ಕರ್ನಾಟಕ

karnataka

By

Published : Aug 18, 2023, 2:24 PM IST

ETV Bharat / science-and-technology

ಜುಕರ್ ​- ಮಸ್ಕ್​ ಫೈಟ್​ ಮಧ್ಯೆ Instagram ಖಾತೆ​​ ಡಿಲೀಟ್​ ಮಾಡಿದ ಮಾಜಿ Twitter ಸಿಇಒ ಜಾಕ್ ಡಾರ್ಸೆ!

Instagram : ಟ್ವಿಟರ್​​ನ ಮಾಜಿ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ತಮ್ಮ ಇನ್​ಸ್ಟಾಗ್ರಾಮ್ ಅಕೌಂಟ್​ ಡಿಲೀಟ್ ಮಾಡಿದ್ದಾರೆ.

Jack Dorsey quits Instagram amid Zuckerberg-Musk social media battle
Jack Dorsey quits Instagram amid Zuckerberg-Musk social media battle

ನವದೆಹಲಿ:ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್​​ಬರ್ಗ್​ ಮತ್ತು ಎಕ್ಸ್ (ಹಿಂದಿನ ಟ್ವಿಟರ್) ಮಾಲೀಕ ಎಲೋನ್ ಮಸ್ಕ್ ನಡುವೆ ಸೋಷಿಯಲ್​ ಮೀಡಿಯಾದಲ್ಲಿ ನಡೆದಿರುವ ವಾಕ್ಸಮರದ ಮಧ್ಯೆ ಟ್ವಿಟರ್​ ಮಾಜಿ ಸಹ ಸಂಸ್ಥಾಪಕ ಮತ್ತು ಸಿಇಒ ಜಾಕ್ ಡಾರ್ಸೆ ತಮ್ಮ ಇನ್​ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​​ನಲ್ಲಿನ ಡಾರ್ಸೆ ಅವರ @jack ಹ್ಯಾಂಡಲ್ ಈಗ ಅಸ್ತಿತ್ವದಲ್ಲಿ ಇಲ್ಲ. ಸದ್ಯ ತಮ್ಮದೇ ಆದ Block ಹೆಸರಿನ ಮತ್ತೊಂದು ಪೇಮೆಂಟ್​ ಕಂಪನಿ ಪ್ಲಾಟ್​​ಫಾರ್ಮ್​​ ಆರಂಭಿಸಿರುವ ಡಾರ್ಸೆ, ತಾವು ತಮ್ಮ ಇನ್​ಸ್ಟಾ ಅಕೌಂಟ್​ ಡಿಲೀಟ್ ಮಾಡಿರುವುದನ್ನು ಖಚಿತ ಪಡಿಸಿದ್ದಾರೆ.

"ನಾನು ನನ್ನ ಇನ್​ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದೇನೆ. ಖಾತೆ ಡಿಲೀಟ್​ ಮಾಡಲು ನಾನು ಇಷ್ಟು ಸಮಯ ತೆಗೆದುಕೊಂಡಿದ್ದೇಕೆ ಎಂಬುದು ನನಗೆ ತಿಳಿಯುತ್ತಿಲ್ಲ. ಇನ್​ಸ್ಟಾದಲ್ಲಿ ಆರಂಭವಾದ ಮೊದಲ 10 ಖಾತೆಗಳ ಪೈಕಿ ನನ್ನದೂ ಒಂದಾಗಿತ್ತು ಎಂಬುದು ನೆನಪಿದೆ ಮತ್ತು ನಾನು ಕಂಪನಿಯ ಮೊದಲ ಏಂಜೆಲ್ ಹೂಡಿಕೆದಾರರಲ್ಲಿ ಒಬ್ಬನಾಗಿದ್ದೆ" ಎಂದು ಡಾರ್ಸೆ ನಾಸ್ಟರ್ (Nostr) ಎಂಬ ವಿಕೇಂದ್ರೀಕೃತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

"ಕೆವಿನ್ (ಸಿಸ್ಟ್ರೋಮ್) ಒಡಿಯೊದಲ್ಲಿ ನಮ್ಮ ಇಂಟರ್ನ್ ಆಗಿದ್ದರು. ಅದನ್ನು ಫೇಸ್​​ಬುಕ್​ಗೆ ಮಾರಾಟ ಮಾಡಿದ ನಂತರ ನಾನು ಅದನ್ನು ಬಳಸುವುದನ್ನು ನಿಲ್ಲಿಸಿದೆ. @name ಏನಾಗಲಿದೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿದೆ" ಎಂದು ಡಾರ್ಸೆ ಹೇಳಿದರು. ಸಿಸ್ಟ್ರೋಮ್ ಅವರು ಮೈಕ್ ಕ್ರೀಗರ್ ಅವರೊಂದಿಗೆ ಸೇರಿ ಇನ್​ಸ್ಟಾಗ್ರಾಮ್ ಅನ್ನು ಸಹ - ಸ್ಥಾಪಿಸಿದ್ದರು. ಅವರು ಸೆಪ್ಟೆಂಬರ್ 24, 2018 ರಂದು ಇನ್​ಸ್ಟಾಗ್ರಾಮ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೆಟಾ (ಆಗ ಫೇಸ್ಬುಕ್) 2012 ರಲ್ಲಿ ಇನ್​​ಸ್ಟಾಗ್ರಾಮ್ ಅನ್ನು 1 ಬಿಲಿಯನ್ ಡಾಲರ್​ಗೆ ಖರೀದಿಸಿತ್ತು.

