ಕರ್ನಾಟಕ

karnataka

ETV Bharat / science-and-technology

ವಾಟ್ಸ್​​​ಆ್ಯಪ್​​ ಬಳಕೆದಾರರೇ ಎಚ್ಚರ.. ಎಚ್ಚರ.. ಜಿಬಿ ವಾಟ್ಸ್​ಆ್ಯಪ್​ ​ ನಿಮ್ಮ ಮೇಲೆ ಕಣ್ಣಿಟ್ಟಿದೆ - WhatsApp ಕ್ಲೋನ್ ಆ್ಯಪ್​

ನೀವು ವಾಟ್ಸ್​​ಆ್ಯಪ್​​ ಬಳಸುವ ಮುನ್ನ ಎಚ್ಚರ ವಹಿಸಿ. ಜಿಬಿ ವಾಟ್ಸ್​​ಆ್ಯಪ್​​ ಮೂಲಕ ನಮ್ಮ ದೇಶದ ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಯುತ್ತಿದೆ ಎಂದು ESET ವರದಿ ಎಚ್ಚರಿಕೆ ನೀಡುತ್ತಿದೆ.

Beware of Clone WhatsApp  ESET report warns that a WhatsApp clone app  WhatsApp clone app called GB WhatsApp  ಜಿಬಿ ವಾಟ್ಸಾಪ್​ ನಿಮ್ಮ ಮೇಲೆ ಕಣ್ಣಿಟ್ಟಿದೆ  ವಾಟ್ಸಾಪ್​ ಬಳಕೆದಾರರೇ ಎಚ್ಚರ  ನಮ್ಮ ದೇಶದ ಬಳಕೆದಾರರ ಮೇಲೆ ಬೇಹುಗಾರಿಕೆ  ESET ವರದಿ ಎಚ್ಚರಿಕೆ  WhatsApp ಕ್ಲೋನ್ ಆ್ಯಪ್​ Google Play Store
ಜಿಬಿ ವಾಟ್ಸಾಪ್​ ನಿಮ್ಮ ಮೇಲೆ ಕಣ್ಣಿಟ್ಟಿದೆ

By

Published : Oct 14, 2022, 2:34 PM IST

WhatsApp ಬಳಸುತ್ತಿರುವಿರಾ? ಆದರೆ ಇದು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಿ. ಏಕೆಂದರೆ 'GB WhatsApp' ಎಂಬ WhatsApp ಕ್ಲೋನ್ ಆ್ಯಪ್​ ನಮ್ಮ ದೇಶದ ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ESET ವರದಿ ಎಚ್ಚರಿಸಿದೆ.

ಈ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಥರ್ಡ್-ಪಾರ್ಟಿ ಸ್ಟೋರ್‌ಗಳಲ್ಲಿ ಲಭ್ಯವಿಲ್ಲದಿದ್ದರೂ, ಇದು ವಿವಿಧ ವೆಬ್‌ಸೈಟ್‌ಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಜಿಬಿ ವಾಟ್ಸ್​​ಆ್ಯಪ್​ ಮೂಲ ವಾಟ್ಸ್​​ಆ್ಯಪ್​ನಲ್ಲಿರುವ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ಕೆಲವು ಹೆಚ್ಚುವರಿ ಸೌಲಭ್ಯಗಳೂ ಇವೆ. ಇದು ಮಾಲ್‌ವೇರ್ ಫೈಲ್‌ಗಳೊಂದಿಗೆ ಫೋನ್‌ನಲ್ಲಿ ಕಣ್ಣಿಡುತ್ತದೆ. ಅದು ನಮಗೆ ತಕ್ಷಣ ತಿಳಿಯುವುದಿಲ್ಲ.

ಜಿಬಿ ವಾಟ್ಸ್​​ಆ್ಯಪ್​ ನಿಧಾನವಾಗಿ ಫೋನ್ ದೈನಂದಿನ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಅಂತಹ ಸುರಕ್ಷಿತವಲ್ಲದ ಅಪ್ಲಿಕೇಶನ್‌ಗಳ ಬಳಕೆದಾರರ ಖಾತೆಗಳನ್ನು WhatsApp ತಾತ್ಕಾಲಿಕವಾಗಿ ನಿಷೇಧಿಸಿದೆ. ನಿಷೇಧ ಬಳಿಕವೂ ನೀವು ವಾಟ್ಸ್​​ಆ್ಯಪ್​​ ಬಳಸುವುದನ್ನು ಮುಂದುವರಿಸಿದರೆ, ನೀವು WhatsApp ಬಳಸುವುದನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ಕ್ಲೋನ್ ವಾಟ್ಸಾಪ್ ಪ್ರಕರಣಗಳು ನಮ್ಮ ದೇಶ ಸೇರಿದಂತೆ ಈಜಿಪ್ಟ್, ಬ್ರೆಜಿಲ್ ಮತ್ತು ಪೆರುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ನಕಲಿ ಅಪ್ಲಿಕೇಶನ್‌ಗಳಿಂದ ಪ್ರಭಾವಿತವಾಗದಿರಲು ಏನು ಮಾಡಬೇಕು?

  • WhatsApp ಅಪ್ಲಿಕೇಶನ್ ಮತ್ತು ಅಪ್​ಡೇಟ್​ನ್ನು Google Play Store ನಿಂದ ಮಾಡಬೇಕು. ಅಪರಿಚಿತ ಥರ್ಡ್​ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ ಡೌನ್​ಲೋಡ್​ ಮತ್ತು ಅಪ್​ಡೇಟ್​ ಮಾಡಿಕೊಳ್ಳಬೇಡಿ.
  • ವಾಟ್ಸ್​​ಆ್ಯಪ್​ ಅಪ್ಲಿಕೇಶನ್‌ಗೆ ಸಂಬಂಧಿಸಿದ ಮಾಹಿತಿಯನ್ನು ಒಮ್ಮೆ ಪರಿಶೀಲಿಸಬೇಕು. ಇದು ದುರುದ್ದೇಶಪೂರಿತ ಅಥವಾ ನಕಲಿ ಎಂದು ತೋರುತ್ತಿದ್ದರೆ ತಕ್ಷಣ ಅದನ್ನು ಅನ್‌ಇನ್‌ಸ್ಟಾಲ್ ಮಾಡಿ.
  • ಫೋನ್‌ನಲ್ಲಿ ಭದ್ರತಾ ಸ್ಥಿತಿಯನ್ನು ಪರಿಶೀಲಿಸಿ. ಯಾವುದೇ ಅನಧಿಕೃತ ಆಂಟಿವೈರಸ್ ಡೌನ್​ಲೋಡ್​ ಆಗಿದೇಯಾ ಎಂಬುದ ಪರಿಶೀಲಿಸಿ. ಅಂತಹ ವೈರಸ್​ಗಳು ಕಂಡು ಬಂದ್ರೆ ಕೂಡಲೇ ನಿಮ್ಮ ಮೊಬೈಲ್​ನ್ನು ಆಂಟಿವೈರಸ್​ ಅಪ್ಲಿಕೇಶ್​ನಿಂದ ತೆಗೆದು ಹಾಕಿ. ಹೀಗೆ ನೀವು ಬಳಸುತ್ತಿರುವ ಥರ್ಡ್​ ಪಾರ್ಟಿ ಅಪ್ಲಿಕೇಶನ್​ ಬಗ್ಗೆ ಒಮ್ಮೆ ಎಚ್ಚರ ವಹಿಸುವುದು ಸೂಕ್ತ.

ABOUT THE AUTHOR

...view details