಯಶಸ್ಸಿನ ನಂತರ ಇಸ್ರೋ ವಿಜ್ಞಾನಿಗಳು ಹುಮ್ಮಸ್ಸಿನಲ್ಲಿದ್ದಾರೆ. ಈಗಾಗಲೇ ರೂಪಿಸಿರುವ ಯೋಜನೆಗಳ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಮುಂದಿನ ಬಾಹ್ಯಾಕಾಶ ಯೋಜನೆಗಳ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಯೋಜಿಸಿದಂತೆ 2024 ರಲ್ಲಿ ಗಗನಯಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಭರದ ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಮಹೇಂದ್ರಗಿರಿಯ ಇಸ್ರೋ ಕೇಂದ್ರ ನೆಲ್ಲೈನಲ್ಲಿ ನಡೆಸಿದ ಬಾಹ್ಯಾಕಾಶ ಯಾನದ ಎಂಜಿನ್ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ.
ಮಹೇಂದ್ರಗಿರಿ ಬಾಹ್ಯಾಕಾಶ ಸಂಶೋಧನಾ ಕೇಂದ್ರವು ತಿರುನಲ್ವೇಲಿ ಜಿಲ್ಲೆಯ ಪನಗುಡಿ ಬಳಿ ಇದೆ. ಈ ಬಾಹ್ಯಾಕಾಶ ಕೇಂದ್ರದಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಗಗನಯಾನ್ ಕಾರ್ಯಕ್ರಮದ ಅಡಿ ಉಪಗ್ರಹಕ್ಕಾಗಿ ಬಳಸಲಾಗುವ ಕ್ರಯೋಜೆನಿಕ್ ಎಂಜಿನ್ ಅನ್ನು ಹಲವು ಹಂತಗಳಲ್ಲಿ ತಯಾರಿಸಲಾಗುತ್ತಿದೆ ಮತ್ತು ಅದೇ ವೇಳೆ, ನೌಕೆಯ ಉಡಾವಣಾ ಎಂಜಿನ್ ಅನ್ನು ಪರೀಕ್ಷೆ ಮಾಡಲಾಗುತ್ತಿದೆ.
ಚಂದ್ರಯಾನ-3ರ ಯಶಸ್ಸಿನ ನಂತರ ಇಸ್ರೋ ಗಗನಯಾನ್ ಯೋಜನೆಯಡಿ ರಾಕೆಟ್‌ನಲ್ಲಿ ಮೂವರು ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜನೆ ಸಿದ್ದಪಡಿಸಿ, ಪರೀಕ್ಷಾರ್ಥ ಪ್ರಯೋಗಗಳನ್ನು ಮಾಡುತ್ತಿದೆ. ಭೂಮಿಯಿಂದ ಸುಮಾರು 400 ಕಿ.ಮೀ ದೂರದ ಅಂತರಿಕ್ಷದಲ್ಲಿ ಮನುಷ್ಯರನ್ನು ಪ್ರಯಾಣಿಸುವಂತೆ ಮಾಡುವ ಸಂಶೋಧನೆಯಲ್ಲಿ ಇಸ್ರೋ ವಿಜ್ಞಾನಿಗಳು ತೊಡಗಿಸಿಕೊಂಡಿದ್ದಾರೆ. ಸಂಶೋಧನೆಯ ನಂತರ ಮಾನವರನ್ನು ಬಾಹ್ಯಕಾಶಕ್ಕೆ ಕಳುಹಿಸಿ ಸುರಕ್ಷಿತವಾಗಿ ಭೂಮಿಗೆ ಕರೆತರುವ ಯೋಜನೆಯ ಭಾಗವಾಗಿ ಇಸ್ರೋ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.