ಒಡಿಯೊ ಎಂಬುದು 2005 ರಲ್ಲಿ ನೋವಾ ಗ್ಲಾಸ್ ಮತ್ತು ಇವಾನ್ ವಿಲಿಯಮ್ಸ್ ಸ್ಥಾಪಿಸಿದ ಸಂಸ್ಥೆಯಾಗಿದ್ದು, ನಂತರ ಅದು Obvious Corporation ಎಂದು ಬದಲಾವಣೆಯಾಯಿತು. ಅಲ್ಲದೇ ಇದೇ ಕಂಪನಿಯು ಟ್ವಿಟರ್​ ಆರಂಭವಾಗಲು ಕಾರಣವಾಯಿತು. ಏತನ್ಮಧ್ಯೆ, ಟ್ವಿಟರ್​ಗೆ ಪೈಪೋಟಿ ನೀಡಲು ಮೆಟಾ ತನ್ನ ಥ್ರೆಡ್ಸ್ ಆ್ಯಪ್​​ ಅನ್ನು ಆರಂಭಿಸಿದೆ. ಇದರ ಮಧ್ಯೆ ಡಾರ್ಸೆ ಬೆಂಬಲಿತ ಬ್ಲೂಸ್ಕಿ ಆ್ಯಪ್​ ತನ್ನ ಬೆಳವಣಿಗೆಗಾಗಿ 8 ಮಿಲಿಯನ್ ಡಾಲರ್ ಸಂಗ್ರಹಿಸಿದೆ ಎಂದು ಘೋಷಿಸಿದೆ.

ಜಾಕ್ ಡಾರ್ಸೆ ಪ್ರಸ್ತುತ ಪೇಮೆಂಟ್​​ ಕಂಪನಿ ಬ್ಲಾಕ್ (ಹಿಂದೆ ಸ್ಕ್ವೇರ್ ಎಂದು ಕರೆಯಲಾಗುತ್ತಿತ್ತು) ಇದರ ಸಿಇಒ ಆಗಿದ್ದಾರೆ. 2015 ರಿಂದ ನವೆಂಬರ್ 2021 ರವರೆಗೆ ಅವರು ಟ್ವಿಟರ್ ಸಿಇಒ ಆಗಿದ್ದರು. ಮೇ 2022 ರಲ್ಲಿ ಟ್ವಿಟರ್​ ಆಡಳಿತ ಮಂಡಳಿಯಿಂದ ಹೊರನಡೆದರು. ಡಾರ್ಸೆ 2006 ರಲ್ಲಿ ಇವಿ ವಿಲಿಯಮ್ಸ್, ಬಿಜ್ ಸ್ಟೋನ್ ಮತ್ತು ನೋವಾ ಗ್ಲಾಸ್ ಅವರೊಂದಿಗೆ ಟ್ವಿಟರ್ ಅನ್ನು ಸಹಸಂಸ್ಥಾಪಿಸಿದರು ಮತ್ತು 2008 ರವರೆಗೆ ಸಿಇಒ ಆಗಿದ್ದರು. ಡಾರ್ಸೆ 2015 ರಲ್ಲಿ ಮತ್ತೆ ಟ್ವಿಟರ್​ಗೆ ಮರಳಿದ್ದರು. 2016 ರಲ್ಲಿ ಡಾರ್ಸೆ ತಮ್ಮ ಟ್ವಿಟರ್ ಷೇರುಗಳಲ್ಲಿ ಮೂರನೇ ಒಂದು ಭಾಗವನ್ನು ಉದ್ಯೋಗಿಗಳಿಗೆ ಹಂಚಿದ್ದರು.

ಇದನ್ನೂ ಓದಿ :ಸರ್ಕಾರದಿಂದ Emergency Alert System ಪರೀಕ್ಷೆ: ಮೊಬೈಲ್​ಗೆ ಬರ್ತಿವೆ ಸ್ಯಾಂಪಲ್ ಮೆಸೇಜ್!

ABOUT THE AUTHOR

...view details