ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ):ಜನಪ್ರಿಯ ಮೊಬೈಲ್ ತಯಾರಿಕಾ ಕಂಪನಿಯಾದ ಆ್ಯಪಲ್ ತನ್ನ ಹಳೆ ಮಾಡೆಲ್ಗಳಿಗೆ OS ನವೀಕರಣಗಳನ್ನು ಬಿಡುಗಡೆಗೊಳಿಸಿದೆ. ಇದರಿಂದ ಆ್ಯಪಲ್ ಸಾಧನಾ ಬಳಕೆದಾರರು ತಮ್ಮ ಹಳೆಯ ಮೊಬೈಲ್ ಅಥವಾ ಐಪ್ಯಾಡ್ ನಿಂದಲೇ ಲಭ್ಯವಿರುವ ಹೊಸ ಅಪ್ಡೇಟ್ಗಳನ್ನು ಆನಂದಿಸಿಬಹುದಾಗಿದೆ.
ಆ್ಯಪಲ್ ಅಂತರಿಕ ವರದಿಯ ಪ್ರಕಾರ, ಆ್ಯಪಲ್ ಬಿಡುಗಡೆ ಮಾಡಿರುವ ಹಳೆ ಆವೃತ್ತಿ ಅಪ್ಡೇಟ್ಸ್ಗಳೆಂದರೆ, iOS 12.5.7, iOS 15.7.3, ಐಪ್ಯಾಡ್ OS 15.7.3, ಮ್ಯಾಕ್ ಒಎಸ್ ಬಿಗ್ ಸುರ್ 11.7.3 ಮತ್ತು ಮ್ಯಾಕ್ ಒಎಸ್ ಮೊಂಟೆರೇ 12.6.3 ಮತ್ತು ಇತರೆ ಹಳೆಯ ಸಾಧನಗಳಿಗೂ ಸಹ ಅಪ್ಡೇಟ್ಸ್ಗಳು ಇದೆ ಎಂದು ವರದಿ ಮಾಡಿದೆ. ವಿಶೇಷವಾಗಿ ಗಮನಿಬೇಕಾದ ವಿಷಯ ಎಂದರೆ, ಈ ಅಪ್ಡೇಟ್ಗಳು ಹಳೆಯ ಆ್ಯಪಲ್ ಸಾಧನಗಳಿಗೆ ಮಾತ್ರ ಬಿಡುಗಡೆಗೊಳಿಸಿದ್ದು, ಇತ್ತೀಚಿಗೆ ಬಿಡುಗಡೆಗೊಂಡ ಹೊಸ ಆವೃತ್ತಿಗಳನ್ನು ಅಪ್ಡೇಟ್ ಮಾಡಲು ಸಾಧ್ಯವಿಲ್ಲ. ನಿರೀಕ್ಷೆಯಂತೆ OS (ಅಪರೇಟಿಂಗ್ ಸಿಸ್ಟಮ್) ನವೀಕರಿಸುವುದರಿಂದ ಭದ್ರತಾ ಪ್ಯಾಚ್ಗಳು ಇನ್ನಷ್ಟು ಬಲಶಾಲಿಗೊಳ್ಳುತ್ತದೆ ಮತ್ತು ಸಾಧನಗಳ ಮೇಲೆ ಪರಿಣಾಮ ಬೀರುವ ದೋಷಗಳನ್ನು ನಿವಾರಣೆ ಮಾಡುತ್ತದೆ.
