ಕರ್ನಾಟಕ

karnataka

ETV Bharat / science-and-technology

ಲ್ಯಾಂಡರ್​ನಲ್ಲಿ ಇಂಧನ ನಷ್ಟ: ಅಮೆರಿಕದ ಚಂದ್ರಯಾನ ಯೋಜನೆಗೆ ಹಿನ್ನಡೆ - ಪೆರೆಗ್ರಿನ್ ಲೂನಾರ್

ಅಮೆರಿಕದ ಇತ್ತೀಚಿನ ಚಂದ್ರಯಾನ ನೌಕೆಯಲ್ಲಿ ಇಂಧನ ನಷ್ಟದ ಸಮಸ್ಯೆ ಕಂಡು ಬಂದಿದ್ದು, ಇಡೀ ಯೋಜನೆಯ ಮೇಲೆ ಕಾರ್ಮೋಡ ಕವಿದಿದೆ.

US' 1st fully pvt spacecraft
US' 1st fully pvt spacecraft

By ETV Bharat Karnataka Team

Published : Jan 9, 2024, 3:29 PM IST

ನ್ಯೂಯಾರ್ಕ್ : ಅಮೆರಿಕ ಮೂಲದ ಆಸ್ಟ್ರೋಬೋಟಿಕ್ ಟೆಕ್ನಾಲಜಿ ಖಾಸಗಿ ಕಂಪನಿ ತಯಾರಿಸಿರುವ ಬಾಹ್ಯಾಕಾಶ ನೌಕೆಯ ಪೆರೆಗ್ರಿನ್ ಲೂನಾರ್ ಲ್ಯಾಂಡರ್ ಚಂದ್ರನತ್ತ ಸಾಗುವ ಮಾರ್ಗಮಧ್ಯೆ ಇಂಧನ ನಷ್ಟಕ್ಕೀಡಾಗಿದೆ. ಲ್ಯಾಂಡರ್ ಬಾಹ್ಯಾಕಾಶದಲ್ಲಿ ಸೆರೆ ಹಿಡಿದ ಮೊದಲ ಚಿತ್ರದಲ್ಲಿಯೇ ಈ ವಿಷಯ ಬೆಳಕಿಗೆ ಬಂದಿದೆ. 50 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಚಂದ್ರನತ್ತ ಹೋಗುವ ಅಮೆರಿಕದ ಯೋಜನೆಗೆ ಇದು ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಡಿಸೆಂಬರ್ 1972 ರಲ್ಲಿ ಅಪೊಲೊ 17 ರ ನಂತರ ಯುಎಸ್ ಚಂದ್ರನ ಮೇಲೆ ಇಳಿಯಲು ಪ್ರಯತ್ನಿಸಿಲ್ಲ.

ಜನವರಿ 8 ರಂದು ಪೆರೆಗ್ರಿನ್ ಲೂನಾರ್ ಲ್ಯಾಂಡರ್ ಯುನೈಟೆಡ್ ಲಾಂಚ್ ಅಲೈಯನ್ಸ್​ನ ಹೊಚ್ಚ ಹೊಸ ರಾಕೆಟ್ ವಲ್ಕನ್ ಸೆಂಟೌರ್​ ಮೂಲಕ ಮುಂಜಾನೆ 2:18 ಕ್ಕೆ (7:18 ಜಿಎಂಟಿ) ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಿಂದ ಉಡಾವಣೆಯಾಯಿತು. ಪ್ರಸ್ತುತ ನೌಕೆಯ ಪ್ರಾಥಮಿಕ ಕಮಾಂಡ್ ಡೇಟಾ ಯುನಿಟ್, ಥರ್ಮಲ್, ಪ್ರೊಪಲ್ಷನ್ ಮತ್ತು ಪವರ್ ಕಂಟ್ರೋಲರ್​ಗಳು ಸೇರಿದಂತೆ ಲ್ಯಾಂಡರ್​ನಲ್ಲಿರುವ ಎಲ್ಲ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು.

ಆದಾಗ್ಯೂ, ಸಂಪೂರ್ಣ ಕಾರ್ಯಾಚರಣೆಯ ಸ್ಥಿತಿಯನ್ನು ಪ್ರವೇಶಿಸಿದ ನಂತರ ಲ್ಯಾಂಡರ್ ಸಮಸ್ಯೆಗಳನ್ನು ಎದುರಿಸಿದೆ. ಇದು ಆಸ್ಟ್ರೋಬಯೋಟಿಕ್ ಸ್ಥಿರವಾದ ಸೂರ್ಯ ಬಿಂದು ದೃಷ್ಟಿಕೋನವನ್ನು ಸಾಧಿಸುವುದನ್ನು ತಡೆಯಿತು ಎಂದು ಕಂಪನಿಯು ಎಕ್ಸ್​ನಲ್ಲಿ ಬರೆದಿದೆ.

