ಬೆಂಗಳೂರು:ಭಾರತ ದೇಶ ಸೇರಿದಂತೆ ಪ್ರಪಂಚವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಚಂದ್ರಯಾನ-3 ನೌಕೆಯ 'ವಿಕ್ರಮ್' ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾದಿಂದ ಚಂದ್ರನ ದೂರದ ಪ್ರದೇಶದ ಚಿತ್ರಗಳನ್ನು ಸೆರೆಹಿಡಿದಿದೆ. 'ವಿಕ್ರಮ್'ನಿಂದ ಇಸ್ರೋ ಸಂಸ್ಥೆಗೆ ಬಂದು ತಲುಪಿರುವ ಚಂದ್ರನ ಈ ಛಾಯಾಚಿತ್ರಗಳು ವಿಜ್ಞಾನಿಗಳನ್ನು ಬೆರಗುಗೊಳಿಸಿವೆ.
ಚಂದ್ರನ ಪರಿಶೋಧನೆಯತ್ತ ಮಹತ್ವದ ದಾಪುಗಾಲು ಇರಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ವಿಕ್ರಮ್ ಲ್ಯಾಂಡರ್, ಗಮನಸೆಳೆಯುವಂತಹ ಹೊಸದಾಗಿ ಸೆರೆಹಿಡಿಯಲಾದ ಚಂದ್ರನ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದೆ. ಈ ಚಿತ್ರಗಳನ್ನು ಚಂದ್ರನ ಮೇಲ್ಮೈಯಲ್ಲಿ ಸ್ಪರ್ಶಿಸುವ ನಿರೀಕ್ಷಿತ ಕ್ಷಣಕ್ಕೆ ಕೇವಲ ಎರಡು ದಿನಗಳ ಮೊದಲು ಅನಾವರಣವಾಗಿದೆ. ಇದದಿಂದ ಜಾಗತಿಕ ವೈಜ್ಞಾನಿಕ ಸಮುದಾಯದಲ್ಲಿ ಮತ್ತಷ್ಟು ಉತ್ಸಾಹ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾ (LHDAC) ಮೂಲಕ ಪಡೆದ ಚಿತ್ರಗಳು, ಚಂದ್ರನ ದೂರದ ಪ್ರದೇಶದ ಎದ್ದುಕಾಣುವ ಚಿತ್ರಣವನ್ನು ಒದಗಿಸುತ್ತವೆ. ISRO ಅಡಿ ಬಾಹ್ಯಾಕಾಶ ಅಪ್ಲಿಕೇಶನ್‌ಗಳ ಕೇಂದ್ರದಿಂದ (ಎಸ್ಎಸಿ) ಅಭಿವೃದ್ಧಿಪಡಿಸಲಾಗಿದೆ. ಎಲ್ಎಚ್ಡಿಎಸಿ ವಿಕ್ರಮ್ ಲ್ಯಾಂಡರ್ ಇಳಿಯುವಿಕೆಯ ಹಂತದಲ್ಲಿ ಅಪಾಯಕಾರಿ ಬಂಡೆಗಳು ಅಥವಾ ಆಳವಾದ ಬಿರುಕುಗಳಿಲ್ಲದ ಸುರಕ್ಷಿತ ಲ್ಯಾಂಡಿಂಗ್ ಸೈಟ್ ಅನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ತಾಂತ್ರಿಕ ಕೌಶಲ್ಯವನ್ನು ಎತ್ತಿ ತೋರಿಸುವ ಈ ಮಾಹಿತಿಯನ್ನು ಇಸ್ರೋ ಸಂಸ್ಥೆ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
''ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾ (LHDAC)ಯಿಂದ ಸೆರೆಹಿಡಿಯಲಾದ ಚಂದ್ರನ ದೂರದ ಪ್ರದೇಶದ ಚಿತ್ರಗಳು ಇಲ್ಲಿವೆ. ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುವ ಈ ಕ್ಯಾಮೆರಾ - ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಪ್ರದೇಶದಲ್ಲಿ ಇಳಿಸಲು ಇಸ್ರೋನಿಂದ ಎಸ್ಎಸಿ ಅನ್ನು ಅಭಿವೃದ್ಧಿಪಡಿಸಲಾಗಿದೆ''ಎಂದು ಸಂಸ್ಥೆ ಟ್ವೀಟ್ ಮಾಡಿದೆ.