ಇದನ್ನೂ ಓದಿ:ಅಂಧರಿಗೆ ಶಾಪಿಂಗ್ ವೇಳೆ ಕುಳಿತುಕೊಳ್ಳಲು ಜಾಗ ಹುಡುಕುವ, ಗಿರಾಣಿ ವಸ್ತು ಹುಡುಕುವ ಸ್ಮಾರ್ಟ್ ವಾಕಿಂಗ್ ಸ್ಟಿಕ್ ಅಭಿವೃದ್ಧಿ
ಗಮನಾರ್ಹವಾಗಿ, 2013 ಸಪ್ಟೆಂಬರ್ನಲ್ಲಿ ಬಿಡುಗಡೆಯಾದ ಐಫೋನ್ 5 ಎಸ್, ಇದು ಹಳೆಯ ಸಾಧನವಗಿದ್ದರು ಇತ್ತೀಚಿನ ಅಪ್ಡೇಟ್ ಆದ iOS 12.5.7 ಅನ್ನು ಬೆಂಬಲಿಸುತ್ತದೆ. ಅಂದರೆ, ಒಂಬತ್ತು ವರ್ಷಗಳ ನಂತರವು ಆ್ಯಪಲ್ ತನ್ನ ಹಳೆಯ ಸಾಧನಗಳಿಗೆ ಅಪ್ಡೇಟ್ಸ್ಗಳನ್ನು ಕೊಡುತ್ತಿದೆ. ಮ್ಯಾಕ್ಬುಕ್ಗಳಿಗೆ ಸಂಬಂಧಿಸಿದಂತೆ, ಮ್ಯಾಕ್ ಒಎಸ್ ಬಿಗ್ ಶ್ಯೂರ್ ಇದು ಇತ್ತೀಚಿಗೆ ನೀಡಲಾದ ಹೊಸ ನವೀಕರಣ, ಈ ಹೊಸ ಅಪ್ಡೇಟ್ ಅನ್ನು ಬೆಂಬಲಿಸುವ ಹಳೆಯ ಸಾಧನಗಳೆಂದರೆ ಮ್ಯಾಕ್ ಬುಕ್ ಏರ್ ಮತ್ತು ಮ್ಯಾಕ್ ಬುಕ್ ಪ್ರೊ, ಇವುಗಳನ್ನು 2013ರಲ್ಲಿ ಪ್ರಾರಂಭಿಸಲಾಯಿತು.
ಟೆಕ್ ದೈತ್ಯ ಆ್ಯಪಲ್ ಕೇವಲ ಹಳೆ ಸಾಧನಗಳಿಗೆ ಮಾತ್ರವಲ್ಲದೆ, ಹೊಸ ಸಾಧನಗಳಿಗೂ ಹೊಸ ಫೀಚರ್ ಒಳಗೊಂಡಿರುವ ಅಪ್ಡೇಟ್ಗಳನ್ನು ಬಿಡುಗಡೆ ಮಾಡಿದೆ, ಆ್ಯಪಲ್ iOS 16.3, ಐಪ್ಯಾಡ್ ಒಎಸ್ 16.3, ಆ್ಯಪಲ್ ವ್ಯಾಚ್ ಒಎಸ್ 9.3 ಮತ್ತು ಮ್ಯಾಕೋಸ್ ವೆಂಚುರಾ 13 ಈ ಸಾಧನಗಳಿಗೆ ಹೊಸದಾಗಿ ನವೀಕರಣಗಳನ್ನು ಆ್ಯಪಲ್ ಬಿಡುಗಡೆ ಮಾಡಿದೆ. ಈ ಒಂದು ಹೊಸ ಅಪ್ಡೇಟ್ನಲ್ಲಿ ಹೊಸ ವೈಶಿಷ್ಟ್ಯಗಳು ಮತ್ತು ಹಲವಾರು ದೋಷಗಳನ್ನು ನಿವಾರಿಸಲು ಸೆಕ್ಯುರಿಟಿ ಪ್ಯಾಚ್ಗಳನ್ನು ಅಳವಡಿಸಲಾಗಿದೆ.
2024ರ ನಂತರ ಆ್ಯಪಲ್ನ ಎಲ್ಲಾ ಸಾಧನಗಳಲ್ಲಿ ಮೈಕ್ರೊ ಎಲ್ಇಡಿ ಡಿಸ್ಪ್ಲೇ ಅಳವಡಿಕೆ : ಬ್ಲೂಮ್ಬರ್ಗ್ನ ಮಾರ್ಕ್ ಗುರ್ಮನ್ ಪ್ರಕಾರ, ಟೆಕ್ ದೈತ್ಯ ಕೆಲವು ವರ್ಷಗಳಿಂದ ಮೈಕ್ರೋ ಎಲ್ಇಡಿ ಡಿಸ್ಪ್ಲೇ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ ಮತ್ತು 2024ರ ಕೊನೆಯಲ್ಲಿ ತನ್ನ ವಾಚ್ ಅಲ್ಟ್ರಾದಲ್ಲಿ ಈ ಡಿಸ್ಪ್ಲೇಯನ್ನು ಬಳಸುವ ನಿರೀಕ್ಷೆಯಿದೆ ಎಂದು ಆ್ಯಪಲ್ನ ಆಂತರಿಕ ವರದಿ ತಿಳಿಸಿದೆ.
ಇದನ್ನೂ ಓದಿ:ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಕಠಿಣ ಮಾರ್ಗಸೂಚಿ..ನಿಯಮ ಮೀರಿದರೆ ದಂಡದ ಶಿಕ್ಷೆ