"ದುರದೃಷ್ಟವಶಾತ್, ಪ್ರೊಪಲ್ಷನ್ ವ್ಯವಸ್ಥೆಯೊಳಗಿನ ವೈಫಲ್ಯವು ಪ್ರೊಪೆಲ್ಲಂಟ್​ನ ಗಂಭೀರ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ತೋರುತ್ತದೆ. ಈ ನಷ್ಟವನ್ನು ಸ್ಥಿರಗೊಳಿಸಲು ತಂಡವು ಪ್ರಯತ್ನಿಸುತ್ತಿದೆ. ಆದರೆ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ಹಂತದಲ್ಲಿ ನಾವು ಆದಷ್ಟು ಹೆಚ್ಚು ವೈಜ್ಞಾನಿಕ ಮಾಹಿತಿ ಪಡೆಯುವುದು ನಮ್ಮ ಆದ್ಯತೆಯಾಗಿದೆ. ಈ ಸಮಯದಲ್ಲಿ ಯಾವ ಪರ್ಯಾಯ ಮಿಷನ್ ಪ್ರೊಫೈಲ್​ಗಳು ಕಾರ್ಯಸಾಧ್ಯವಾಗಬಹುದು ಎಂದು ನಾವು ಪ್ರಸ್ತುತ ಮೌಲ್ಯಮಾಪನ ಮಾಡುತ್ತಿದ್ದೇವೆ" ಎಂದು ಪಿಟ್ಸ್​ಬರ್ಗ್​ ಮೂಲದ ಆಸ್ಟ್ರೋಬೊಟಿಕ್ ಹೇಳಿದೆ.

ಬಾಹ್ಯಾಕಾಶದಲ್ಲಿ ಪೆರೆಗ್ರಿನ್ ಸೆರೆಹಿಡಿದ ಮೊದಲ ಚಿತ್ರದಲ್ಲಿಯೇ ನೌಕೆಯಲ್ಲಿ ಸಮಸ್ಯೆ ಇರುವುದು ಕಂಡು ಬಂದಿದೆ. ಪೇಲೋಡ್ ಡೆಕ್ ಮೇಲೆ ಅಳವಡಿಸಲಾದ ಕ್ಯಾಮೆರಾದಿಂದ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಮುಂಭಾಗದಲ್ಲಿ ಮಲ್ಟಿ-ಲೇಯರ್ ಇನ್ಸುಲೇಷನ್ (ಎಂಎಲ್ಐ) ಅನ್ನು ತೋರಿಸುತ್ತದೆ.

"ಎಂಎಲ್ಐನ ತೊಂದರೆಯು ನಮ್ಮ ಟೆಲಿಮೆಟ್ರಿ ಡೇಟಾದೊಂದಿಗೆ ಹೊಂದಿಕೆಯಾಗುವ ಮೊದಲ ದೃಶ್ಯದ ಸುಳಿವು ಆಗಿದ್ದು, ಇದು ಪ್ರೊಪಲ್ಷನ್ ಸಿಸ್ಟಮ್​ನಲ್ಲಿನ ಸಮಸ್ಯೆಯನ್ನು ಸೂಚಿಸುತ್ತದೆ" ಎಂದು ಕಂಪನಿ ಹೇಳಿದೆ. ನಾಸಾದ ಕಮರ್ಷಿಯಲ್ ಲೂನಾರ್ ಪೇಲೋಡ್ ಸರ್ವೀಸಸ್ (ಸಿಎಲ್​ಪಿಎಸ್​) ಉಪಕ್ರಮದ 5 ಸೇರಿದಂತೆ ಲ್ಯಾಂಡರ್ ಒಟ್ಟು 20 ಪೇಲೋಡ್​ಗಳನ್ನು ಅಥವಾ ಸರಕುಗಳನ್ನು ಹೊತ್ತೊಯ್ದಿದೆ.

ಇದನ್ನೂ ಓದಿ :2023ರ 4ನೇ ತ್ರೈಮಾಸಿಕದಲ್ಲಿ ಸ್ಯಾಮ್​ಸಂಗ್ ಲಾಭ ಶೇ 35ರಷ್ಟು ಕುಸಿತ ನಿರೀಕ್ಷೆ

ABOUT THE AUTHOR

...view details