ಕರ್ನಾಟಕ

karnataka

ETV Bharat / science-and-technology

ಅಂಟಾರ್ಟಿಕಾದ ಬೃಹತ್ ಮಂಜುಗಡ್ಡೆಗೆ 'ಗ್ಲಾಸ್ಗೋ ಗ್ಲೇಸಿಯರ್' ನಾಮಕರಣ - ಗೆಟ್ಜ್ ಬೇಸಿನ್

ವಿಶ್ವಸಂಸ್ಥೆ ಹವಾಮಾನ ಬದಲಾವಣೆಯ ಸಮಾವೇಶ COP-26 ಬ್ರಿಟನ್​ನ ಗ್ಲಾಸ್ಗೋದಲ್ಲಿ ನಡೆಯಲಿದ್ದು, ಅಂಟಾರ್ಟಿಕಾದಲ್ಲಿರುವ ಬೃಹತ್ ಮಂಜುಗಡ್ಡೆಗೆ ಗ್ಲಾಸ್ಗೋ ಗ್ಲೇಸಿಯರ್ ಎಂದು ನಾಮಕರಣ ಮಾಡಲಾಗಿದೆ.

Antarctica gets a Glasgow Glacier ahead of climate summit
ಅಂಟಾರ್ಟಿಕಾದ ಬೃಹತ್ ಮಂಜುಗಡ್ಡೆಗೆ ಗ್ಲಾಸ್ಗೋ ಗ್ಲೇಸಿಯರ್ ಎಂದು ನಾಮಕರಣ

By

Published : Oct 31, 2021, 10:53 AM IST

ರೋಮ್(ಇಟಲಿ):ದಕ್ಷಿಣ ಧ್ರುವದ ಅಂಟಾರ್ಟಿಕಾ ಖಂಡದ ಬೃಹತ್ ಪ್ರಮಾಣದ ಮಂಜುಗಡ್ಡೆಗೆ ಬ್ರಿಟನ್ ದೇಶ ಗ್ಲಾಸ್ಗೋ ಗ್ಲೇಸಿಯರ್ ಎಂದು ಹೆಸರಿಟ್ಟಿದೆ. ಭಾನುವಾರ ಸ್ಕಾಂಟ್ಲೆಂಡ್​ನಲ್ಲಿ ಆರಂಭವಾಗಲಿರುವ ಹವಾಮಾನ ಸಂಬಂಧಿ ವಿಶ್ವಸಂಸ್ಥೆಯ COP-26 ಸಮಾವೇಶದ ಅಂಗವಾಗಿ ಈ ಹೆಸರಿಡಲಾಗಿದೆ.

ಈ ಸಮಾವೇಶದಲ್ಲಿ ಸುಮಾರು 120ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರು ಭಾಗವಹಿಸಲಿದ್ದಾರೆ. ತಾಪಮಾನ ಹೆಚ್ಚಳ ಹಾಗೂ ಇತರ ಪರಿಸರ ಸಂಬಂಧಿ ವಿಚಾರಗಳ ಬಗ್ಗೆ ಸಮಾವೇಶದಲ್ಲಿ ಗಂಭೀರ ಚರ್ಚೆ ನಡೆಸಲಾಗುತ್ತದೆ.

ಇಂಗ್ಲೆಂಡ್​ನ ಲೀಡ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಂಟಾರ್ಟಿಕಾದ ಗೆಟ್ಜ್ ಬೇಸಿನ್​ನಲ್ಲಿ (Getz Basin) ಹಿಮನದಿಗಳ ಸರಣಿಯನ್ನು ಪತ್ತೆ ಮಾಡಿದ್ದು, ಹವಾಮಾನ ಬದಲಾವಣೆಯಿಂದಾಗಿ ಅವುಗಳು ಸಮುದ್ರದ ಕಡೆಗೆ 1994ರಿಂದ 2018ರವರೆಗೆ ಶೇಕಡಾ 25ರಷ್ಟು ಚಲಿಸಿವೆ ಎಂದು ಪತ್ತೆ ಮಾಡಲಾಗಿದೆ.

ಇದರಿಂದಾಗ 315 ಗಿಗಾಟನ್​ಗಳಷ್ಟು (ಒಂದು ಗಿಗಾಟನ್​​ಗೆ ನೂರು ಕೋಟಿ ಟನ್ ಸಮ) ಮಂಜುಗಡ್ಡೆ ನೀರಾಗಿ ಸಮುದ್ರ ಪಾಲಾಗುತ್ತದೆ. ಇದರಿಂದ ಸಮುದ್ರ ಮಟ್ಟ ಏರಿಕೆಯಾಗುತ್ತದೆ ಎಂದು ವಿಜ್ಞಾನಿಗಳ ತಂಡ ಆತಂಕ ವ್ಯಕ್ತಪಡಿಸಿತ್ತು.

ಬ್ರಿಟಿಷ್ ಅಂಟಾರ್ಟಿಕ್ ಪ್ರದೇಶದಲ್ಲಿ ಈ ಹಿಮನದಿಗಳಿದ್ದು, ರಿಯೋ, ಕ್ಯೂಟೋ, ಪ್ಯಾರಿಸ್ ಸೇರಿದಂತೆ ಹವಾಮಾನ ಸಮಾವೇಶಗಳು, ಒಪ್ಪಂದಗಳ ಹೆಸರುಗಳನ್ನು ಇಡಲಾಗುತ್ತಿದೆ. ಅದೇ ರೀತಿ ಈ ಬಾರಿ ಗ್ಲಾಸ್ಗೋದಲ್ಲಿ COP-26 ಸಮ್ಮೇಳನ ನಡೆಯಲಿದ್ದು, ಹಿಮನದಿಗೆ ಗ್ಲಾಸ್ಗೋ ಗ್ಲೇಸಿಯರ್ ಎಂದು ಹೆಸರಿಡಲಾಗಿದೆ.

ಭಾರತ, ಆಸ್ಟ್ರೇಲಿಯಾ ಮತ್ತು ಚೀನಾ ಸೇರಿದಂತೆ ಕಾರ್ಬನ್ ಅನ್ನು ಅತಿ ಹೆಚ್ಚಾಗಿ ಹೊರಸೂಸುವ ರಾಷ್ಟ್ರಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಕಾರ್ಬನ್​ ಹೊರಸೂಸುವಿಕೆಯನ್ನು ಕಡಿತಗೊಳಿಸುವಂತೆ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ:ಮಾನವ ದೇಹದಲ್ಲಿ ಕೆಲಸ ಮಾಡುತ್ತಿದೆ ಹಂದಿಯ ಕಿಡ್ನಿ! ವೈದ್ಯಲೋಕದಲ್ಲೊಂದು ಅಚ್ಚರಿಯ ಶಸ್ತ್ರಚಿಕಿತ್ಸೆ

ABOUT THE AUTHOR

...view details