ವಾಷಿಂಗ್ಟನ್ :ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆಯಾದ ಆ್ಯಪಲ್ ಇತ್ತೀಚೆಗೆ IOS 16 ಆಪರೇಟಿಂಗ್ ಸಿಸ್ಟಮ್ನ್ನು ಬಿಡುಗಡೆ ಮಾಡಿದೆ. ಈ ಅಪ್ಡೇಟ್ನಲ್ಲಿ ಗ್ರಾಹಕರಿಗೆ ಪ್ರಿಯವಾಗುವ ಕೆಲವು ಹೊಸ ಫೀಚರ್ಗಳನ್ನು ತಂದಿದೆ. ವಾಟ್ಸಪ್ ಐಫೋನ್ ಅಪ್ಡೇಟ್ನಲ್ಲಿ ನೀಡಿರುವ ಮೆಸ್ಸೇಜ್ ಎಡಿಟ್ ಅವಕಾಶವನ್ನು ಐಮೆಸ್ಸೇಜ್ನಲ್ಲೂ ಅಭಿವೃದ್ಧಿಪಡಿಸಿದೆ.
ಮೆಸೆಂಜಿಂಗ್ ಆ್ಯಪ್ನಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಪ್ನ ರೀತಿಯ ಫೀಚರನ್ನು ಅಪ್ಡೇಟ್ನಲ್ಲಿ ತಂದು ಗ್ರಾಹಕ ಸ್ನೇಹಿಯಾಗಿ ಮಾಡುವ ಪ್ರಯತ್ನ ಆ್ಯಪಲ್ ಸಂಸ್ಥೆ ಮಾಡುತ್ತಿದೆ. ಹೊಸ ಐಎಸ್ಓ 16ರಲ್ಲಿ ಲಾಕ್ ಸ್ಕ್ರೀನ್ಗೆ ಹೊಸಾ ವಿಂಡೊಅಡ್ಜೆಸ್ಟ್(widgets), ಐಮೆಸೆಜ್ನಲ್ಲಿ ಕಳಿಸಿದ ಸಂದೇಶ ಎಡಿಟ್ ಮಾಡುವ ಆಯ್ಕೆ, ಹೊಸ ಕೀಬೋರ್ಡ್ ಹ್ಯಾಪ್ಟಿಕ್ಸ್, ಹೊಸ ಹೋಮ್ ಅಪ್ಲಿಕೇಶನ್ ಮತ್ತು ಇನ್ನು ಕೆಲವು ಅಪ್ಡೇಟ್ಗಳನ್ನು ನೀಡಿದೆ.
ಐಮೆಸ್ಸೇಜ್ನಲ್ಲಿ ಕಳುಹಿಸಿದ ಸಂದೇಶವನ್ನು 15 ನಿಮಿಷಗಳ ಒಳಗೆ ಎಡಿಟ್ ಮಾಡುವ ಮತ್ತು ಕಳುಹಿಸಿದ ಎರಡು ನಿಮಿಷದ ಒಳಗೆ ಅದನ್ನು ಹಿಂಪಡೆಯುವ(undo) ಆಯ್ಕೆ ಸೇರಿಸಲಾಗಿದೆ. ಆಡಿಯೋ ಸಂದೇಶಗಳನ್ನು ಫಾರ್ವರ್ಡ್ ಮಾಡುವ ಮತ್ತು ರಿವೈಂಡ್ ಮಾಡಿ ಕೇಳುವ ಅವಕಾಶ ಹೊಸಾ ಅಪ್ಡೇಟ್ನಲ್ಲಿ ಇರಲಿದೆ. ಈ ಹೊಸ ಅಪ್ಡೇಟ್ ಇತ್ತೀಚೆಗೆ ಬಿಡುಗಡೆಯಾದ ಆ್ಯಪಲ್ 14 ಸೀರಿಸ್ ಮೊಬೈಲ್ಗಳಲ್ಲಿ ಡೀಪಾಲ್ಟ್ ಆಗಿ ಸೇರ್ಪಡೆಯಾಗಿದ್ದು ಅಪ್ಡೇಟ್ ಮಾಡುವ ಅಗತ್ಯ ಇರುವುದಿಲ್ಲ.