ನವದೆಹಲಿ:ಸುಮಾರು 400 ಮಿಲಿಯನ್ ಟ್ವಿಟರ್ ಬಳಕೆದಾರರ ಡೇಟಾ ಕದ್ದು ಡಾರ್ಕ್ ವೆಬ್ನಲ್ಲಿ ಮಾರಾಟಕ್ಕೆ ಇಟ್ಟಿರುವುದಾಗಿ ಹ್ಯಾಕರ್ ಒಬ್ಬರು ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ. ಇಸ್ರೇಲಿ ಸೈಬರ್ ಗುಪ್ತಚರ ಸಂಸ್ಥೆಯ ಹಡ್ಸನ್ ರಾಕ್ ಪ್ರಕಾರ, ಡೇಟಾಬೇಸ್ನಲ್ಲಿ ಇ - ಮೇಲ್ಗಳು ಮತ್ತು ಉನ್ನತ ವ್ಯಕ್ತಿಗಳ ಫೋನ್ ಸಂಖ್ಯೆಗಳು ಸೇರಿದಂತೆ ವಿನಾಶಕಾರಿ ಪ್ರಮಾಣದ ಮಾಹಿತಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಹಡ್ಸನ್ ರಾಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಹ್ಯಾಕ್ ಮಾಡಿದ ಡೇಟಾದ ಸೋರಿಕೆ ಬಗ್ಗೆ ನೀಡಿದ್ದ ಮಾಹಿತಿ ಹಂಚಿಕೊಂಡಿದ್ದಾರೆ. ‘ಕದ್ದ ಡೇಟಾವು ಡಬ್ಲ್ಯುಎಚ್ಒ, ಕೇಂದ್ರ ಮತ್ತು ಪ್ರಸಾರ ಸಚಿವಾಲಯದ ಮಾಹಿತಿ, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಅಮೆರಿಕನ್ ಗಾಯಕ ಚಾರ್ಲಿ ಪುತ್ ಸೇರಿದಂತೆ ಇತರರ ಮಾಹನ್ ವ್ಯಕ್ತಿಗಳ ಮಾಹಿತಿಯನ್ನು ಒಳಗೊಂಡಿದ ಎಂದು ಹೇಳಿದ್ದಾರೆ.
400 ಮಿಲಿಯನ್ ಟ್ವಿಟರ್ ಬಳಕೆದಾರರ ಡೇಟಾ ಮಾರಾಟ ಮಾಡಲು ಸಿದ್ಧನಿದ್ದೇನೆ, ಈ ಡೇಟಾ ಸಂಪೂರ್ಣವಾಗಿ ಖಾಸಗಿಯಾಗಿದೆ ಎಂದು ಹ್ಯಾಕರ್ ತನ್ನ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಟ್ವಿಟರ್ ಡೇಟಾವನ್ನು ಕದ್ದಿರುವುದಾಗಿ ಹೇಳಿಕೊಂಡಿರುವ ಹ್ಯಾಕರ್, ಮೂಲ ವರದಿಯ ಪ್ರಕಾರ ಟ್ವಿಟರ್ಗೆ ಒಪ್ಪಂದದ ಬೇಡಿಕೆ ಇಟ್ಟಿದ್ದಾನೆಂದು ತಿಳಿದು ಬಂದಿದೆ.