ನವದೆಹಲಿ:ಪ್ಲೇಸ್ಟೋರ್ ನೀತಿಗಳಿಗೆ ಸಂಬಂಧಿಸಿದಂತೆ ತನ್ನ ಪ್ರಾಬಲ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಟೆಕ್ ದೈತ್ಯ ಸಂಸ್ಥೆ ಗೂಗಲ್ 5 ದಿನಗಳ ಹಿಂದಷ್ಟೇ 1337 ಕೋಟಿ ರೂ. ದಂಡಕ್ಕೆ ಗುರಿಯಾಗಿತ್ತು. ಮತ್ತೆ ಅದೇ ತಪ್ಪನ್ನು ಪುನರಾವರ್ತನೆ ಮಾಡಿದ್ದಕ್ಕೆ ಸ್ಪರ್ಧಾ ಆಯೋಗ (Competition Commission) ಮಂಗಳವಾರ 936.44 ಕೋಟಿ ರೂ ದಂಡ ವಿಧಿಸಿದೆ.
ಆ್ಯಪ್ ಸ್ಟೋರ್ನಲ್ಲಿ ಬೇರೆ ಅಪ್ಲಿಕೇಷನ್ಗಳನ್ನು ಮೀರಿ ತನಗೆ ಬೇಕಾದ ಆ್ಯಪ್ಗಳಿಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ವ್ಯಾವಹಾರಿಕ ಅನ್ಯಾಯ ಎಂದು ಸ್ಪರ್ಧಾ ಆಯೋಗ ದಂಡ ಹಾಕಿ ಎಚ್ಚರಿಕೆ ನೀಡಿತ್ತು. ವಾರದೊಳಗೆ 2ನೇ ಸಲ ಟೆಕ್ ದೈತ್ಯ ದಂಡಕ್ಕೆ ಗುರಿಯಾಗಿದೆ.